| ಇಲಾಖೆಗಳು ಫುಟ್‌ಬಾಲ್‌ನಂತೆ ಗೋಲ್ ಪಾಸ್ ಮಾಡಬೇಡಿ; ಸಮಸ್ಯೆಗೆ ಗೋಲ್ ಹೊಡೆಯುವಂತೆ ಪರಿಹಾರ ನೀಡಿ – ಜನರ ಸಮಸ್ಯೆಗೆ ತ್ವರಿತ ಸ್ಪಂದನೆಗೆ ಕಟ್ಟುನಿಟ್ಟಿನ ಸೂಚನೆ |







ಕಡಬ: ಪ್ರಾಕೃತಿಕ ವಿಕೋಪದಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಯಾವುದೇ ಇಲಾಖೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಾರದು. ಜನರ ಸಮಸ್ಯೆಯನ್ನು ಮತ್ತೊಂದು ಇಲಾಖೆಗೆ ತಳ್ಳುವ ಬದಲು ತಕ್ಷಣ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಗುರುವಾರ ಕಡಬ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಾಕೃತಿಕ ವಿಕೋಪ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಲಾಖೆಗಳು ಫುಟ್‌ಬಾಲ್ ಆಟದಂತೆ ಗೋಲ್ ಪಾಸ್ ಮಾಡಬಾರದು. ಗೋಲ್ ಹೊಡೆಯುವ ಆಟಗಾರರಂತೆ ಸಮಸ್ಯೆಗೆ ಪರಿಹಾರ ನೀಡಬೇಕು. ಸರ್ಕಾರದ ನಿಜವಾದ ಮುಖ ತಳಮಟ್ಟದ ಅಧಿಕಾರಿಗಳೇ ಆಗಿದ್ದು, ಅವರ ಕಾರ್ಯವೈಖರಿಯೇ ಸರ್ಕಾರದ ಬಗ್ಗೆ ಜನರ ಅಭಿಪ್ರಾಯ ರೂಪಿಸುತ್ತದೆ ಎಂದು ಹೇಳಿದರು.
ಮನೆ ಕುಸಿತ ಸಂತ್ರಸ್ತರಿಗೆ ತಕ್ಷಣ ಪರಿಹಾರ:
ಕಡಬ ತಾಲೂಕಿನಲ್ಲಿ ಮನೆ ಕುಸಿತ ಪ್ರಕರಣಗಳಿಗೆ ಸರ್ಕಾರದಿಂದ ನೀಡಬೇಕಾದ ತಕ್ಷಣದ ರೂ.5,500 ಪರಿಹಾರ ಇನ್ನೂ ವಿತರಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಮಳೆಗಾಲದಲ್ಲಿ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಯಾವುದೇ ವಿಳಂಬವಿಲ್ಲದೆ ಪರಿಹಾರ ವಿತರಿಸಬೇಕು. ಅಲ್ಲದೆ ಹೆಚ್ಚಿನ ಪರಿಹಾರ ದೊರಕುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮೆಸ್ಕಾಂ ಅಧಿಕಾರಿಗಳಿಗೆ ತರಾಟೆ:
ವಿದ್ಯುತ್ ವ್ಯತ್ಯಯ ಹಾಗೂ ಸಾರ್ವಜನಿಕರ ದೂರುಗಳ ಬಗ್ಗೆ ಮೆಸ್ಕಾಂ ಅಧಿಕಾರಿಗಳನ್ನು ತುಳುವಿನಲ್ಲೇ ಪ್ರಶ್ನಿಸಿದ ಸಚಿವರು, ಸಾರ್ವಜನಿಕರಿಂದ ಬರುವ ಕರೆಗಳಿಗೆ ಸ್ಪಂದಿಸದಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು, ಕರೆ ಮಾಡಿದರೂ ಸಿಬ್ಬಂದಿ ಕರೆ ಸ್ವೀಕರಿಸುವುದಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರತಿಯೊಂದು ಮೆಸ್ಕಾಂ ಕಚೇರಿಯಲ್ಲೂ 24 ಗಂಟೆಗಳ ಕಾಲ ಕರೆ ಸ್ವೀಕರಿಸುವ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು. ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು. ಕರ್ತವ್ಯಲೋಪ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅರಣ್ಯ–ಕಂದಾಯ ಇಲಾಖೆಗಳ ಜಂಟಿ ಸಭೆಗೆ ಸೂಚನೆ:
ಅಪಾಯಕಾರಿ ಮರಗಳ ತೆರವು, ಭಾಗಶಃ ಅರಣ್ಯ ಹಾಗೂ ಪ್ಲಾಟಿಂಗ್ ಸಮಸ್ಯೆಗಳು ಕಡಬ, ಪುತ್ತೂರು ಮತ್ತು ಸುಳ್ಯ ಭಾಗಗಳಲ್ಲಿ ಹೆಚ್ಚಿರುವುದರಿಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಗಳ ಜಂಟಿ ಸಭೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಸಚಿವರು ಸೂಚಿಸಿದರು. ಅಪಾಯಕಾರಿ ಮರ ತೆರವುಗೆ ಹಣದ ಕೊರತೆಯನ್ನು ನೆಪ ಮಾಡಬಾರದು. ಅಗತ್ಯವಿದ್ದರೆ ಸ್ಥಳೀಯ ಸಂಸ್ಥೆಗಳ ಮೂಲಕ ವೆಚ್ಚ ಭರಿಸಿ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುವ ಮುನ್ನವೇ ಕ್ರಮ ಕೈಗೊಳ್ಳಬೇಕು ಎಂದರು.
