


ನೆಲ್ಯಾಡಿ: ಪಿ.ಎಂ. ಶ್ರೀ ಶಾಲೆ ನೆಲ್ಯಾಡಿಯಲ್ಲಿ ನಡೆದ ನೆಲ್ಯಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಕಿರಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ಕಿರಿಯರ ವಿಭಾಗದ ಭಕ್ತಿಗೀತೆ ಸ್ಪರ್ಧೆಯಲ್ಲಿ ಆದ್ಯ ಕೆ. , ಅಭಿನಯ ಗೀತೆಯಲ್ಲಿ ಅನ್ವಿ ಸನೋಜ್ ಹಾಗೂ ಇಂಗ್ಲಿಷ್ ಕಂಠಪಾಠದಲ್ಲಿ ಅವಿಷಿ ಪ್ರಥಮ ಸ್ಥಾನ ಪಡೆದುಕೊಂಡರು. ಕಥೆ ಹೇಳುವ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಪ್ರಸ್ತುತಿ . ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಆದ್ಯ ಕೆ. ದ್ವಿತೀಯ ಸ್ಥಾನ ಪಡೆದರು.
ಹಿರಿಯರ ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿ ನತಾಶ ಜಿನ್ಸ್ ಪ್ರಥಮ ಹಾಗೂ ಅಭಿನಯ ಗೀತೆ ಸ್ಪರ್ಧೆಯಲ್ಲಿ ಶ್ರೀಶ ದ್ವಿತೀಯ ಸ್ಥಾನ ಪಡೆದುಕೊಂಡರು.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಸಂಚಾಲಕ ರೆ. ಫಾ. ಹನಿ ಜೇಕಬ್, ಆಡಳಿತಾಧಿಕಾರಿ ಮ್ಯಾಥ್ಯೂ ಟಿ.ಜೆ., ಮುಖ್ಯಶಿಕ್ಷಕ ಹಾಗೂ ಶಿಕ್ಷಕ ವೃಂದದವರು ಸಂತಸ ವ್ಯಕ್ತಪಡಿಸಿ ವಿಜೇತರನ್ನು ಅಭಿನಂದಿಸಿದರು.








































































































