ಪರಿಶಿಷ್ಟ ಜಾತಿ-ಪಂಗಡಕ್ಕೆ ನೀರಿನ ಟ್ಯಾಂಕ್ ಮತ್ತು ವಿಕಲಚೇತನರಿಗೆ ವೀಲ್ ಚೇರ್ ವಿತರಣೆ

ಶೇರ್ ಮಾಡಿ

ಪಂಚಾಯತಿ ನಿಂದ ನಿರಂತರ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ-ಹರೀಶ್ ಪೂಂಜಾ

ಕೊಕ್ಕಡ: ಅರಸಿನಮಕ್ಕಿ ಪಂಚಾಯತಿ ಸ್ವಂತ ನಿಧಿಯಿಂದ ಪರಿಶಿಷ್ಟ ಜಾತಿ-ಪಂಗಡಕ್ಕೆ ನೀರಿನ ಟ್ಯಾಂಕ್ ಮತ್ತು ವಿಕಲಚೇತನರಿಗೆ ವೀಲ್ ಚೇರ್ ವಿತರಣೆ ಕಾರ್ಯಕ್ರಮ ಶಾಸಕ ಹರೀಶ್ ಪೂಂಜ ಸಮ್ಮುಖದಲ್ಲಿ ಶನಿವಾರದಂದು ಹತ್ಯಡ್ಕ ಸೊಸೈಟಿ ಸಭಾಂಗಣದಲ್ಲಿ ನಡೆಯಿತು.

ವೇದಿಕೆಯಲ್ಲಿ ಪಂಚಾಯತಿ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್, ಪಂಚಾಯತ್ ಸದಸ್ಯರಾದ, ಪ್ರೇಮಚಂದ್ರ, ಜನಾರ್ಧನ, ಲಾವಣ್ಯ, ಪುಷ್ಪಾ ಉಪಸ್ಥಿತರಿದ್ದರು.

ಪಂಚಾಯತಿ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್ ಸ್ವಾಗತಿಸಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ವಂದಿಸಿದರು. ಪಂಚಾಯತಿ ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಸಹಕರಿಸಿದರು.

Leave a Reply

error: Content is protected !!