







ಉಪ್ಪಿನಂಗಡಿ: ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯವರ ಕಚೇರಿಯಲ್ಲಿ ಕಳೆದ ಒಂಬತ್ತು ವರ್ಷಗಳಿಂದ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಷಾಕಿರಣ. ಬಿ. ಅವರು ಮಂಗಳೂರು ವೃತ್ತ ಅರಣ್ಯ ಕಚೇರಿಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯವರ ಕಚೇರಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರು ಉಷಾಕಿರಣ ಅವರನ್ನು ಗೌರವಿಸಿ ಅವರ ಒಂಬತ್ತು ವರ್ಷಗಳ ಸೇವೆಯನ್ನು ಸ್ಮರಿಸಿದರು. ಕಚೇರಿಯ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವುದರ ಜೊತೆಗೆ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು, ಕಚೇರಿ ಕಾರ್ಯನಿರ್ವಹಣೆಯಲ್ಲಿ ನೀಡಿದ ಸಹಕಾರ ಶ್ಲಾಘನೀಯವಾಗಿದೆ ಎಂದು ಹೇಳಿದರು. ಹೊಸ ಕರ್ತವ್ಯದಲ್ಲಿಯೂ ಉತ್ತಮವಾಗಿ ಸೇವೆ ಸಲ್ಲಿಸಿ ಇಲಾಖೆಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಿಆರ್ಎಫ್ಒಗಳಾದ ಶಿವಾನಂದ ಆಚಾರ್ಯ, ಯತೀಂದ್ರ, ಸುನೀಲ್, ವಿನಯ್, ಪ್ರವೀಣ್, ಭವಾನಿ ಶಂಕರ ಹಾಗೂ ಹರಿಪ್ರಸಾದ್, ಗಸ್ತು ಅರಣ್ಯಪಾಲಕರಾದ ಸುನೀಲ್ ನಾಯ್ಕ, ನಾಗಲಿಂಗ, ದಿವಾಕರ ರೈ, ದೀಕ್ಷಾ, ಸವಿತಾ, ಶಿವಾನಂದ ಕುದುರಿ ಹಾಗೂ ಸಚಿನ್, ವಾಚರ್ ಸೇಸಪ್ಪ ಮತ್ತು ಚಾಲಕ ಕಿಶೋರ್ ಉಪಸ್ಥಿತರಿದ್ದರು.









































































































