ಜೆಸಿಐ ಉಡುಪಿ ಸಿಟಿ ವತಿಯಿಂದ ವಿಶ್ವ ಪರಿಸರ ದಿನ ಆಚರಣೆ

ಶೇರ್ ಮಾಡಿ

ನೇಸರ ಜೂ.08: ಕೆಮ್ಮಣ್ಣು ಕಾರ್ಮೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗು ಜೆಸಿಐ ಉಡುಪಿ ಸಿಟಿಯ ಜೊತೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಮಾರಾಟ ವಿಭಾಗ ಹಿರಿಯ ಮಾರುಕಟ್ಟೆ ಪ್ರಬಂಧಕರಾಗಿರುವ ಜೆಸಿಐ ಇಂಡಿಯಾದ ವಲಯ 15ರ ವಲಯ ಸಂಯೋಜಕ ಉದಯ್ ನಾಯ್ಕ ಮಾತನಾಡಿ ಶಾಲೆಯ ಮಕ್ಕಳಿಗೆ ಪ್ರಾರಂಭದಲ್ಲಿಯೇ ಪರಿಸರ ಮತ್ತು ವನಮಹೋತ್ಸವದ ಅರ್ಥವನ್ನು ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಉದ್ಯಾವರ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್ ಕಾಲೇಜಿನ ಪ್ರೊಫೆಸರ್ ಜೆಸಿಐ ಉಡುಪಿ ಸಿಟಿಯ ಅಧ್ಯಕ್ಷ ಡಾ.ವಿಜಯ್ ನೆಗಳೂರ್ ಮಾತನಾಡಿ ಈ ಶಾಲೆ ಮಕ್ಕಳಿಗೆ ಉತ್ತಮ ಕಾರ್ಯಕ್ರಮ ನೀಡುವಲ್ಲಿ ಮತ್ತು ಎಲ್ಲರೂ ಭಾಗವಹಿಸುವಿಕೆ ಖುಷಿಕೊಟ್ಟಿದೆ ಒಳ್ಳೆಯ ಕಾರ್ಯಕ್ರಮ ನಡೆಸುವಲ್ಲಿ ನಮಗೆ ಜವಾಬ್ದಾರಿ ಹೆಚ್ಚಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು
.

ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಎಂ.ಸಿಲ್ವಿಯಾನ್ ಎ.ಸಿ ಮಾತನಾಡಿ ಜೆಸಿಐ ಉಡುಪಿ ಸಿಟಿಯು ವಿದ್ಯಾರ್ಥಿಗಳಿಗೆ ಅಗತ್ಯವಾಗು ವಂತಹ ಶೈಕ್ಷಣಿಕ ರೂಪಕ ಕಾರ್ಯಕ್ರಮಗಳನ್ನು ನೀಡುವಂತದ್ದು ನಮ್ಮ ವಿದ್ಯಾಸಂಸ್ಥೆಗೆ ಹೆಮ್ಮೆ ತರುವಂತದ್ದು, ಅರ್ಥಪೂರ್ಣ ವಾಗಿದೆ ಎಂದು ತಿಳಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಪರಿಸನೃತ್ಯರೂಪಕವನ್ನು ಮತ್ತು ಎಲ್ ಇ ಡಿ ಪ್ರೊಜೆಕ್ಟರ್ ಮುಖಾಂತರ ಪರಿಸರಕ್ಕೆ ಅರ್ಥವನ್ನು ನೀಡುವಂತಹ ಚಿತ್ರ ರೂಪಕ ವಿಡಿಯೋವನ್ನು ಪ್ರದರ್ಶಿಸಲಾಯಿತು . ಶಾಲಾ ಆವರಣದಲ್ಲಿ 25 ಹಣ್ಣಿನ, ಬೇವಿನ, ಔಷದಿ ಸಸ್ಯಗಳನ್ನು ನೆಡಲಾಯಿತು. ಶಾಲೆಗೆ ಅಗತ್ಯವಾಗಿರುವ ಸಸ್ಯಗಳನ್ನು ವಿತರಿಸಿದ ಜೆಸಿಐ ವಲಯ ನಿರ್ದೇಶಕ ರಾಘವೇಂದ್ರ ಪ್ರಭು ಕರ್ವಾಲ್ ಅವರಿಗೆ ಶುಭ ಹಾರೈಸಿದರು. ಶಾಲಾ ಸಿಬ್ಬಂದಿ ಹಾಗೂ ಶಾಲೆಯ ಮಕ್ಕಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸದರು.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

error: Content is protected !!