ನೆಲ್ಯಾಡಿ: ಕೊಣಾಲು-ನೆಲ್ಯಾಡಿ ಸೈಂಟ್ ಥೋಮಸ್ ಯಾಕೋಬಾಯ ಸಿರಿಯನ್ ಆರ್ಥೊಡಾಕ್ಸ್ ಚರ್ಚ್ನ ಅಧೀನದಲ್ಲಿರುವ ಕೊಪ್ಪ ಮೋರ್ ಗ್ರಿಗೋರಿಯೋಸ್ ಚಾಪೆಲ್ನಲ್ಲಿ ಪರಿಶುದ್ಧ ಮೋರ್ ಗ್ರಿಗೋರಿಯೋಸ್ ತಿರುಮೇನಿಯವರ 124ನೇ ಓರ್ಮಪೆರುನ್ನಾಳ್ ಆಚರಣೆಯು ಅ.31 ರಿಂದ ನ.2ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ಕೇರಳದ ಕೋಟಯಂ ಭದ್ರಾಸನದ ವೆ.ರೆ.ಫಾ.ಶೀಮೋನ್ ರಂಬಾಚನ್ ಅವರ ಮುಖ್ಯ ಕಾರ್ಮಿಕತ್ವದಲ್ಲಿ ನಡೆದ ಈ ಹಬ್ಬದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿತು. ಭಕ್ತರು ಜಾತಿ, ಮತ ಭೇದವಿಲ್ಲದೆ ಭಾಗವಹಿಸಿ ಪರಿಶುದ್ಧ ಮೋರ್ ಗ್ರಿಗೋರಿಯೋಸ್ ತಿರುಮೇನಿಯವರ ಮಧ್ಯಸ್ಥಿಕೆಯಿಂದ ದೇವರ ಅನುಗ್ರಹಕ್ಕೆ ಪಾತ್ರರಾದರು.
ಅ.31ರಂದು ಬೆಳಗ್ಗೆ 7.30ಕ್ಕೆ ಪ್ರಭಾತ ನಮಸ್ಕಾರ, ಬೆಳಗ್ಗೆ 8.15ಕ್ಕೆ ಜೆಪ್ಪು ಮಂಗಳೂರು ಸೈಂಟ್ ಆಂಟನೀಸ್ ಸಿರಿಯನ್ ಕ್ಯಾಥೆಡ್ರಲ್ನ ವಿಕಾರ್ ವೆ.ರೆ.ಜೋನ್ ವರ್ಗಿಸ್ ಕೋರ್ ಎಪಿಸ್ಕೋಪ್ ಅವರ ನೇತೃತ್ವದಲ್ಲಿ ಪ್ರಾರ್ಥನಾ ವಿಧಿವಿಧಾನಗಳು ನೆರವೇರಿತು. ಬೆಳಗ್ಗೆ 10 ಗಂಟೆಗೆ ಹಬ್ಬದ ಧ್ವಜಾರೋಹಣ ನೆರವೇರಿತು. ನ.1ರಂದು ಬೆಳಗ್ಗೆ 7.30ಕ್ಕೆ ಪ್ರಭಾತ ನಮಸ್ಕಾರ, ಬೆಳಗ್ಗೆ 8.15ಕ್ಕೆ ಮಾತೃ ದೇವಾಲಯದಲ್ಲಿ ಪುಣ್ಯಶ್ಲೋಕನಾದ ಆಬೂನ್ ಮೋರ್ ಬಸೆಲಿಯೋಸ್ ಥೋಮಸ್ ಪ್ರಥಮ ಕಾತೋಲಿಕ ಬಾವ ಅವರ ಎರಡನೇ ಶ್ರಾದ್ಧಪೆರುನ್ನಾಳ್ನೆರವೇರಿತು. ಸಂಜೆ 5 ಗಂಟೆಗೆ ಮಾತೃ ದೇವಾಲಯದಿಂದ ಚಾಪೆಲ್ಗೆ ಮೆರವಣಿಗೆ, ಸಂಜೆ 7 ಗಂಟೆಗೆ ಸಂಧ್ಯಾ ನಮಸ್ಕಾರ. ಬಳಿಕ ಧಾರ್ಮಿಕ ವಿಧಿವಿಧಾನಗಳು ಹಾಗೂ ನೇರ್ಚ ಭೋಜನದ ವ್ಯವಸ್ಥೆ ನಡೆಯಿತು. ನ.2ರಂದು ಬೆಳಗ್ಗೆ 7.15ಕ್ಕೆ ಪ್ರಭಾತ ನಮಸ್ಕಾರ, ಬೆಳಗ್ಗೆ 8.15ಕ್ಕೆ ವೆ.ರೆ.ಫಾ.