ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ನಿಧನ

ಶೇರ್ ಮಾಡಿ

ಧರ್ಮಸ್ಥಳ: ಧರ್ಮಸ್ಥಳ ಪಾಂಗಳ ತಿರುವಿನಲ್ಲಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿ ಧರ್ಮಸ್ಥಳ ಗ್ರಾಮದ‌ ಪಾಂಗಳ ನಿವಾಸಿ ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ನಾಟಿವೈದ್ಯರು ಆಗಿರುವ ಕರಿಯಪ್ಪ ಗೌಡ(72) ಎಂಬವರಾಗಿದ್ದಾರೆ.

ಬೈಕ್ ಸವಾರ ಉಜಿರೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದು ಪಾಂಗಳ ತಿರುವಿನಲ್ಲಿ ಬೈಕ್ ಅನ್ನು ರಸ್ತೆಯ ಬಲಬದಿಗೆ ತೆಗೆದುಕೊಳ್ಳುವ ವೇಳೆ ವೇಗವಾಗಿ ಬಂದ ಬಸ್ ಬೈಕಿಗೆ ಡಿಕ್ಕಿಹೊಡೆದು ಅದನ್ನು ಎಳೆಯುತ್ತಾ ರಸ್ತೆಯ ಪೂರ್ಣ ಬಲಬದಿಗೆ ಮುಂದೆ ಬಂದಿದೆ ಇದೇ ವೇಳೆ ಧರ್ಮಸ್ಥಳ ದಿಂದ ಉಜಿರೆ ಕಡೆಗೆ ಬರುತ್ತಿದ್ದ ಕಾರಿಗೆ ಬಸ್ ಡಿಕ್ಕಿಹೊಡೆದಿದೆ. ಕಾರು ಹಾಗೂ ಬಸ್ ನಡುವೆ ಸಿಲುಕಿದ ಬೈಕ್ ನುಜ್ಜು ಗುಜ್ಜಾಗಿದ್ದು ಬೈಕ್ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದರುಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಫೆ.19 ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ

Leave a Reply

error: Content is protected !!