


ಕೊಕ್ಕಡ: ಹಿಂದೂ ಸಂಗಮ ಆಯೋಜನ ಸಮಿತಿ ಉಜಿರೆ, ಕೊಕ್ಕಡ ಮಂಡಲ ಹಾಗೂ ಕೊಕ್ಕಡ–ಪಟ್ರಮೆ ಗ್ರಾಮಗಳ ಸಂಯುಕ್ತ ಆಶ್ರಯದಲ್ಲಿ ಜ.25ರಂದು ಸಂಜೆ 3.00 ಗಂಟೆಗೆ ಕೊಕ್ಕಡದ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಸಂಕ್ರಾಂತಿ ಮೈದಾನದಲ್ಲಿ ಜರಗಲಿರುವ “ಹಿಂದೂ ಸಂಗಮ 2026” ಬೃಹತ್ ಶೋಭಾಯಾತ್ರೆಯ ಆಮಂತ್ರಣ ಪತ್ರಿಕೆಯನ್ನು ಜ.16ರಂದು ಕೊಕ್ಕಡದ ಶ್ರೀ ರಾಮ ಸೇವಾ ಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಉಜಿರೆ ಇದರ ಉಪಾಧ್ಯಕ್ಷ ಡಾ.ತಾರಾ ಗಣೇಶ್, ತಾಲೂಕು ಸಮಿತಿ ಸಹ ಕಾರ್ಯದರ್ಶಿ ಬಾಲಕೃಷ್ಣ ನೈಮಿಷ, ತಾಲೂಕು ಸಮಿತಿ ಸದಸ್ಯ ಪ್ರಶಾಂತ್ ಶೆಟ್ಟಿ ಪಟ್ಟೂರು, ಹಿಂದೂ ಸಂಗಮ ಕೊಕ್ಕಡ ಮಂಡಲ ಇದರ ಸಂಯೋಜಕರಾದ ರುಕ್ಮಯ್ಯ ಮಡಿವಾಳ, ಹಿರಿಯರಾದ ಕುಶಾಲಪ್ಪ ಗೌಡ ಪೂವಾಜೆ, ತಿಲಕ್ ಆನಾರು ಹಾಗೂ ಕೊಕ್ಕಡ ಮಂಡಲ ಹಿಂದೂ ಸಂಗಮದ ವಿವಿಧ ಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು.






