


ಕಡಬ:ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದ ವತಿಯಿಂದ ಮಂಗಳೂರಿನ ಮಂಗಳ ಸ್ಟೇಡಿಯಂ ನಲ್ಲ್ರಿ. 27 ಹಾಗೂ 28 ರಂದು ನಡೆದ 14 ವಯೋಮಾನದ ಬಾಲಕಿಯರ ಅಥ್ಲೆಟಿಕ್ಸ್ ಸ್ಪರ್ಧೆಯ ಗುಂಡೆಸೆತ ಹಾಗೂ ಚಕ್ರ ಎಸೆತ ವಿಭಾಗದಲ್ಲಿ ಕಡಬ ತಾಲೂಕಿನ ಮರ್ಧಾಳದ ಗುಡ್ ಶೆಫರ್ಡ್ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಎಂಟನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಕೆ. ಹೆಚ್. ಪ್ರಥಮ ಸ್ಥಾನ ಪಡೆದು ಹೊಸ ದಾಖಲೆ ನಿರ್ಮಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2018ರಲ್ಲಿ ಇದ್ದ 9.96 ಮೀಟರ್ ದಾಖಲೆಯನ್ನು ಮುರಿದು 11.29 ಮೀಟರ್ ದೂರ ಎಸೆದು ಹೊಸ ಜಿಲ್ಲಾ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಕ್ರೀಡಾ ಪ್ರತಿಭೆ ಚಕ್ರ ಎಸೆತ ವಿಭಾಗದಲ್ಲಿ, 2017ರಲ್ಲಿ ಇದ್ದ 30.55 ಮೀಟರ್ ದಾಖಲೆಯನ್ನು ಮುರಿದು 31.24 ಮೀಟರ್ ಎಸೆದು ಹೊಸ ಜಿಲ್ಲಾ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಎರಡೂ ವಿಭಾಗಗಳಲ್ಲಿ ಹೊಸ ದಾಖಲೆಗಳೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಇವರು ಮುಂದೆ ಮೈಸೂರಿನಲ್ಲಿ ನಡೆಯವ ರಾಜ್ಯಮಟ್ಟದ ಸ್ಪರ್ಧೆಯಲ್ಲಿಯಲ್ಲಿ ಭಾಗವಹಿಸಲಿದ್ದಾರೆ.
ಈಕೆಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ರವೀಂದ್ರ ವೇಲು ತರಬೇತಿ ನೀಡಿರುತ್ತಾರೆ. ಸಂಸ್ಥೆಯ ಆಡಳಿತ ಮಂಡಳಿ ಮತ್ತು ಎಲ್ಲಾ ಶಿಕ್ಷಕರ ವೃಂದ ಅಭಿನಂದಿಸಿದ್ದಾರೆ, ವೈಷ್ಣವಿ ಅವರು ಮರ್ಧಾಳದ ಹೊಸೊಕ್ಲು ನಿವಾಸಿ ನಿವೃತ್ತ ಸೈನಿಕ ಕುಶಾಲಪ್ಪ ಗೌಡ ಹಾಗೂ ಶಶಿಕಲಾ ದಂಪತಿಯ ಪುತ್ರಿ.








































































































