ನೆಲ್ಯಾಡಿ: 1990ರ ಜುಲೈ 27 ಮತ್ತು 28ರಂದು ಸಂತ ಅಲ್ಫೋನ್ಸಮ್ಮನವರ ಹಬ್ಬದ ಸಂದರ್ಭದಲ್ಲಿ ಈ ಚರ್ಚ್ನ ಆಶೀರ್ವಚನ ಕಾರ್ಯಕ್ರಮ ನಡೆದಿತ್ತು. ನನ್ನ ಧಾರ್ಮಿಕ ದೀಕ್ಷೆಯೂ 1990ರ ಏಪ್ರಿಲ್ 26ರಂದು ನಡೆದಿತ್ತು. ಇದೀಗ ಹಳೆಯ ಚರ್ಚ್ ತೆರವುಗೊಳಿಸಿ ವಿಶಾಲವಾದ ನೂತನ ಚರ್ಚ್ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡುತ್ತಿರುವುದು ಸಂತೋಷದ ಸಂಗತಿ. ಧರ್ಮಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿ ಮೊದಲ ವರ್ಷ ಪೂರ್ಣಗೊಳ್ಳುವ ಸಂದರ್ಭದಲ್ಲಿ ನೂತನ ಚರ್ಚ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲು ಸಾಧ್ಯವಾಗಿರುವುದು ವಿಶೇಷ ಸಂತಸ ತಂದಿದೆ. ಈ ಮಹತ್ವದ ಕಾರ್ಯಕ್ಕಾಗಿ ಶ್ರಮಿಸುತ್ತಿರುವ ಇಡೀ ಧರ್ಮಸಭೆಯ ಸದಸ್ಯರನ್ನು ಅಭಿನಂದಿಸುತ್ತೇನೆ. ವಿಶೇಷವಾಗಿ ಚರ್ಚ್ನ ಧರ್ಮಗುರು ವಂ.ಫಾ.ಶಾಜಿ ಮ್ಯಾಥ್ಯೂ ಅವರ ಸೇವೆಯನ್ನು ಪ್ರಶಂಸಿಸುತ್ತೇನೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ.ಫಾ.ಜೇಮ್ಸ್ ಪ್ಯಾಟರಿಲ್ ನುಡಿದರು.
ಅವರು ನೆಲ್ಯಾಡಿಯಲ್ಲಿ ಸುಮಾರು ₹7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಂತ ಅಲ್ಫೋನ್ಸ ನೂತನ ಚರ್ಚ್ಗೆ ಗುರುವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶಿಲಾನ್ಯಾಸ ಹಾಗೂ ಆಶೀರ್ವಾದ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ಮೂವರು ಧರ್ಮಾಧ್ಯಕ್ಷರ ಆಶೀರ್ವಾದ ಮತ್ತು ಪ್ರಾರ್ಥನೆಗಳು ನಿಮ್ಮೊಂದಿಗಿವೆ. ಧರ್ಮಗುರುಗಳು, ಸನ್ಯಾಸಿನಿಯರು ಹಾಗೂ ಇಡೀ ಸಮುದಾಯ ಒಗ್ಗಟ್ಟಿನಿಂದ ಪ್ರಾರ್ಥಿಸಿದಾಗ ದೇವರು ಖಂಡಿತವಾಗಿಯೂ ಪ್ರಾರ್ಥನೆಗೆ ಉತ್ತರ ನೀಡುತ್ತಾನೆ. ಆದಷ್ಟು ಬೇಗ ಸುಂದರ ಚರ್ಚ್ನ ನಿರ್ಮಾಣ ಪೂರ್ಣಗೊಂಡು ಆಶೀರ್ವಚನ ಕಾರ್ಯಕ್ರಮ ನಡೆಯುವಂತಾಗಲಿ. ಈ ಚರ್ಚ್ ನಾಡಿನ ಜನರಿಗೆ ಪ್ರೀತಿ, ಐಕ್ಯತೆ, ಐಶ್ವರ್ಯ ಹಾಗೂ ಶಾಂತಿಯ ಸಂಕೇತವಾಗಿ ಬೆಳೆಯಲಿ ಎಂದು ಹಾರೈಸಿದರು.