ಖಾಸಗಿ ಜಾಗದ ಅಪಾಯಕಾರಿ ಮರಗಳಿಗೂ ಕ್ರಮ:
ಖಾಸಗಿ ಜಾಗದಲ್ಲಿರುವ ಅಪಾಯಕಾರಿ ಮರಗಳು ಅಥವಾ ಕುಸಿಯುವ ಹಂತದಲ್ಲಿರುವ ಕಾಂಪೌಂಡ್ ಗೋಡೆಗಳಿಂದ ಸಾರ್ವಜನಿಕರಿಗೆ ಅಪಾಯ ಉಂಟಾಗುವ ಪರಿಸ್ಥಿತಿ ನಿರ್ಮಾಣವಾದರೆ, ತೆರವುಗೆ ಮಾಲೀಕರು ವಿರೋಧಿಸಿದಲ್ಲಿ ಅಪಾಯ ಸಂಭವಿಸಿದರೆ ನಾವೇ ಹೊಣೆ ಎಂಬ ಬಾಂಡ್ ಪಡೆದುಕೊಳ್ಳುವಂತೆ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳಿಗೆ ಪರಿಹಾರ:
ನೆಲ್ಯಾಡಿ ಬಸ್ ನಿಲ್ದಾಣಕ್ಕೆ ಬಸ್‌ಗಳು ಪ್ರವೇಶಿಸದಿರುವುದು, ರಸ್ತೆ ವಿಭಾಜಕಗಳ ಕೊರತೆ ಹಾಗೂ ಅಪಾಯಕಾರಿ ಮರಗಳ ತೆರವು ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವರು, ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಶೀಘ್ರ ಸಮಸ್ಯೆ ಬಗೆಹರಿಸುವಂತೆ ನಿರ್ದೇಶನ ನೀಡಿದರು.
ರಸ್ತೆ ಗುಂಡಿಗಳ ದುರಸ್ತಿಗೆ ಸೂಚನೆ:
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ವತಃ ರಸ್ತೆಗಳನ್ನು ಪರಿಶೀಲಿಸಿ ಗುಂಡಿಗಳನ್ನು ತಕ್ಷಣ ಮುಚ್ಚಬೇಕು. ಕಾರುಗಳಲ್ಲಿ ಸಂಚರಿಸಿದರೆ ಸಮಸ್ಯೆ ಗೊತ್ತಾಗುವುದಿಲ್ಲ. ಬೈಕ್ ಹಾಗೂ ಆಟೋಗಳಲ್ಲಿ ಸಂಚರಿಸುವ ಜನರ ಕಷ್ಟವನ್ನು ಅರಿತು ಕೆಲಸ ಮಾಡಬೇಕು ಎಂದು ಸಚಿವರು ಹೇಳಿದರು.
