


ನೆಲ್ಯಾಡಿ: ಸಂತ ಅಲ್ಫೋನ್ಸಾ ಪುಣ್ಯಕ್ಷೇತ್ರದಲ್ಲಿ ನೂತನ ಚರ್ಚ್ ನಿರ್ಮಾಣದ ಶಿಲಾನ್ಯಾಸ ಸಮಾರಂಭವು ನ.5ರಂದು ಗುರುವಾರ ನಡೆಯಲಿದೆ.
ಅಂದು ಬೆಳಿಗ್ಗೆ 9 ಗಂಟೆಗೆ ಪವಿತ್ರ ಬಲಿಪೂಜೆ ನಡೆಯಲಿದ್ದು, 9.45ಕ್ಕೆ ಪ್ರಾರ್ಥನಾ ವಿಧಿ ನೆರವೇರಲಿದೆ. ಬಳಿಕ ಬೆಳಿಗ್ಗೆ 10 ಗಂಟೆಗೆ ನೂತನ ಚರ್ಚ್ನ ಅಡಿಪಾಯದ ಶಿಲೆಗೆ ಆಶೀರ್ವಾದ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಜರುಗಲಿದೆ.
ಈ ಸಮಾರಂಭದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಸಿರೊ-ಮಲಬಾರ್ ಸಭೆಯ ಭಾರತೀಯ ಕ್ಯಾಥೋಲಿಕ್ ಧರ್ಮಾಧ್ಯಕ್ಷರಾದ ಅತೀ ವಂ.ಮಾರ್ ಜೇಮ್ಸ್ ಪಟೇರಿಲ್, ಸಿರೋ-ಮಲಬಾರ್ ಕ್ಯಾಥೋಲಿಕ್ ಚರ್ಚಿನ ಪ್ರಮುಖ ಧರ್ಮಗುರುಗಳು ಮತ್ತು ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರಥಮ ಬಿಷಪ್ ಅತೀ ವಂ.ಮಾರ್ ಲಾರೆನ್ಸ್ ಮುಕ್ಕುಝಿ ಹಾಗೂ ಪುತ್ತೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂ.ಮಾರ್ ಡಾ. ಗೀವರ್ಗೀಸ್ ಮಕಾರಿಯೋಸ್ ಸೇರಿದಂತೆ ಹಲವು ಚರ್ಚ್ ನ ಧರ್ಮಗುರುಗಳ ಹಾಗೂ ಚರ್ಚ್ ನ ಎಲ್ಲಾ ಭಕ್ತಾದಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಚರ್ಚ್ ನ ಧರ್ಮಗುರು ವಂ.ಫಾ.ಶಾಜಿ ಮಾತ್ಯು, ಪಾಲನಾ ಮಂಡಳಿ ಹಾಗೂ ಟ್ರಸ್ಟಿಗಳು ತಿಳಿಸಿದರು.








































































