ನಿವೃತ್ತ ಬಿಷಪ್ ಅತೀ ವಂ.ಡಾ.ಲಾರೆನ್ಸ್ ಮುಕ್ಕುಯಿ ಮಾತನಾಡಿ, ಭಾರತದ ಪ್ರಥಮ ಕ್ಯಾಥೋಲಿಕ್ ಸಂತರೆಂದು ಗೌರವಿಸಲ್ಪಡುವ ಸಂತ ಅಲ್ಫೋನ್ಸಮ್ಮನವರ ಮೇಲಿನ ಭಕ್ತಿ ದೇಶದಾದ್ಯಂತ ವ್ಯಾಪಿಸಿದೆ. ಭರಣಂಗಾನಂ ಪುಣ್ಯಕ್ಷೇತ್ರದಂತೆ ನೆಲ್ಯಾಡಿಯೂ ಸಂತ ಅಲ್ಫೋನ್ಸಮ್ಮನವರ ಮಧ್ಯಸ್ಥಿಕೆಯ ಮೂಲಕ ಅನೇಕ ಭಕ್ತರಿಗೆ ಆಶೀರ್ವಾದ ದೊರೆಯುತ್ತಿರುವ ಪವಿತ್ರ ಕ್ಷೇತ್ರವಾಗಿದೆ ಎಂದರು.
ಒಂದು ಊರಿನ ಸಂಸ್ಕೃತಿ, ಜೀವನಮೌಲ್ಯ ಹಾಗೂ ಸಾಮಾಜಿಕ ಕಳಕಳಿಯನ್ನು ಅಲ್ಲಿನ ದೇವಾಲಯಗಳು, ಶಾಲೆಗಳು ಮತ್ತು ಆಸ್ಪತ್ರೆಗಳು ಪ್ರತಿಬಿಂಬಿಸುತ್ತವೆ. ಈ ನಿಟ್ಟಿನಲ್ಲಿ ನೆಲ್ಯಾಡಿ ಪ್ರದೇಶವು ಉತ್ತಮ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವುದು ಸಂತಸದ ಸಂಗತಿ. ಇಲ್ಲಿ ನಿರ್ಮಾಣಗೊಳ್ಳಲಿರುವ ಭವ್ಯ ಚರ್ಚ್ ಜಾತಿ, ಧರ್ಮ, ಭಾಷೆ, ಬಣ್ಣದ ಭೇದವಿಲ್ಲದೆ ಸರ್ವರಿಗೂ ಆಶೀರ್ವಾದ ನೀಡುವ ಪವಿತ್ರ ಕೇಂದ್ರವಾಗಿ ರೂಪುಗೊಳ್ಳಲಿ. ನಿರ್ಮಾಣ ಕಾರ್ಯ ಶೀಘ್ರ ಪೂರ್ಣಗೊಳ್ಳಲಿ ಎಂದು ಹಾರೈಸಿದರು.
ಪುತ್ತೂರು ಧರ್ಮಪ್ರಾಂತ್ಯದ ಅತೀ ವಂ.ಡಾ.ಗೀವರ್ಗೀಸ್ ಮಕಾರಿಯೋಸ್ ಅವರು ಕಾರ್ಯಕ್ರಮಕ್ಕೆ ಶುಭಾಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಅತೀ ವಂ.ಫಾ.ಜೇಮ್ಸ್ ಪ್ಯಾಟರಿಲ್ ಅವರು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.
ಬೆಳಿಗ್ಗೆ 9ಗಂಟೆಗೆ ಪವಿತ್ರ ಬಲಿಪೂಜೆ ನಡೆಯಿತು. ಬಳಿಕ 9.45ಕ್ಕೆ ಪ್ರಾರ್ಥನಾ ವಿಧಿವಿಧಾನಗಳೊಂದಿಗೆ ಶಿಲಾನ್ಯಾಸ ಹಾಗೂ ಆಶೀರ್ವಾದ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಕೋರ್ ಎಪಿಸ್ಕೋಪ, ವಿವಿಧ ಚರ್ಚ್ಗಳ ಧರ್ಮಗುರುಗಳು, ಸ್ಥಳೀಯ ರಾಜಕೀಯ ಮುಖಂಡರು, ಊರಿನ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಚರ್ಚ್ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಚರ್ಚ್ನ ಧರ್ಮಗುರು ವಂ.ಫಾ.ಶಾಜಿ ಮ್ಯಾಥ್ಯೂ ಸ್ವಾಗತಿಸಿದರು. ಶಿಕ್ಷಕ ಜೋಸ್ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಸುಜಾ ಜೇಮ್ಸ್ ವಂದಿಸಿದರು.
ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ...

72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಪಂಜ ವಲಯ ಅರಣ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ನೆಲ್ಯಾಡಿ: “ಆವಾಸ ಸ್ಥಾನಗಳ ಜೋಡಣೆ ಹಾಗೂ ವನ್ಯಜೀವಿಗಳ ಅಭಿವೃದ್ಧಿ” ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ...