






ನೆಲ್ಯಾಡಿ: ಗ್ರಾಮದ ಹೊಸವಕ್ಲು ನಿವಾಸಿ, ಕೃಷಿಕ ದಿವಂಗತ ಶಂಕರ ಗೌಡ ಅವರ ಧರ್ಮಪತ್ನಿ ಸುಂದರಿ (94) ಅವರು ವಯೋಸಹಜ ಅನಾರೋಗ್ಯದಿಂದ ಮೇ.15ರಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಸಹೃದಯಿ ಹಾಗೂ ಧಾರ್ಮಿಕ ಸ್ವಭಾವದವರಾಗಿದ್ದ ಸುಂದರಿ ಅವರು ಗ್ರಾಮದಲ್ಲಿ ಎಲ್ಲರ ಆತ್ಮೀಯತೆಯನ್ನು ಗಳಿಸಿಕೊಂಡಿದ್ದರು. ಮೃತರು 5 ಮಂದಿ ಪುತ್ರಿಯರು, 2 ಮಂದಿ ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


