ಮಾಯೊದ ಬೊಲ್ಪು – ಸ್ವಾಮಿ ಕೊರಗಜ್ಜನ ಸುಗಿಪು” – ಬಿಡುಗಡೆ

ನೇಸರ 17: ಶ್ರೀ ಅಂಬಾಕ್ಷೇತ್ರ ರಾಮಕುಂಜದಲ್ಲಿ, ಕೇಶವ ನೆಲ್ಯಾಡಿ ಸಾಹಿತ್ಯದಲ್ಲಿ ತುಳುನಾಡಿನ ಆರಾಧನ ಶಕ್ತಿ ಸ್ವಾಮಿ ಕೊರಗಜ್ಜನನ್ನು ಸ್ತುತಿಸುವ ತುಳುನಾಡು ಮ್ಯೂಸಿಕ್ ವರ್ಲ್ಡ್ ಅರ್ಪಿಸುತ್ತಿರುವ “ಮಾಯೊದ ಬೊಲ್ಪು – ಸ್ವಾಮಿ ಕೊರಗಜ್ಜನ ಸುಗಿಪು” ಎಂಬ ಧ್ವನಿಸುರುಳಿಯ ವೀಡಿಯೋ ಆಲ್ಬಮ್‌ನನ್ನು ಬಿಡುಗಡೆಗೊಳಿಸಲಾಯಿತು, ಸ್ವಾಮಿ ಕೊರಗಜ್ಜನ ಸಾನಿಧ್ಯದಲ್ಲಿ ದೀಪ ಬೆಳಗಿ ಪ್ರಾರ್ಥನೆ ನಡೆಸಿದ ನಂತರ ಗಣ್ಯರ ಸಮ್ಮುಖದಲ್ಲಿ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಲಾಯಿತು, ಸಪ್ತಸ್ವರ ಗಾನಯಾನ ಬೆಳ್ತಂಗಡಿ ತಂಡದ ನಿರೂಪಕ ಶ್ರೀ ಮೋಹನ ಬೆಳ್ತಂಗಡಿ ಉದ್ಘಾಟಿಸಿ ಶುಭಹಾರೈಸಿದರು, ಸಾಹಿತಿ ಕೇಶವ ನೆಲ್ಯಾಡಿ ನನ್ನ ಕಿರು ಪ್ರಯತ್ನಕ್ಕೆ ಅಜ್ಜನ ಆರ್ಶೀವಾದ ಮತ್ತು ವೀಕ್ಷಕರ ಸಹಕಾರವಿರಬೇಕು ಎಂದು ಕೋರಿದರು ಮತ್ತು ತಂಡದ ಪರಿಚಯವನ್ನು ನೀಡಿದರು, ಈ ಸಂದರ್ಭದಲ್ಲಿ ಅಂಬಾಕ್ಷೇತ್ರದ ವತಿಯಿಂದ ರಘು ಕಡಬರವರು ಸಾಹಿತಿ ಕೇಶವ ನೆಲ್ಯಾಡಿ ಮತ್ತು ಗಾಯಕ ಭರತ್ ನೆಕ್ಕರಾಜೆ ವೀರಕಂಬ ರವರನ್ನು ಸನ್ಮಾನಿಸಲಾಯಿತು, ನಂತರ ಕುಸಲ್ದ್ ಕಿಚ್ಚ ತಂಡದವರಿದ ನೇಸರ ಸುದ್ದಿವಾಹಿನಿಯ ಸುಧೀರ್ ಕುಮಾರ್ ಕೆ ಎಸ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು, ಅತಿಥಿಗಳಿಗೆ ಮತ್ತು ಸಹಕರಿಸಿದ ಎಲ್ಲರಿಗೂ ಶಾಲು ಹೊದಿಸಿ ಗೌರವಿಸಲಾಯಿತು. ಕ್ಷೇತ್ರದ ಹಿರಿಯರಾದ ಮಾಯಿಲಪ್ಪ, ಸಂತೋಷ ಆಚಾರ್ಯ, ರಾಜೇಶ್ ಆಚಾರ್ಯ, ಸಂಕೇತ್, ಲೋಕೇಶ್ ಕಲ್ಲಾಪು, ಗೋಪಾಲ ಅಂಬಾ, ದಿನೇಶ್ ಕಡಬ, ಮೋಕ್ಷಿತ್ ಅಂಬಾ, ಸುಧಾಕರ್ ಪುತ್ತೂರು, ವಿನಯ್ ಕುಂಬ್ರ, ಪವಿತ್ರಅಂಚನ್ ರಾಮಕುಂಜ, , ನೇಸರ ಸುದ್ದಿ ವಾಹಿನಿಯ ಪ್ರಶಾಂತ್ ಸಿ. ಎಚ್ ಮುಂತಾದವರು ಉಪಸ್ಥಿತರಿದ್ದರು ,ಮಾಯದ ಬೊಲ್ಪು ಕೊರಗಜ್ಜ ಸುಗಿಪು ಕೇಶವ ನೆಲ್ಯಾಡಿ ಸಾಹಿತ್ಯ ಬರೆದು, ಭರತ್ ನೆಕ್ಕರಾಜೆ ವೀರಕಂಬ ಹಾಡಿದ್ದಾರೆ, ಶಿತಿನ್ ಪದವು ಛಾಯಾಗ್ರಾಹಣದಲ್ಲಿ, ರತನ್ ಕೊಟ್ಯಾನ್ ಸಂಕಲನ ಮಾಡಿದ್ದಾರೆ

error: Content is protected !!