


ಧರ್ಮಸ್ಥಳ: ಅಳಿಕೆ ಸತ್ಯಸಾಯಿ ಶಿಕ್ಷಣಸಂಸ್ಥೆಗಳ ಕಾರ್ಯದರ್ಶಿ, ಚಂದ್ರಶೇಖರ್ ಭಟ್ ನೇತೃತ್ವದಲ್ಲಿ ಶಿಕ್ಷಕರು ಮತ್ತು 36ವಿದ್ಯಾರ್ಥಿಗಳು ಮಂಗಳವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಗೌರವಾರ್ಪಣೆ ಮಾಡಿದರು.
ಅಳಿಕೆ ಸಂಸ್ಥೆಗಳ ಕಾರ್ಯದರ್ಶಿ ಚಂದ್ರಶೇಖರ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಅಳಿಕೆಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದ್ದು ಅಳಿಕೆಯ ಸಂಸ್ಥೆಗಳ ಪ್ರಗತಿಗೆ ಹೆಗ್ಗಡೆಯವರ ಕೊಡುಗೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಅಳಿಕೆಯಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಮಡಿಯಾಲ ನಾರಾಯಣ ಭಟ್ ಅವರ ಸೇವೆಯನ್ನು ಸ್ಮರಿಸಿದ ಅವರು ಇದೇ ನ.29ರಂದು ಭಾನುವಾರ ಮಡಿಯಾಲರ ಜನ್ಮಶತಮಾನೋತ್ಸವ ಸಮಾರಂಭ ಆಯೋಜಿಸಲಾಗಿದ್ದು ಅದಕ್ಕೆ ಹೆಗ್ಗಡೆಯವರನ್ನು ಆದರದಿಂದ ಆಹ್ವಾನಿಸಿದರು. ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಪೂಜ್ಯ ಹೆಗ್ಗಡೆಯವರು ಅಳಿಕೆಯಲ್ಲಿರುವ ಶಿಕ್ಷಣ ಸಂಸ್ಥೆಗಳ ಸೇವೆ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಮುಂದೆಯೂ ಎಲ್ಲಾ ಸಂಸ್ಥೆಗಳು ಉತ್ತರೋತ್ತರ ಪ್ರಗತಿಯನ್ನು ಸಾಧಿಸಲೆಂದು ಅವರು ಶುಭ ಹಾರೈಸಿದರು








































































































