


ನೆಲ್ಯಾಡಿ: 2026ನೇ ಸಾಲಿನ ಜೆಸಿಐ ವಲಯ ಸಮ್ಮೇಳನವು ಆಡ್ಯಾರ್ ಗಾರ್ಡನ್ನಲ್ಲಿ ಅದ್ದೂರಿಯಾಗಿ ನಡೆಯಿತು. ಈ ಸಮ್ಮೇಳನದಲ್ಲಿ ಜೆಸಿಐ ನೆಲ್ಯಾಡಿ ಘಟಕವು ವಿವಿಧ ವಿಭಾಗಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಒಟ್ಟು ಆರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಘಟಕದ ಅಧ್ಯಕ್ಷೆ ಪ್ರವೀಣಿ ಶೆಟ್ಟಿ ಅವರು ಅತ್ಯುತ್ತಮ ಅಧ್ಯಕ್ಷೆ ವಲಯ ಮಟ್ಟದ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಘಟಕವು ಅತ್ಯುತ್ತಮ ಸುಸ್ಥಿರ ನಿರ್ವಹಣೆಗೆ ವಲಯ ಮಟ್ಟದ ರನ್ನರ್ ಅಪ್ ಪ್ರಶಸ್ತಿ, ಶೇ.100 ಕಾರ್ಯದಕ್ಷತೆಗೆ ಪ್ಲಾಟಿನಂ ಸಾಧಕ ಪ್ರಶಸ್ತಿ, ಶಾಶ್ವತ ಯೋಜನೆಗೆ ಪ್ರಥಮ ಪ್ರಶಸ್ತಿ, ವಲಯಾಧ್ಯಕ್ಷರ ಅಧಿಕೃತ ಭೇಟಿಗೆ ಗೋಲ್ಡನ್ ಎಲ್.ಒ. ಪ್ರಶಸ್ತಿ ಹಾಗೂ ವಲಯಾಧ್ಯಕ್ಷರ ವಿಶೇಷ ಗುರುತಿಸುವಿಕೆಗೆ ಡೈಮಂಡ್ ಸ್ಥಳೀಯ ಘಟಕ ಪ್ರಶಸ್ತಿ ಸೇರಿದಂತೆ ಆರು ಪ್ರಶಸ್ತಿಗಳನ್ನುಗಳಿಸಿದೆ. ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜೆಸಿಐ ನೆಲ್ಯಾಡಿ ಘಟಕದ ಪೂರ್ವಾಧ್ಯಕ್ಷರಾದ ಜೆಸಿ ಪುರಂದರ ಗೌಡ, ಜೆಸಿ ಇಸ್ಮಾಯಿಲ್, ಜೆಸಿ ಜಾನ್ ಪಿ.ಎಸ್., ಡಾ.ಸುಧಾಕರ್ ಶೆಟ್ಟಿ ಹಾಗೂ ಸದಸ್ಯರಾದ ದೀಪಿಕಾ ಡಿ.ಎಂ., ಸುಪ್ರಿತಾ ರವಿಚಂದ್ರ, ಜಾಹ್ನವಿ ಮತ್ತು ಇಸ್ಮಾಯಿಲ್ ಕೊಲ್ಪೆ ಉಪಸ್ಥಿತರಿದ್ದರು.








































































































