




ನೆಲ್ಯಾಡಿ: ಕೌಕ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1 ಹಾಗೂ 2ನೇ ವಾರ್ಡ್ನ ಪರಿಶಿಷ್ಟ ಜಾತಿಯ ಅರ್ಹ ಫಲಾನುಭವಿಗಳಿಗೆ ನಿಧಿ–1ರ ಶೇಕಡ 25ರ ಅನುದಾನದಲ್ಲಿ ಖರೀದಿಸಲಾದ ನೀರಿನ ಟ್ಯಾಂಕ್ಗಳನ್ನು ಮಂಗಳವಾರ ಗ್ರಾಮ ಪಂಚಾಯತಿಯಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಗೌಡ ಫಲಾನುಭವಿಗಳಿಗೆ ಟ್ಯಾಂಕ್ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಬಾಣಜಾಲು, ಸದಸ್ಯರಾದ ಮಹೇಶ್ ಕುಮಾರ್, ಸುಧಾಕರ, ಭವಾನಿ, ಜನಾರ್ದನ, ಪುಷ್ಪ, ದೇವಕಿ ಉಪಸ್ಥಿತರಿದ್ದರು.





