



ನೆಲ್ಯಾಡಿ: ಅಲ್ ಬದ್ರಿಯಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಎಲ್ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗಾಗಿಆಹಾರ ಮೇಳ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮದಿಂದ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ನಾಝಿಂ ಸಾಹೇಬ್ ವಹಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಆಹಾರದ ಮಹತ್ವ, ಪೌಷ್ಟಿಕ ಆಹಾರದ ಅಗತ್ಯತೆ ಹಾಗೂ ಆರೋಗ್ಯಕರ ಆಹಾರ ಪದ್ಧತಿಯ ಕುರಿತು ತಿಳಿಸಿ ಆಹಾರ ಮೇಳದ ಉದ್ದೇಶವನ್ನು ವಿವರಿಸಿದರು.
ಶಾಲೆಯ ಮುಖ್ಯಶಿಕ್ಷಕಿ ಸೀಮಾ ಡೆನ್ನಿಸ್ ಹಾಗೂ ಶಿಕ್ಷಕಿ ಬದ್ರಿಯಾ ಅವರು ಆಹಾರ ಮೇಳದ ವಿಶೇಷತೆ ಮತ್ತು ಉದ್ದೇಶದ ಕುರಿತು ಮಾತನಾಡಿದರು.
ಆಹಾರ ಮೇಳದಲ್ಲಿ ಎಲ್ಕೆಜಿ ಮತ್ತು ಯುಕೆಜಿ ವಿಭಾಗದ ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ವಿವಿಧ ಬಗೆಯ ರುಚಿಕರ ಆಹಾರ ಪದಾರ್ಥಗಳನ್ನು ತಂದು ಉತ್ಸಾಹದಿಂದ ಭಾಗವಹಿಸಿದರು. ವಿದ್ಯಾರ್ಥಿಗಳು ತಂದಿದ್ದ ಆಹಾರ ಪದಾರ್ಥಗಳನ್ನು ಶಾಲೆಯ ವಿವಿಧ ತರಗತಿಗಳ ಮಕ್ಕಳಿಗೆ ಹಂಚಲಾಯಿತು. ಇದರ ಮೂಲಕ ಮಕ್ಕಳಲ್ಲಿ ಆಹಾರದ ಮಹತ್ವ, ವಿವಿಧ ಆಹಾರ ಪದಾರ್ಥಗಳ ಪರಿಚಯ ಹಾಗೂ ಪರಸ್ಪರ ಹಂಚಿಕೊಂಡು ತಿನ್ನುವ ಮನೋಭಾವವನ್ನು ಬೆಳೆಸುವ ಪ್ರಯತ್ನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿಸದಸ್ಯರು, ಶಿಕ್ಷಕವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.








































































































