ಜೂನ್ 24ರಂದು ಕೊಕ್ಕಡ ಜೋಡುಮಾರ್ಗದಲ್ಲಿ ‘ಗೋಲ್ಡನ್ ಗ್ರೇಟ್ ಫ್ಯಾಮಿಲಿ ರೆಸ್ಟೋರೆಂಟ್’ ಶುಭಾರಂಭ

ಶೇರ್ ಮಾಡಿ

ಸಸ್ಯಹಾರಿ–ಮಾಂಸಾಹಾರಿ ಖಾದ್ಯಗಳ ರುಚಿ ಸವಿಯಲು ಅವಕಾಶ; ಕ್ಯಾಟರಿಂಗ್ ಸೇವೆಯೂ ಲಭ್ಯ

 

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಜಂಕ್ಷನ್(ಜೋಡುಮಾರ್ಗ) ಸಮೀಪದ ಶ್ರೀ ವೈದ್ಯನಾಥೇಶ್ವರ ರೆಸಿಡೆನ್ಸಿ ಲಾಡ್ಜ್ ಬಳಿಯಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ‘ಗೋಲ್ಡನ್ ಗ್ರೇಟ್ ಫ್ಯಾಮಿಲಿ ರೆಸ್ಟೋರೆಂಟ್’ ಜೂನ್ 24ರಂದು ಶುಭಾರಂಭಗೊಳ್ಳಲಿದ್ದು, ಸಸ್ಯಹಾರಿ ಹಾಗೂ ಮಾಂಸಾಹಾರಿ ಖಾದ್ಯ ಪ್ರಿಯರಿಗೆ ಮತ್ತೊಂದು ಆಕರ್ಷಕ ಭೋಜನ ತಾಣವಾಗಿ ಹೊರಹೊಮ್ಮಲಿದೆ.

ಅನುಭವಿ ಮಾಲಕತ್ವದಡಿ ಕಾರ್ಯಾರಂಭಗೊಳ್ಳುತ್ತಿರುವ ಈ ರೆಸ್ಟೋರೆಂಟ್‌ನಲ್ಲಿ ನುರಿತ ಹಾಗೂ ಅನುಭವಿ ಬಾಣಸಿಗರಿಂದ ಶುಚಿ, ರುಚಿಕರ ಹಾಗೂ ಆರೋಗ್ಯಕರ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತಿದೆ. ಗ್ರಾಹಕರ ಅಭಿರುಚಿ ಮತ್ತು ಬೇಡಿಕೆಗೆ ಅನುಗುಣವಾಗಿ ವಿವಿಧ ಬಗೆಯ ಸಸ್ಯಹಾರಿ ಹಾಗೂ ಮಾಂಸಾಹಾರಿ ಖಾದ್ಯಗಳನ್ನು ಗುಣಮಟ್ಟದ ಮಾನದಂಡಗಳನ್ನು ಪಾಲಿಸಿಕೊಂಡು ಸಿದ್ಧಪಡಿಸಲಾಗುವುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ಕುಟುಂಬ ಸಮೇತ ಆಗಮಿಸುವ ಗ್ರಾಹಕರಿಗೆ ಆರಾಮದಾಯಕ ಹಾಗೂ ಸ್ವಚ್ಛ ವಾತಾವರಣದಲ್ಲಿ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ರೆಸ್ಟೋರೆಂಟ್ ಅನ್ನು ಸಜ್ಜುಗೊಳಿಸಲಾಗಿದೆ. ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಭೋಜನಕ್ಕೆ ವೈವಿಧ್ಯಮಯ ಮೆನುಗಳನ್ನು ಪರಿಚಯಿಸಲಾಗಿದ್ದು, ಎಲ್ಲ ವರ್ಗದ ಗ್ರಾಹಕರಿಗೂ ಕೈಗೆಟುಕುವ ದರದಲ್ಲಿ ಆಹಾರ ಲಭ್ಯವಾಗಲಿದೆ.

ರೆಸ್ಟೋರೆಂಟ್‌ನ ಮತ್ತೊಂದು ವಿಶೇಷತೆ ಎಂದರೆ ವಿಶಾಲ ವಾಹನ ಪಾರ್ಕಿಂಗ್ ವ್ಯವಸ್ಥೆ. ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಸುಲಭ ನಿಲುಗಡೆಗಾಗಿ ಪ್ರತ್ಯೇಕ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು, ಕುಟುಂಬ ಸಮೇತ ಹಾಗೂ ದೂರದ ಊರುಗಳಿಂದ ಬರುವ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ.

ಇದರ ಜೊತೆಗೆ ಮದುವೆ, ನಿಶ್ಚಿತಾರ್ಥ, ಗೃಹಪ್ರವೇಶ, ಧಾರ್ಮಿಕ ಕಾರ್ಯಕ್ರಮ, ಸಾರ್ವಜನಿಕ ಸಮಾರಂಭ ಸೇರಿದಂತೆ ವಿವಿಧ ಶುಭ ಕಾರ್ಯಗಳಿಗೆ ಅಗತ್ಯವಿರುವ ಕ್ಯಾಟರಿಂಗ್ ಸೇವೆಯನ್ನೂ ಸಂಸ್ಥೆ ಒದಗಿಸಲಿದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಗುಣಮಟ್ಟದ, ಶುಚಿಯಾದ ಹಾಗೂ ಆರೋಗ್ಯಕರ ಆಹಾರವನ್ನು ಮಿತದರದಲ್ಲಿ ತಯಾರಿಸಿ ನೀಡುವುದು ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ ಎಂದು ಮಾಲಕರು ತಿಳಿಸಿದ್ದಾರೆ.

ಕೊಕ್ಕಡ ಹಾಗೂ ಸುತ್ತಮುತ್ತಲಿನ ಭಾಗದ ಆಹಾರ ಪ್ರಿಯರಿಗೆ ಹೊಸ ರುಚಿಯ ಅನುಭವ ನೀಡುವ ಸಂಕಲ್ಪದೊಂದಿಗೆ ಆರಂಭಗೊಳ್ಳುತ್ತಿರುವ ಈ ನೂತನ ರೆಸ್ಟೋರೆಂಟ್‌ಗೆ ಸಾರ್ವಜನಿಕರು ಭೇಟಿ ನೀಡಿ ಪ್ರೋತ್ಸಾಹಿಸುವಂತೆ ಸಂಸ್ಥೆ ಮನವಿ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 76248 40330
📞 98677 85465.

 

Leave a Reply

error: Content is protected !!