ಅಧ್ಯಕ್ಷರಾಗಿ ಜನಾರ್ದನ , ಕಾರ್ಯದರ್ಶಿಯಾಗಿ ರಮೇಶ್ ಪರಂತಮೂಲೆ



ನೆಲ್ಯಾಡಿ: ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಮಿತಿಯ 2026-27ನೇ ಸಾಲಿನ ನೂತನ ಸಮಿತಿಯ ರಚನೆಯು ಸೋಮವಾರ ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.
ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ರವಿಚಂದ್ರ ಹೊಸವಕ್ಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಭಜನಾ ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಜನಾರ್ದನ, ಉಪಾಧ್ಯಕ್ಷರಾಗಿ ಸುಪ್ರೀತ ರವಿಚಂದ್ರ ಹೊಸವಕ್ಲು, ಕಾರ್ಯದರ್ಶಿಯಾಗಿ ರಮೇಶ್ ಪರಂತಮೂಲೆ ಹಾಗೂ ಜೊತೆ ಕಾರ್ಯದರ್ಶಿಯಾಗಿ ಪುರುಷೋತ್ತಮ ಆಚಾರ್ಯ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಕೃಷ್ಣಪ್ಪ ಕೆ., ರಮೇಶ್ ಬಾಣಜಾಲು, ಗಣೇಶ ಶೆಟ್ಟಿ, ಶಂಕರಗೌಡ, ಗಣೇಶ್ ಕೆ., ರಶ್ಮಿ, ಲೀಲಾವತಿ, ನಾರಾಯಣ ಶೆಟ್ಟಿ, ಇಂದಿರಾ ಹಾಗೂ ವಿಶಾಲಾಕ್ಷಿ ಆಚಾರ್ಯ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಶ್ರೀಧರ ನೂಜಿನ್ನಾಯ, ಅಶ್ವಥ್ ನಾರಾಯಣ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಜನೆಯ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ಬಳಿಕ ಕಾಳಿಕಾಂಬ ಭಜನಾ ಮಂಡಳಿ ಬಲ್ಯ ಇವರಿಂದ ಭಜನಾ ಸಂಕೀರ್ತನೆ ನಡೆಯಿತು.








































































