ಶೀಮೋನ್ ರಂಬಾಚನ್ ಅವರ ನೇತೃತ್ವದಲ್ಲಿ ಪವಿತ್ರ ಬಲಿಪೂಜೆ. ಬೆಳಗ್ಗೆ 9.30ಕ್ಕೆ ಮಧ್ಯಸ್ಥ ಪ್ರಾರ್ಥನೆ ಹಾಗೂ 10 ಗಂಟೆಗೆ ಹಬ್ಬದ ಸಂದೇಶ ಮತ್ತು ಪರಿಶುದ್ಧರ ತಿರುತೇಷಿಪ್ಪು ಪೆಟ್ಟಿಗೆಯಿಂದ ಆಘೋಷವಾಗಿ ಹೊರತೆಗೆಯುವ ಧಾರ್ಮಿಕ ವಿಧಿವಿಧಾನ ನೆರವೇರಿತು. ಬೆಳಗ್ಗೆ 10.30ಕ್ಕೆ ಸೀಬಾ ಎಯುನ್ನಳ್ಳಿಪ್ಪು ಹಾಗೂ ತಕ್ಸ ಎಯುನ್ನಳ್ಳಿಪ್ಪು, ಬೆಳಗ್ಗೆ 11.30ಕ್ಕೆ ಮೆರವಣಿಗೆ, ಆಶೀರ್ವಾದ ಮತ್ತು ಲೇಲಂ, ಮಧ್ಯಾಹ್ನ 1 ಗಂಟೆಗೆ ಸಾಮೂಹಿಕ ಭೋಜನ ಹಾಗೂ ಧ್ವಜಾವರೋಹಣದೊಂದಿಗೆ ಹಬ್ಬದ ಕಾರ್ಯಕ್ರಮಗಳು ಮುಕ್ತಾಯಗೊಂಡಿತು.
ಕೋರ್ ಎಪಿಸ್ಕೋಪ್, ವಿವಿಧ ಚರ್ಚ್ ನ ಧರ್ಮಗುರುಗಳು, ಚಾಪೆಲ್ನ ವಿಕಾರಿ ರೆ.ಫಾ.ಯೋಹನ್ನಾನ್ ಟಿ.ಜಿ., ಕಾರ್ಯದರ್ಶಿ ಮಧು ಎ.ಜೆ. ತೆಟ್ಟಾಲಿಲ್, ಜಂಟಿ ಕಾರ್ಯದರ್ಶಿ ಅನಿಲ್ ಅಬ್ರಹಾಂ ಮಣಪ್ಪುರತ್ ಹಾಗೂ ಟ್ರಸ್ಟಿ ಶಿಬು ಜೋನ್ ಮಡತ್ತಿಲೇತ್ ಹಾಗೂ ಚರ್ಚ್ ನ ಸದಸ್ಯರು ಭಾಗವಹಿಸಿದ್ದರು.
ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ...

72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಪಂಜ ವಲಯ ಅರಣ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ನೆಲ್ಯಾಡಿ: “ಆವಾಸ ಸ್ಥಾನಗಳ ಜೋಡಣೆ ಹಾಗೂ ವನ್ಯಜೀವಿಗಳ ಅಭಿವೃದ್ಧಿ” ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ...
ಉಪ್ಪಿನಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಉಪ್ಪಿನಂಗಡಿ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ–ಬಾಲಕಿಯರ ಕ್ರೀಡಾಕೂಟ ಹಿರೆಬಂಡಾಡಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದಲ್ಲಿ ಇಂದ್ರಪ್ರಸ್ಥ ...
ಕೊಕ್ಕಡ: ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಶಿಶಿಲ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತಾ ಹೀ ಸೇವಾ ಸಮಾರೋಪ ಸಮಾರಂಭದೊಂದಿಗೆ ವಿಶೇಷ ಗ್ರಾಮ ಸಭೆ ನಡೆಯಿತು. ಪಂಚಾಯತ್ ಆಡಳಿತಾಧಿಕಾರಿ ಭರತ್ ...
ಕೊಕ್ಕಡ: ಸಂತ ಜೋನ್ ಬ್ಯಾಪ್ಟಿಸ್ಟ್ ದೇವಾಲಯದಲ್ಲಿ ನೂತನ ಯಾಜಕರಾಗಿ ಗುರುದೀಕ್ಷೆ ಸ್ವೀಕರಿಸಿದ ರೆ| ಫಾ| ವಿಲ್ಫ್ರೆಡ್ ಸ್ಟೀವನ್ ರೊಡ್ರಿಗಸ್ ಹಾಗೂ ಡಾಕ್ಟರೇಟ್ ಪದವಿ ಪಡೆದ ಡಾ| ಸೈಮನ್ ...
ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪ ಎಫ್ಐಆರ್ನಲ್ಲಿ ಸೇರಿಸಿಲ್ಲ: ಬಣಕಲ್ ಪೊಲೀಸರ ವಿರುದ್ಧ ಗಾಯಾಳುಗಳ ಆಕ್ರೋಶ ಕೊಕ್ಕಡ: ಮಂತ್ರಾಲಯಕ್ಕೆ ತೆರಳುತ್ತಿದ್ದ ಶಿಶಿಲದ ಸ್ನೇಹಿತರಿದ್ದ ಕಾರಿಗೆ ಎದುರಿನಿಂದ ಬಂದ ...
ಅರಸಿನಮಕ್ಕಿ: ಮಹಾತ್ಮಗಾಂಧಿ ಜಯಂತಿಯ ಅಂಗವಾಗಿ ಅರಸಿನಮಕ್ಕಿ ಗ್ರಾಮ ಪಂಚಾಯಿತಿ ವತಿಯಿಂದ ಗಾಂಧಿ ಜಯಂತಿ ಆಚರಣೆ ಹಾಗೂ ‘ಸ್ವಚ್ಛತಾ ಹೀ ಸೇವಾ’ ಅಭಿಯಾನದ ಸಮಾರೋಪ ಸಮಾರಂಭ ನಡೆಯಿತು. ಇದೇ ...
ನೆಲ್ಯಾಡಿ: ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ನೆಲ್ಯಾಡಿ ಮಹಾಶಕ್ತಿ ಕೇಂದ್ರದ ವತಿಯಿಂದ ‘ಸೇವಾ ಸಂಕಲ್ಪ ಅಭಿಯಾನ’ದ ಅಂಗವಾಗಿ ಅ.4ರಂದು ನೆಲ್ಯಾಡಿಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ನೆಲ್ಯಾಡಿಯ ...
ನೆಲ್ಯಾಡಿ: ಕಡಬ ತಾಲೂಕಿನ ಗುಂಡ್ಯ–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಅನಿಲ ಸಮೀಪ ಶುಕ್ರವಾರ ಸಂಜೆ ಚಲಿಸುತ್ತಿದ್ದ ಕಾರಿಗೆ ಕಡವೆಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಸುಬ್ರಹ್ಮಣ್ಯದಿಂದ ...
ನೆಲ್ಯಾಡಿ: ನೆಲ್ಯಾಡಿಯ ಲೈಫ್ ಫಾರ್ಮಾ ಸಂಸ್ಥೆಯಲ್ಲಿ ಔಷಧ ವಿತರಣೆ ಹಾಗೂ ಕಂಪ್ಯೂಟರ್ ಬಿಲ್ಲಿಂಗ್ ಕೆಲಸ ನಿರ್ವಹಿಸಲು ಸಿಬ್ಬಂದಿ ತುರ್ತಾಗಿ ಅಗತ್ಯವಿದ್ದಾರೆ. ಅಭ್ಯರ್ಥಿಗಳು ಎಸ್ಎಸ್ಎಲ್ಸಿ, ಪಿಯುಸಿ ಅಥವಾ ಯಾವುದೇ ...
ಶಿರಾಡಿ: ಕಡಬ ತಾಲೂಕು ಶಿರಾಡಿ ಗ್ರಾಮದ ಎಸ್.ಆರ್.ಎಸ್. ಪೆಟ್ರೋಲ್ ಪಂಪ್ ಸಮೀಪ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಬೊಲೆರೋ ಪಿಕ್ಅಪ್ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ...
ಕೊಕ್ಕಡ: ನಿಡ್ಲೆ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ 2026-27ನೇ ಸಾಲಿನ ಕೊಕ್ಕಡ, ನಿಡ್ಲೆ ಹಾಗೂ ಪೆರ್ಲ ಕ್ಲಸ್ಟರ್ಗಳ ವಲಯ ಮಟ್ಟದ 14ರ ವಯೋಮಾನದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಶಿಶಿಲದ ಮಹರ್ಷಿ ...
ಕೊಕ್ಕಡ: ನಾಲ್ಕು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಶಿಶಿಲ–ಬೈರಾಪುರ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳ ಮೂಲಕ ಪೂರ್ಣ ಪ್ರಮಾಣದ ಪ್ರಯತ್ನ ನಡೆಸಲಾಗುವುದು ಎಂದು ಮಂಗಳೂರು ಲೋಕಸಭಾ ...
ನೆಲ್ಯಾಡಿ: ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ನಾಟೆಕಲ್–ಮಂಗಳೂರು ಹಾಗೂ ಬದ್ರಿಯಾ ಜುಮಾ ಮಸೀದಿ ನೆಲ್ಯಾಡಿಯ ಅಧೀನ ಸಂಸ್ಥೆಯಾದ ನುಸ್ರತುಲ್ ಮಸಾಕೀನ್ ಯಂಗ್ ಮೆನ್ಸ್ ...