


ನೆಲ್ಯಾಡಿ: ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಫೆ.1ರಂದು ನಡೆಯಲಿರುವ ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಜ.14ರಂದು ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಕುತ್ರಾಡಿ ಹಾರ್ಪಳದಲ್ಲಿ ಭಕ್ತಿಭಾವಪೂರ್ಣವಾಗಿ ಜರುಗಿತು.
ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವನ್ನು ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಕುತ್ರಾಡಿ ಹಾರ್ಪಳ ಟ್ರಸ್ಟ್‌ನ ಅಧ್ಯಕ್ಷ ಸುಂದರ ಗೌಡ ಅತ್ರಿಜಾಲು ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಉಪಾಧ್ಯಕ್ಷ ಶಿವರಾಮ ಗೌಡ ಮಕ್ಕಿಗದ್ದೆ, ಕೋಶಾಧಿಕಾರಿ ಸೀತಾರಾಮ ಗೌಡ ಕಾನಮನೆ, ಕಾರ್ಯದರ್ಶಿ ಸುರೇಶ್ ಪಡಿಪಂಡ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರಾದ ಬಾಲಕೃಷ್ಣ ಗೌಡ ಹಾರ್ಪಳ, ಶೀನಪ್ಪ ಗೌಡ ಬರಮೇಲು, ಅನಿಲ್ ರೈ ಹಾರ್ಪಳ, ಯಾದವ ಶೆಟ್ಟಿ ರಾಮನಗರ, ಗಣೇಶ್ ಪುಳಿತ್ತಡಿ ಸೇರಿದಂತೆ ಅನೇಕ ಗಣ್ಯರು, ಶಾಸ್ತಾರ ಭಜನಾ ತಂಡ, ರಾಮನಗರ ಫ್ರೆಂಡ್ಸ್, ಟೀಮ್ ಸಿಂಧೂರ ನೆಲ್ಯಾಡಿ, ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಊರಿನ ಭಗವತ್ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಹಿಂದೂ ಸಂಗಮವು ಸಮಾಜದಲ್ಲಿ ಧಾರ್ಮಿಕ ಚೇತನೆಯನ್ನು ಜಾಗೃತಗೊಳಿಸುವುದರೊಂದಿಗೆ, ಸಂಸ್ಕೃತಿ, ಪರಂಪರೆ ಮತ್ತು ಏಕತೆಯನ್ನು ಬಲಪಡಿಸುವ ಮಹತ್ವದ ವೇದಿಕೆಯಾಗಿದೆ ಎಂದರು. ಫೆ.1ರಂದು ನಡೆಯುವ ಹಿಂದೂ ಸಂಗಮ ಕಾರ್ಯಕ್ರಮವು ಶಾಂತಿ, ಸೌಹಾರ್ದತೆ ಮತ್ತು ಸಂಘಟನೆಯ ಸಂಕೇತವಾಗಿ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಹಿಂದೂ ಸಂಗಮ ಕಾರ್ಯಕ್ರಮಕ್ಕೆ ನೆಲ್ಯಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದರು.






