


ನೆಲ್ಯಾಡಿ: ಕುಡ್ತಾಜೆ ಗ್ರಾಮದ ಕೂಡುಕಟ್ಟಿನ ಶ್ರೀ ಉಳ್ಳಾಕ್ಲು ರುದ್ರ ಚಾಮುಂಡಿ, ಶ್ರೀ ರಾಜನ್ ದೈವ ಹಾಗೂ ಪರಿವಾರ ದೈವಗಳ ಕ್ಷೇತ್ರವಾದ ಕುಡ್ತಾಜೆ ಯಲ್ಲಿ ಫೆ.9 ಮತ್ತು 10ರಂದು ನಡೆಯಲಿರುವ ವೈದಿಕ ಕಾರ್ಯಕ್ರಮಗಳು ಹಾಗೂ ದೈವಗಳ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಶ್ರೀಧರ ನೂಜಿನ್ನಾಯ ಹಾರ್ಪಳ ಇವರ ಪೌರೋಹಿತ್ಯದಲ್ಲಿ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಅನುವಂಶೀಯ ಆಡಳಿತ ಮೊಕ್ತೇಸರರಾದ ಗಣೇಶ್ ಗೌಡ ಪುಚ್ಚೇರಿ ಅವರು ಅಧಿಕೃತವಾಗಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕುಡ್ತಾಜೆ ಗ್ರಾಮ ದೈವಗಳ ಸೇವಾ ಟ್ರಸ್ಟ್ ಅಧ್ಯಕ್ಷ ಶೇಖರಗೌಡ ತೋಟ, ನಾಲ್ಕು ಮನೆತನದವರಾದ ಗಣೇಶ್ ಗೌಡ ಪುಚ್ಚೇರಿ, ಹೊನ್ನಪ್ಪ ಗೌಡ ತೋಟ, ಡೀಕಯ್ಯ ಗೌಡ ಸರೋಲಿಕಾನ, ಜನಾರ್ಧನ ಗೌಡ ಪಿಲವೂರು ಉಪಸ್ಥಿತರಿದ್ದರು. ಟ್ರಸ್ಟ್‌ನ ಉಪಾಧ್ಯಕ್ಷ ಸದಾನಂದ ಕೋಡಿಜಾಲು, ಕಾರ್ಯದರ್ಶಿ ಸದಾನಂದ ಗೌಡ ಕೊರಡೇಲೂ, ಜಯಗಣೇಶ್ ಗೌಡ ನೆಕ್ರಾಜೆ, ಕೋಶಾಧಿಕಾರಿ ವಿಶ್ವನಾಥ ಇಚ್ಚೂರು, ಸದಸ್ಯರಾದ ನಳಿನಾಕ್ಷಿ ಕುಡ್ತಾಜೆ, ಸುಂದರ ಗೌಡ ತಿಮರಡ್ಡ ಉಪಸ್ಥಿತರಿದ್ದರು.
ಗ್ರಾಮ ಪ್ರಮುಖರಾದ ತಿಮ್ಮಪ್ಪ ಗೌಡ ಇಚ್ಚೂರು, ಧರ್ಣಪ್ಪ ಗೌಡ ಕುಡ್ತಾಜೆ, ಪೂವಪ್ಪ ಗೌಡ ಇಚ್ಚೂರು, ಆನಂದ ಗೌಡ ಪಿಲವೂರು, ಕೇಶವ ಗೌಡ ಕುಡ್ತಾಜೆ, ಲಕ್ಷ್ಮಣ ಗೌಡ ಇಚ್ಚೂರು, ರಾಧಾಕೃಷ್ಣ ಪಿಲವೂರು, ಕಮಲಾಕ್ಷ ಪುಚ್ಚೇರಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಫೆ.9 ಹಾಗೂ 10ರಂದು ನಡೆಯಲಿರುವ ವೈದಿಕ ವಿಧಿವಿಧಾನಗಳು ಮತ್ತು ದೈವಗಳ ವಾರ್ಷಿಕ ನೇಮೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿಕೊಂಡರು.





