ಪ್ರಗತಿಬಂಧು ಯೋಜನೆಯ ಆರಂಭಿಕ ಫಲಾನುಭವಿಗಳೊಂದಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆ ಆತ್ಮೀಯ ಸಂವಾದ; ಹಳೆಯ ದಿನಗಳ ನೆನಪು ಹಂಚಿಕೊಂಡ ಹಿರಿಯರು
ಕೊಕ್ಕಡ: ಕೂಲಿ ಕೆಲಸವನ್ನೇ ನಂಬಿದ್ದ ಬದುಕು, ಸ್ವಂತ ಭೂಮಿಯಲ್ಲಿ ಕೃಷಿ ಮಾಡಿ ಸ್ವಾವಲಂಬನೆ ಸಾಧಿಸಿದ ಪಯಣ, ಮಕ್ಕಳಿಗೆ ಶಿಕ್ಷಣ ಕೊಡಿಸಿದ ಸಂತೃಪ್ತಿ… ಹೀಗೆ ನಾಲ್ಕು ದಶಕಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬದುಕಿನಲ್ಲಿ ಹೊಸ ಬೆಳಕು ಕಂಡ ಹಿರಿಯ ಫಲಾನುಭವಿಗಳು ತಮ್ಮ 44 ವರ್ಷಗಳ ಅನುಭವಗಳನ್ನು ಮೆಲುಕು ಹಾಕಿದ ಅಪರೂಪದ ಕ್ಷಣಕ್ಕೆ ಅರಸಿನಮಕ್ಕಿ ಸಾಕ್ಷಿಯಾಯಿತು.
ಅರಸಿನಮಕ್ಕಿಯ ಗೋಪಾಲಕೃಷ್ಣ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ನ.4ರಂದು ನಡೆದ ಪ್ರಗತಿಬಂಧು ಒಕ್ಕೂಟದ ಹಿರಿಯ ಫಲಾನುಭವಿಗಳ ಸಂವಾದ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಭಾಗವಹಿಸಿ ಹಿರಿಯರ ಅನುಭವಗಳನ್ನು ಆಲಿಸಿದರು.
ಎಸ್ಕೆಡಿಆರ್ಡಿಪಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಹೆಗ್ಗಡೆಯವರ ದೂರದೃಷ್ಟಿಯ ಚಿಂತನೆಯಿಂದ ಆರಂಭಗೊಂಡ ಗ್ರಾಮಾಭಿವೃದ್ಧಿ ಯೋಜನೆ ಇಂದು ರಾಜ್ಯಾದ್ಯಂತ ಸುಮಾರು 53 ಲಕ್ಷ ಕುಟುಂಬಗಳಿಗೆ ಆಸರೆಯಾಗಿದೆ. ಯೋಜನೆಯ ಯಶಸ್ಸಿಗೆ ರೆಖ್ಯ ಮತ್ತು ಹತ್ಯಡ್ಕ ಗ್ರಾಮಗಳ ಜನರು ಹಾಕಿದ ಭದ್ರ ಬುನಾದಿ ಮಹತ್ವದ್ದಾಗಿದೆ. ನಲವತ್ತನಾಲ್ಕು ವರ್ಷಗಳ ಹಿಂದೆ ಈ ಭಾಗದಲ್ಲಿ ಬಡತನ, ಅನಾರೋಗ್ಯ, ಮಂಗನ ಕಾಯಿಲೆ ಹಾಗೂ ಮೂಲಸೌಕರ್ಯಗಳ ಕೊರತೆ ತೀವ್ರವಾಗಿತ್ತು. ಬಹುತೇಕ ಕುಟುಂಬಗಳು ಕೂಲಿ ಕೆಲಸವನ್ನೇ ಅವಲಂಬಿಸಿದ್ದವು. ದಿನದ ದುಡಿಮೆಗೆ ದೊರೆಯುತ್ತಿದ್ದ ಅಕ್ಕಿಯನ್ನು ಮನೆಗೆ ತಂದು ಅನ್ನ ಬೇಯಿಸಿ ಮಕ್ಕಳಿಗೆ ಉಣಬಡಿಸುವಂತಹ ಕಷ್ಟದ ದಿನಗಳಿದ್ದವು. ಕೂಲಿ ಕಾರ್ಮಿಕರು ಜೀವನಪೂರ್ತಿ ಕೂಲಿಯನ್ನೇ ಅವಲಂಬಿಸದೆ ಸ್ವಂತ ಭೂಮಿಯಲ್ಲಿ ದುಡಿದು ಬದುಕು ಕಟ್ಟಿಕೊಳ್ಳಬೇಕು ಎಂಬುದು ಹೆಗ್ಗಡೆಯವರ ಆಶಯವಾಗಿತ್ತು.
