ನೆಲ್ಯಾಡಿ: ಜೇಸಿಐ ಸಪ್ತಾಹದ ಅಂಗವಾಗಿ ನೆಲ್ಯಾಡಿ ಜೇಸಿಐ ವತಿಯಿಂದ ನೆಲ್ಯಾಡಿ ಸಮೀಪದ ಕೊಪ್ಪದಲ್ಲಿರುವ ಪ್ರಶಾಂತ್ ನಿಲಯ ಆಶ್ರಮಕ್ಕೆ ಭೇಟಿ ನೀಡಿ, ಆಶ್ರಮವಾಸಿಗಳೊಂದಿಗೆ ಬೆರೆತು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿ, ಊಟ ಹಾಗೂ ಹಣ್ಣು-ಹಂಪಲುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಜೇಸಿಐ ಅಧ್ಯಕ್ಷೆ ಪ್ರವೀಣಿ ಶೆಟ್ಟಿ ವಹಿಸಿ, ಎಲ್ಲರನ್ನು ಸ್ವಾಗತಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜೇಸಿಐ ವಲಯ 15ರ ವಲಯ ಉಪಾಧ್ಯಕ್ಷ ಕಾಶಿನಾಥ ಗೋಗಟೆ ಮಾತನಾಡಿ ನೆಲ್ಯಾಡಿ ಜೇಸಿಐ ಸಂಸ್ಥೆಯು ಉತ್ತಮ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುವ ಮೂಲಕ ವಲಯ ಹಾಗೂ ರಾಷ್ಟ್ರಮಟ್ಟಗಳಲ್ಲಿ ಗುರುತಿಸಿಕೊಂಡಿದೆ. ಜೇಸಿಐ ಸಂಸ್ಥೆಯು ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದರ ಜೊತೆಗೆ ಸಮಾಜಕ್ಕೆ ಉತ್ತಮ ನಾಯಕರನ್ನು ನೀಡುವ ಕಾರ್ಯ ಮಾಡುತ್ತಿದೆ ಎಂದರು.
ಆಶ್ರಮ ಭೇಟಿ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿದ್ದು, ಇಂತಹ ಕಾರ್ಯಕ್ರಮಗಳಿಗೆ ತಮ್ಮ ಮಕ್ಕಳನ್ನೂ ಕರೆದುಕೊಂಡು ಬರುವ ಮೂಲಕ ಅವರಿಗೆ ಆಶ್ರಮದ ವಾತಾವರಣ ಹಾಗೂ ಅಲ್ಲಿನ ಹಿರಿಯರ ಜೀವನದ ಬಗ್ಗೆ ಅರಿವು ಮೂಡಿಸಬೇಕು. ವಿದ್ಯಾವಂತರಾದ ನಾವು ಹೆತ್ತವರನ್ನು ಗೌರವಿಸುವುದು ಮತ್ತು ಅವರ ವೃದ್ಧಾಪ್ಯದಲ್ಲಿ ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಹೆತ್ತವರನ್ನು ವೃದ್ಧಾಶ್ರಮಗಳಿಗೆ ಕಳುಹಿಸುವ ಬದಲು ಅವರೊಂದಿಗೆ ನಿಂತು ಜೀವನ ಸಾಗಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಆಶ್ರಮದ ಮೇಲ್ವಿಚಾರಕಿ ಸಿಸ್ಟರ್ ಜೆಸ್ಸಿ ಜೋಸೆಫ್ ಮಾತನಾಡಿ ನೆಲ್ಯಾಡಿ ಜೇಸಿಐ ವತಿಯಿಂದ ಪ್ರತಿವರ್ಷ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮವಾಸಿಗಳೊಂದಿಗೆ ಬೆರೆತು, ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ಊಟ ಹಾಗೂ ಹಣ್ಣು-ಹಂಪಲುಗಳನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ. ಜೇಸಿಐ ಸಂಸ್ಥೆಯು ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿ, ಸಂಸ್ಥೆಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ನಿಕಟ ಪೂರ್ವಾಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ, ಕಾರ್ಯಕ್ರಮದ ಯೋಜನಾ ನಿರ್ದೇಶಕಿ ಲೀಲಾ ಮೋಹನ್, ಜ್ಞಾಹ್ನವಿ.