ಬಸ್ ಪಾಸ್‌ ಗಾಗಿ ಕೆಎಸ್‌ಆರ್‌ಟಿಸಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ : ನಾಳೆಯಿಂದ(ಮೇ.29) ಶುರು

ಶೇರ್ ಮಾಡಿ

 

ಕೆಎಸ್‌ಆರ್‌ಟಿಸಿ ಪಾಸ್ ಗೆ ಅರ್ಜಿ : ನಾಳೆಯಿಂದ(ಮೇ.29) ಶುರು

ನೆಲ್ಯಾಡಿ: 2026-27ನೇ ಸಾಲಿನ ರಿಯಾಯಿತಿ ದರದ ಬಸ್ ಪಾಸ್‌ ಗಾಗಿ ಕೆಎಸ್‌ಆರ್‌ಟಿಸಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ ಮೇ.29 ರಿಂದ ಸೇವಾ ಸಿಂಧು ಪೋರ್ಟಲ್ (https://sevasindhuservices.karnataka.gov.in) ಮೂಲಕ ಆನ್‌ಲೈನ್‌ನಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ 30 ರೂ.ಸೇವಾ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅರ್ಜಿ ಅನುಮೋದನೆಯಾದ ಬಳಿಕ ಎಸ್‌ಎಂಎಸ್ ಮೂಲಕ ಕೌಂಟರ್ ಮಾಹಿತಿ ದೊರೆಯಲಿದ್ದು, ನಿಗದಿತ ಶುಲ್ಕ ಪಾವತಿಸಿ ಜೂನ್ 1ರಿಂದ ಪಾಸ್ ಪಡೆಯಬಹುದು. ಶಕ್ತಿ ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣವಿದ್ದರೂ, ನೆರೆ ರಾಜ್ಯಗಳಲ್ಲಿ ವ್ಯಾಸಂಗ ಮಾಡುವವರು ಮತ್ತು ಗಡಿಭಾಗದ ವಿದ್ಯಾರ್ಥಿನಿಯರು ಪಾಸ್ ಪಡೆಯುವುದು ಕಡ್ಡಾಯವಾಗಿದೆ.

ಪಾಸ್ ಶುಲ್ಕದ ವಿವರಗಳು ಹೀಗಿವೆ: 10 ತಿಂಗಳ ಪ್ರಾಥಮಿಕ ಶಾಲಾ ಪಾಸ್‌ಗೆ ಸಾಮಾನ್ಯ ಮತ್ತು ಪ್ರ.ಜಾ/ಪಂಗಡದ ವಿದ್ಯಾರ್ಥಿಗಳಿಗೆ 150 ರೂ. ನಿಗದಿಪಡಿಸಲಾಗಿದೆ. ಪ್ರೌಢಶಾಲಾ ಬಾಲಕರಿಗೆ 750 ರೂ. (ಪ.ಜಾ/ಪಂಗಡ 150 ರೂ.) ಹಾಗೂ ಬಾಲಕಿಯರಿಗೆ 550 ರೂ. (ಪ.ಜಾ/ಪಂಗಡ 150 ರೂ.) ಶುಲ್ಕವಿದೆ. ಕಾಲೇಜು / ಡಿಪ್ಲೋಮೋ ವಿದ್ಯಾರ್ಥಿಗಳಿಗೆ 1050 ರೂ.(ಪ.ಜಾ/ಪಂಗಡ 150 ರೂ.), 12 ತಿಂಗಳ ಐಟಿಐ ಪಾಸ್‌ಗೆ 1310 ರೂ. (ಪ.ಜಾ/ಪಂಗಡ 160 ರೂ.), ವೃತ್ತಿಪರ ಕೋರ್ಸ್‌ಗಳಿಗೆ 1550 ರೂ.(ಪ.ಜಾ/ಪಂಗಡ 150 ರೂ.) ಹಾಗೂ ಸಂಜೆ ಕಾಲೇಜು / ಪಿ ಎಚ್ ಡಿ ವಿದ್ಯಾರ್ಥಿಗಳಿಗೆ 1350ರೂ (ಪ.ಜಾ/ಪಂಗಡ 150 ರೂ.) ನಿಗದಿಪಡಿಸಲಾಗಿದೆ.

 

Leave a Reply

error: Content is protected !!