ಗೋಳಿತ್ತೊಟ್ಟು ವಲಯ ಭಜನಾ ಪರಿಷತ್ ಸಭೆ : ಲಿತಿನ್ ಕುಮಾರ್ ನೂತನ ಅಧ್ಯಕ್ಷರಾಗಿ ಆಯ್ಕೆ

ಶೇರ್ ಮಾಡಿ

 

ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ವಲಯದ ಭಜನಾ ಪರಿಷತ್ ಸಭೆಯು ಗೋಳಿತ್ತೊಟ್ಟು ವಲಯ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಭಜನಾ ಪರಿಷತ್ ಸಂಘಟನೆಯ ಬಲವರ್ಧನೆ, ಭಜನಾ ಮಂದಿರಗಳ ಚಟುವಟಿಕೆಗಳ ಅಭಿವೃದ್ಧಿ ಹಾಗೂ ಮುಂದಿನ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಿತು.

ಸಭೆಯಲ್ಲಿ ತಾಲ್ಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ, ಗೌರವ ಸಲಹೆಗಾರ ಸತ್ಯನಾರಾಯಣ, ವಲಯದ ಅಧ್ಯಕ್ಷ ಬಾಲಕೃಷ್ಣ, ವಲಯ ಭಜನಾ ಪರಿಷತ್‌ನ ವಿವಿಧ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕಿ ಸುಜಾತ, ಸೇವಾ ಪ್ರತಿನಿಧಿಯವರು ಸಹ ಭಾಗವಹಿಸಿದ್ದರು.

ಇದೇ ವೇಳೆ ಶಿವಾರು ರಾಜರಾಜೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಮನೋಹರ ಗೌಡ ಹಾಗೂ ಕಾರ್ಯದರ್ಶಿ ವೇದಾವತಿ, ಗೋಳಿತ್ತೊಟ್ಟು ಸಿದ್ದಿವಿನಾಯಕ ಭಜನಾ ಪರಿಷತ್ ಅಧ್ಯಕ್ಷ ನಾಗೇಶ್ ಶೆಟ್ಟಿ, ಗುಣಲು ಶಿವಗಿರಿ ಭಜನಾ ಮಂಡಳಿಯ ಅಧ್ಯಕ್ಷ ಲಿತಿನ್ ಕುಮಾರ್, ಸಬಳೂರು ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷ ಬಿಳಿಯಪ್ಪ ಗೌಡ, ಮನಡ್ಕ ಶ್ರೀದೇವಿ ಭಜನಾ ಮಂಡಳಿಯ ಅಧ್ಯಕ್ಷ ಶಿವರಾಮ, ಅಲಂತಾಯ ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷ ಜನಾರ್ಧನ ಪೂಜಾರಿ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ವಲಯ ಭಜನಾ ಪರಿಷತ್‌ನ ನೂತನ ಅಧ್ಯಕ್ಷರಾಗಿ ಲಿತಿನ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.

 

Leave a Reply

error: Content is protected !!