ರಾಜ್ಯ ಬಜೆಟ್ 2026: ಘೋಷಣೆಯಾದ ಹೊಸ ಕಾರ್ಯಕ್ರಮಗಳೇನು?

ಶೇರ್ ಮಾಡಿ
ರಾಜ್ಯ ಬಜೆಟ್ 2026: ಘೋಷಣೆಯಾದ ಹೊಸ ಕಾರ್ಯಕ್ರಮಗಳೇನು?

ಸಿಎಂ ಸಿದ್ದರಾಮಯ್ಯ (Siddaramaiah) ಇಂದು ದಾಖಲೆಯ 17ನೇ ಬಜೆಟ್ ಮಂಡಿಸುತ್ತಿದ್ದಾರೆ. ಒಟ್ಟು 4.48 ಲಕ್ಷ ಕೋಟಿ ರೂ.ಯ ಈ ಬಜೆಟ್‌ನಲ್ಲಿ 7 ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ.

ಬಜೆಟ್‌ನಲ್ಲಿ ಘೋಷಿಸಲಾದ ಹೊಸ ಕಾರ್ಯಕ್ರಮಗಳು ಯಾವುವು?
1.ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ: ಕೃಷಿ ಸಂಸ್ಕರಣೆ, ಕೃಷಿ ತ್ಯಾಜ್ಯಗಳ ಮರುಬಳಕೆ, ಮಾರುಕಟ್ಟೆ ಸಂಪರ್ಕ ಬಲಪಡಿಸಲು ಹೊಸ ಕಾರ್ಯಕ್ರಮ ಘೋಷಿಸಿದ್ದಾರೆ. ರೈತರ ಸ್ಥಿರ ಮತ್ತು ಹೆಚ್ಚುವರಿ ಆದಾಯ ಮೂಲ ರಚಿಸಲು ಈ ಯೋಜನೆ ಪೂರಕವಾಗಿದೆ. ಈ ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೆ ಬರಲಿದೆ.

2.ವಸುಧಾಮೃತ ಕಾರ್ಯಕ್ರಮ: ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಮುಂದಿನ ಮೂರು ವರ್ಷಗಳಲ್ಲಿ ಈ ಕಾರ್ಯಕ್ರಮ ಜಾರಿಯಾಗಲಿದೆ.

3.ಸಸ್ಯ ಸಂಜೀವಿನಿ ಯೋಜನೆ: ಪರಿಸರ ಸ್ನೇಹಿ ಜೈವಿಕ ಪೀಡನಾಶಕ, ಜೈವಿಕ ಕೀಟನಾಶಕಗಳ ಜೊತೆ ಇತರೆ ಸುರಕ್ಷಿತ ನಿರ್ವಹಣಾ ಕ್ರಮಗಳಿಗಾಗಿ ಈ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಜಾರಿ ಮಾಡುವ ಉದ್ದೇಶವಿದೆ.

4.ಫಲಧಾರೆ ಕಾರ್ಯಕ್ರಮ: ಜಾನುವಾರುಗಳ ಸಂತಾನೋತ್ಪತ್ತಿ ಸಮಸ್ಯೆ ನಿವಾರಣೆಗೆ ಈ ಕಾರ್ಯಕ್ರಮದಡಿ ಶಿಬಿರಗಳ ಆಯೋಜನೆ ಮಾಡಲಾಗುವುದು. 5 ಕೋಟಿ ರೂ. ವೆಚ್ಚದಲ್ಲಿ 1000 ಗ್ರಾಮ ಪಂಚಾಯತಿಗಳಲ್ಲಿ “ಫಲಧಾರೆ” ಎಂಬ ಹೆಸರಿನಲ್ಲಿ ಶಿಬಿರ ನಡೆಸಲಾಗುವುದು.

5.ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆ: 40 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 11 ಪಾಲಿಟೆಕ್ನಿಕ್ ಕಾಲೇಜುಗಳನ್ನು ಮಾದರಿ ಸಂಸ್ಥೆಗಳಾಗಿ ಅಭಿವೃದ್ಧಿ ಮಾಡುವ ಉದ್ದೇಶದಿಂದ 2,500 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು.

6.ಕೇರಳ ಮಾದರಿಯ ಗಂಭೀರ ಕಾಯಿಲೆಗಳಿರುವ ರೋಗಿಗಳಿಗೆ ಗೃಹಾಧಾರಿತ ಉಪಶಮನ ಆರೈಕೆ: ಮನೆಗಳಲ್ಲೇ ಚಿಕಿತ್ಸಾ ಸೇವೆ, ಗಂಭೀರ ದೀರ್ಘಕಾಲೀನ, ಮಾರಣಾಂತಿಕ ಕಾಯಿಲೆಗಳಿರುವ ರೋಗಿಗಳಿಗೆ ಈ ಯೋಜನೆಯಡಿ ಆರೈಕೆ ಮಾಡಲಾಗುವುದು. Palliym India ಸಂಸ್ಥೆಯ ಸಹಯೋಗದೊಂದಿಗೆ ಯೋಜನೆಯನ್ನು ಜಾರಿಗೊಳಿಸಲಾಗುವುದು

7.ಮುಖ್ಯಮಂತ್ರಿ ಸೌರ ಕೃಷಿ ಯೋಜನೆ: ಈ ಯೋಜನೆಯಡಿ ಕೆಪಿಟಿಸಿಎಲ್ ಉಪಕೇಂದ್ರಗಳಲ್ಲಿ ಸೌರ ವಿದ್ಯುತ್ ಸ್ಥಾವರಗಳ ನಿರ್ಮಾಣ ಮಾಡಲಾಗುವುದು. ಅಂದಾಜು 10,500 ಕೋಟಿ ರೂ. ವೆಚ್ಚದಲ್ಲಿ 300 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರಗಳ ಆರಂಭಗೊಳಿಸಲು ನಿರ್ಧರಿಸಲಾಗಿದೆ.

Leave a Reply

error: Content is protected !!