ಭೂಶಕ್ತಿ, ಜಲಶಕ್ತಿ ಮತ್ತು ಮಾನವಶಕ್ತಿಯ ಸದ್ಬಳಕೆಗೆ ಆದ್ಯತೆ ನೀಡಿ, ಫಲಾನುಭವಿಗಳ ಸ್ವಂತ ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಪ್ರೇರಣೆ ನೀಡಲಾಯಿತು. ಪ್ರಗತಿಬಂಧು ತಂಡಗಳ ಮೂಲಕ ವಾರದಲ್ಲಿ ಮೂರು ದಿನ ಸ್ವಂತ ಜಮೀನಿನಲ್ಲಿ ದುಡಿಯಲು ಅವಕಾಶ ಕಲ್ಪಿಸಿ, ಕೃಷಿ ಗಿಡಗಳು, ಸಲಕರಣೆಗಳು, ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಯಿತು. ಕುಟುಂಬ ನಿರ್ವಹಣೆಗೂ ನೆರವು ಒದಗಿಸಲಾಯಿತು. ಇದರಿಂದ ಕೂಲಿ ಕಾರ್ಮಿಕರಾಗಿದ್ದವರು ಪ್ರಗತಿಪರ ಕೃಷಿಕರಾಗಿ ಬೆಳೆದು ಮಕ್ಕಳನ್ನು ಶಾಲೆಗೆ ಕಳುಹಿಸುವ ಸಾಮರ್ಥ್ಯ ಪಡೆದರು ಎಂದರು.
ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆಯುತ್ತಿರುವ ಎಲ್ಲ ಸೇವಾ ಕಾರ್ಯಗಳಿಗೂ ಮಂಜುನಾಥ ಸ್ವಾಮಿಯ ಅನುಗ್ರಹವೇ ಕಾರಣ. ತಾವು ಕೇವಲ ನಿಮಿತ್ತ ಮಾತ್ರ. ಆರಂಭದ ದಿನಗಳಲ್ಲಿ ಕೈಗೊಂಡ ಪ್ರಯತ್ನಗಳು ಇಂದು ಸಾವಿರಾರು ಕುಟುಂಬಗಳ ಬದುಕಿಗೆ ಆಸರೆಯಾಗಿರುವುದು ಸಂತಸ ತಂದಿದೆ. ಬಡವರು ಹಾಗೂ ಅಶಕ್ತರಿಗೆ ಮನೆ ನಿರ್ಮಾಣ, ಮದ್ಯವರ್ಜನ ಶಿಬಿರ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಮುಂದುವರಿಸಲಾಗುತ್ತಿದೆ. ಮುಂದಿನ ಪೀಳಿಗೆಯ ಮಕ್ಕಳು ಸಮಾಜದ ಬಗ್ಗೆ ಕಾಳಜಿ ಹೊಂದಿ ಇತರರಿಗೆ ನೆರವಾಗುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹೇಮಾವತಿ ವಿ.ಹೆಗ್ಗಡೆ ಅವರು ಬೆಂಗಳೂರಿನಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿ ಆರಂಭದ ದಿನಗಳಲ್ಲಿ ಬಡವರಿಗೆ ಅಳತೆಗೆ ತಕ್ಕಂತೆ ಬಟ್ಟೆ ಹೊಲಿಸಿಕೊಡುವುದು, ಪಾತ್ರೆ ವಿತರಣೆ ಹಾಗೂ ಹುಲ್ಲಿನ ಛಾವಣಿಯ ಮನೆಗಳಿಗೆ ಹೆಂಚು ಒದಗಿಸುವಂತಹ ಸೇವಾ ಕಾರ್ಯಗಳನ್ನು ಸ್ಮರಿಸಿದರು. ಹತ್ಯಡ್ಕದಿಂದ ಆರಂಭಗೊಂಡ ಪ್ರಗತಿಬಂಧು ಚಟುವಟಿಕೆಗಳು ರಾಜ್ಯಾದ್ಯಂತ ವಿಸ್ತರಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಹಿರಿಯ ಫಲಾನುಭವಿಗಳಾದ ಕೃಷ್ಣಪ್ಪ ಗೌಡ ಶಿಶಿಲ, ಐತಪ್ಪ ಮೂಲ್ಯ, ದರ್ಣಪ್ಪ ಗೌಡ ಹಾಗೂ ಕೃಷ್ಣಪ್ಪ ಗೌಡ ಬೆಂಗಾಳ ತಮ್ಮ ಬದುಕಿನ ಬದಲಾವಣೆಗಳನ್ನು ಹಂಚಿಕೊಂಡರು. ರಾತ್ರಿ ಶಾಲೆಯ ಅಧ್ಯಾಪಕರಾಗಿದ್ದ ತ್ಯಾಂಪಣ್ಣ ಶೆಟ್ಟಿಗಾರ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಹತ್ತು ಮಂದಿ ಮೂಲ ಫಲಾನುಭವಿಗಳಿಗೆ ತೆಂಗಿನ ಸಸಿಗಳನ್ನು ವಿತರಿಸಲಾಯಿತು. ಫಲಾನುಭವಿಗಳು ಹೆಗ್ಗಡೆಯವರಿಗೆ ಫಲತಾಂಬೂಲ ನೀಡಿ ಗೌರವಿಸಿದರು.
ಅರಸಿನಮಕ್ಕಿ ಪ್ರಗತಿಬಂಧು ತಂಡದ ಸದಸ್ಯರು ಆರಂಭದ ದಿನಗಳಲ್ಲಿ ತಂಡಗಳು ಕಾರ್ಯನಿರ್ವಹಿಸುತ್ತಿದ್ದ ವಿಧಾನವನ್ನು ಅಭಿನಯದ ಮೂಲಕ ಪ್ರದರ್ಶಿಸಿದರು. ಜ್ಞಾನವಿಕಾಸ ಸದಸ್ಯೆ ಗುಲಾಬಿ ಹೆಗ್ಗಡೆಯವರ ಕುರಿತು ರಚಿಸಿದ ಭಕ್ತಿಗೀತೆಯ ಕವನ ವಾಚಿಸಿದರು. ಸಂತಸಗೊಂಡ ಹೆಗ್ಗಡೆಯವರು ಅವರಿಗೆ ಉಡುಗೊರೆ ನೀಡಿ ಗೌರವಿಸಿದರು. ಜ್ಞಾನವಿಕಾಸ ಮಹಿಳೆಯರು ಜಾನಪದ ನೃತ್ಯ ಪ್ರದರ್ಶಿಸಿದರು.
ವೇದಿಕೆಯಲ್ಲಿ ಯೋಜನೆಯ ಟ್ರಸ್ಟಿ ಹರಿಕೃಷ್ಣ ಹಾಗೂ ಹಣಕಾಸು ಮಾರ್ಗದರ್ಶಕ ಶಾಂತಾರಾಮ ಪೈ ಉಪಸ್ಥಿತರಿದ್ದರು. ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿದರು. ಜಿಲ್ಲಾ ನಿರ್ದೇಶಕ ದಿನೇಶ್ ವಂದಿಸಿದರು. ಆರಂಭದಲ್ಲಿ ಪೂರ್ಣಕುಂಭ ಸ್ವಾಗತ, ಭಜನೆ, ಕುಣಿತ ಭಜನೆ ಹಾಗೂ ಹುಲಿವೇಷ ಮೆರವಣಿಗೆ ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಹತ್ಯಡ್ಕ, ರೆಖ್ಯ, ಶಿಶಿಲ, ಶಿಬಾಜಿ ಗ್ರಾಮಗಳ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ...

72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಪಂಜ ವಲಯ ಅರಣ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ನೆಲ್ಯಾಡಿ: “ಆವಾಸ ಸ್ಥಾನಗಳ ಜೋಡಣೆ ಹಾಗೂ ವನ್ಯಜೀವಿಗಳ ಅಭಿವೃದ್ಧಿ” ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ...
ಉಪ್ಪಿನಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಉಪ್ಪಿನಂಗಡಿ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ–ಬಾಲಕಿಯರ ಕ್ರೀಡಾಕೂಟ ಹಿರೆಬಂಡಾಡಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದಲ್ಲಿ ಇಂದ್ರಪ್ರಸ್ಥ ...