



ಉದನೆ: ಇಲ್ಲಿನ ಸಂತ ತೋಮಸರ ಫೋರೋಣ ಚರ್ಚ್ನಲ್ಲಿ ಕೆಟೆಕಿಸಂ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಟೆಕಿಸಂ ಶಿಕ್ಷಕರು ಮಕ್ಕಳಿಗೆ ಕ್ರೈಸ್ತ ಧಾರ್ಮಿಕ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ನಂಬಿಕೆ, ಪ್ರೀತಿ, ತ್ಯಾಗ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಸಲ್ಲಿಸುತ್ತಿರುವ ಅಮೂಲ್ಯ ಸೇವೆಯನ್ನು ಸ್ಮರಿಸಲಾಯಿತು. ಶಿಕ್ಷಕರ ಸಮರ್ಪಣೆ ಮತ್ತು ನಿಸ್ವಾರ್ಥ ಸೇವೆಯನ್ನು ಪ್ರಶಂಸಿಸಿ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚರ್ಚ್ನ ವಿಕಾರ್ ರೆ.ಫಾ.ಫ್ರಾನ್ಸಿಸ್ ಒಡಂಪಳ್ಳಿ ಅವರು ಮಾತನಾಡಿ, ಮಕ್ಕಳಲ್ಲಿ ಕ್ರೈಸ್ತ ಮೌಲ್ಯಗಳು, ನಂಬಿಕೆ, ಪ್ರೀತಿ ಹಾಗೂ ನೈತಿಕ ಗುಣಗಳನ್ನು ಬೆಳೆಸುವಲ್ಲಿ ಕೆಟೆಕಿಸಂ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವುದರ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೆ.ಫಾ.ಸೂರಜ್ ಕೋಟ್ಟಾಯಿಲ್, ಮುಖ್ಯಗುರು ಸನ್ನಿ ಕುನ್ನತೇಲ್, ಪಿ.ಟಿ.ಎ. ಅಧ್ಯಕ್ಷ ಸುನಿಲ್ ಜೋಸೆಫ್, ಟ್ರಸ್ಟಿ ಜಾನ್ಸನ್ ಎಂಬ್ರಾಂಡಿವಯಲಿಲ್, ಕೆಟೆಕಿಸಂ ಶಿಕ್ಷಕರು ಉಪಸ್ಥಿತರಿದ್ದರು. ಸಯನ ತೋಟ್ಟುಪುರಂ ಕಾರ್ಯಕ್ರಮ ನಿರೂಪಿಸಿದರು.








































































