ಐ., ಜೊತೆ ಕಾರ್ಯದರ್ಶಿ ಸುಪ್ರೀತಾ ರವಿಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಮಿತಾ ಹರೀಶ್ ಜೇಸಿ ವಾಣಿ ವಾಚಿಸಿದರು. ರೇಷ್ಮಾ ಅತಿಥಿಗಳ ಪರಿಚಯ ಮಾಡಿದರು. ದೀಪಿಕಾ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಸುಪ್ರೀತಾ ರವಿಚಂದ್ರ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಜೇಸಿಐ ಸದಸ್ಯರು ಆಶ್ರಮವಾಸಿಗಳೊಂದಿಗೆ ವಿವಿಧ ಮನೋರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂತಸ ಹಂಚಿಕೊಂಡರು. ಬಳಿಕ ಆಶ್ರಮವಾಸಿಗಳಿಗೆ ಊಟ ಹಾಗೂ ಹಣ್ಣು-ಹಂಪಲುಗಳನ್ನು ವಿತರಿಸಲಾಯಿತು.
ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ...

72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಪಂಜ ವಲಯ ಅರಣ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ನೆಲ್ಯಾಡಿ: “ಆವಾಸ ಸ್ಥಾನಗಳ ಜೋಡಣೆ ಹಾಗೂ ವನ್ಯಜೀವಿಗಳ ಅಭಿವೃದ್ಧಿ” ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ...
ಉಪ್ಪಿನಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಉಪ್ಪಿನಂಗಡಿ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ–ಬಾಲಕಿಯರ ಕ್ರೀಡಾಕೂಟ ಹಿರೆಬಂಡಾಡಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದಲ್ಲಿ ಇಂದ್ರಪ್ರಸ್ಥ ...
ಕೊಕ್ಕಡ: ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಶಿಶಿಲ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತಾ ಹೀ ಸೇವಾ ಸಮಾರೋಪ ಸಮಾರಂಭದೊಂದಿಗೆ ವಿಶೇಷ ಗ್ರಾಮ ಸಭೆ ನಡೆಯಿತು. ಪಂಚಾಯತ್ ಆಡಳಿತಾಧಿಕಾರಿ ಭರತ್ ...
ಕೊಕ್ಕಡ: ಸಂತ ಜೋನ್ ಬ್ಯಾಪ್ಟಿಸ್ಟ್ ದೇವಾಲಯದಲ್ಲಿ ನೂತನ ಯಾಜಕರಾಗಿ ಗುರುದೀಕ್ಷೆ ಸ್ವೀಕರಿಸಿದ ರೆ| ಫಾ| ವಿಲ್ಫ್ರೆಡ್ ಸ್ಟೀವನ್ ರೊಡ್ರಿಗಸ್ ಹಾಗೂ ಡಾಕ್ಟರೇಟ್ ಪದವಿ ಪಡೆದ ಡಾ| ಸೈಮನ್ ...
ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪ ಎಫ್ಐಆರ್ನಲ್ಲಿ ಸೇರಿಸಿಲ್ಲ: ಬಣಕಲ್ ಪೊಲೀಸರ ವಿರುದ್ಧ ಗಾಯಾಳುಗಳ ಆಕ್ರೋಶ ಕೊಕ್ಕಡ: ಮಂತ್ರಾಲಯಕ್ಕೆ ತೆರಳುತ್ತಿದ್ದ ಶಿಶಿಲದ ಸ್ನೇಹಿತರಿದ್ದ ಕಾರಿಗೆ ಎದುರಿನಿಂದ ಬಂದ ...