ಆರೋಗ್ಯ ಇಲಾಖೆಗೆ ತರಾಟೆ:
ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಫಾರ್ಮಸಿಸ್ಟ್ ಹಾಗೂ ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕೇವಲ ಪ್ರಕಟಣೆ ಹೊರಡಿಸಿ ಸುಮ್ಮನಿರದೆ ಸ್ಥಳೀಯ ಪತ್ರಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕ ಪ್ರಚಾರ ನಡೆಸಿ ತಕ್ಷಣ ನೇಮಕಾತಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಕಲಿಕಾ ವೈದ್ಯರ ಬಗ್ಗೆ ದೂರು:
ಕೆವಿಜಿ ವೈದ್ಯಕೀಯ ಕಾಲೇಜಿನ ಕಲಿಕಾ ವೈದ್ಯರು ಸಮರ್ಪಕವಾಗಿ ಪರೀಕ್ಷೆ ನಡೆಸದೆ ಔಷಧಿ ನೀಡುತ್ತಿರುವ ಬಗ್ಗೆ ಸಭೆಯಲ್ಲಿ ದೂರು ಕೇಳಿಬಂದ ಹಿನ್ನೆಲೆಯಲ್ಲಿ, ಅನುಭವಿ ವೈದ್ಯರೊಂದಿಗೆ ಕಲಿಕಾ ವೈದ್ಯರನ್ನು ನಿಯೋಜಿಸುವ ಕುರಿತು ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೂ ಗಮನ
ಕಡಬದಲ್ಲಿ ಬಸ್ ನಿಲ್ದಾಣಕ್ಕೆ ಜಾಗ ಗುರುತಿಸಿದರೂ ಕೆಎಸ್‌ಆರ್‌ಟಿಸಿ ಯಾವುದೇ ಆಸಕ್ತಿ ತೋರಿಸುತ್ತಿಲ್ಲ ಎಂಬ ದೂರಿನ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಅಪಾಯಕಾರಿ ಶಾಲಾ ಕಟ್ಟಡಗಳನ್ನು ಗುರುತಿಸಿ ವಿದ್ಯಾರ್ಥಿಗಳ ಪ್ರವೇಶ ನಿಷೇಧಿಸುವುದು, ಶಾಲಾ ಮಕ್ಕಳಿಗೆ ವಿತರಿಸುವ ಶೂಗಳ ಗುಣಮಟ್ಟ ಪರಿಶೀಲಿಸಿ ವಿತರಿಸುವುದು, ಪಂಚಾಯತ್‌ಗಳಲ್ಲಿ ಚುನಾಯಿತ ಆಡಳಿತ ಇಲ್ಲದಿರುವ ಹಿನ್ನೆಲೆಯಲ್ಲಿ ಅನುದಾನವನ್ನು ಅಗತ್ಯ ಕಾಮಗಾರಿಗಳಿಗೆ ಮಾತ್ರ ಬಳಸುವುದು ಹಾಗೂ ಪಟ್ಟಣ ಪಂಚಾಯತ್ ಅಭಿವೃದ್ಧಿ ಕಾಮಗಾರಿಗಳಿಗೆ ಸಮರ್ಪಕ ಅಂದಾಜು ಪತ್ರ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಸಭೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ, ಕಡಬ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿ ದರ್ಶನ್ ಹೆಚ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಭಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಜಬೀನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.





ಪುದುವೆಟ್ಟು: ಕಸ್ತೂರಿರಂಗನ್ ವರದಿ ವಿರುದ್ಧ ಪ್ರತಿಭಟನೆ; 7ನೇ ಕರಡು ಅಧಿಸೂಚನೆ ವಿರೋಧಿಸಿ ಆಕ್ಷೇಪಣಾ ಪತ್ರ ಸಲ್ಲಿಕೆ
ಶಿಶಿಲ: ಚಂದ್ರಪುರ ಜಿನಮಂದಿರದಲ್ಲಿ ಶ್ರಾವಣ ಶುಕ್ರವಾರದ ವಿಶೇಷ ಪೂಜೆ
ನೆಲ್ಯಾಡಿ: ವಿದ್ಯಾರ್ಥಿಗಳಿಗೆ ನಾಯಕತ್ವ ತರಬೇತಿ ಕಾರ್ಯಕ್ರಮ
ಸ್ಕೂಟರ್‌ಗೆ ಬೈಕ್ ಡಿಕ್ಕಿ: ನೆಲ್ಯಾಡಿಯ ಮಹಿಳೆಗೆ ಗಾಯ
ನೆಲ್ಯಾಡಿ: ಗಣೇಶೋತ್ಸವದ ಅಂಗವಾಗಿ ನೆಲ್ಯಾಡಿ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಶೌರ್ಯ ಸ್ವಯಂಸೇವಕರಿಂದ ಸ್ವಚ್ಛತಾ ಶ್ರಮದಾನ
ಶಿರಾಡಿ: ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಪ್ರತಿಭಟನೆ -ಮನವಿ ಸಲ್ಲಿಕೆ
ನೆಲ್ಯಾಡಿ: ಜಯಾನಂದ ಬಂಟ್ರಿಯಾಲ್ ನುಡಿನಮನ ಕಾರ್ಯಕ್ರಮ
ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪೋಕ್ಸ್ ಪ್ರಕರಣದ ಆರೋಪಿ ಕಾಪಿನಬಾಗಿಲು ರಮೇಶನ ಬಂಧನ; 14 ದಿನ ನ್ಯಾಯಾಂಗ ಬಂಧನ
ಸೆ.12ರಂದು ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ಮಹಾಸಭೆ – ವಿಕಲಚೇತನರಿಗಾಗಿ ‘ಆಸರೆ’ ಕಾರ್ಯಕ್ರಮ
ಪುದುವೆಟ್ಟು: ಬಾವಿಗೆ ಹಾರಿ ಯುವತಿ ಆತ್ಮಹತ್ಯೆ
ನೆಲ್ಯಾಡಿ: ವ್ಯಸನ ಮುಕ್ತ ಭಾರತ: ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ
ಕಡಬ: ಸುಸ್ಥಿರ ಸಮಾಜಕ್ಕಾಗಿ ಹೆಜ್ಜೆ; ನಿವೃತ್ತ ಸೈನಿಕರು ಮತ್ತು ಜೇಸಿ ಸದಸ್ಯರಿಂದ ಕಾಲ್ನಡಿಗೆ ಜಾಥಾ
ಉದನೆ: ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಯಲ್ಲಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ
ನೆಲ್ಯಾಡಿಯಲ್ಲಿ ಯು-ಟರ್ನ್‌ಗಾಗಿ ಬೃಹತ್ ಪ್ರತಿಭಟನೆ
ಕೊಕ್ಕಡ: ಸಂತ ಜೋನರ ದೇವಾಲಯದಲ್ಲಿ ತೆನೆ ಹಬ್ಬ
ಕೌಕ್ರಾಡಿ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಮನವಿ
ನೆಲ್ಯಾಡಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಬೀಳ್ಕೊಡುಗೆ
ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಗೋಳಿತ್ತೊಟ್ಟು ಗ್ರಾಮಸ್ಥರ ಪ್ರತಿಭಟನೆ
ನೆಲ್ಯಾಡಿ: ಪ್ರಾಥಮಿಕ ಆರೋಗ್ಯ ಕೇಂದ್ರದ ಇಬ್ಬರು ಸಿಬ್ಬಂದಿಗೆ ಮುಂಬಡ್ತಿ, ವರ್ಗಾವಣೆ
ನಾಳೆ ನೆಲ್ಯಾಡಿಯಲ್ಲಿ ಯು-ಟರ್ನ್‌ಗಾಗಿ ಬೃಹತ್ ಪ್ರತಿಭಟನೆ
ಗೋಳಿತ್ತೊಟ್ಟು: ಅನಾರೋಗ್ಯದಿಂದ 2ನೇ ತರಗತಿ ಬಾಲಕ ನಿಧನ
ಉಪ್ಪಿನಂಗಡಿ: ದ್ವಿತೀಯ ದರ್ಜೆ ಸಹಾಯಕಿ ಉಷಾಕಿರಣ ಅವರಿಗೆ ಬೀಳ್ಕೊಡುಗೆ
ನೆಲ್ಯಾಡಿ ಜೆಸಿ ಸಪ್ತಾಹಕ್ಕೆ ಚಾಲನೆ; ಆಟೋ ಚಾಲಕರಿಗೆ ಸ್ಟೀಲ್ ಬಾಟಲ್ ವಿತರಣೆ
ಬಜತ್ತೂರು ಶೌರ್ಯ ತಂಡದ ಮಾನವೀಯ ಸೇವೆ; ಬಡಮಹಿಳೆಗೆ ನೂತನ ಮನೆ ಹಸ್ತಾಂತರ
ಕಾಂಚನ ಶಾಲೆಯ ಹ್ಯಾಂಡ್‌ಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಅರಸಿನಮಕ್ಕಿ: ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವಾರ್ಷಿಕ ಮಹಾಸಭೆ: 1.69ಕೋಟಿ ಲಾಭ 13% ಡಿವಿಡೆಂಟ್
ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 75ರ ಸಂಭ್ರಮ
ಪ್ಲಾಟಿಂಗ್‌ಗೆ ವಿಳಂಬ, ಅಂಗನವಾಡಿ ಮೀಸಲು ಜಾಗ ಒತ್ತುವರಿ!
ಗುರುವಿನ ಮಾರ್ಗದರ್ಶನವೇ ಯಶಸ್ಸಿನ ಮೆಟ್ಟಿಲು: ಶಿವಾನಂದ ಆಚಾರ್ಯ
ನೆಲ್ಯಾಡಿ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಸಂತ ಜಾರ್ಜ್ ಶಾಲೆಯ ತೋಮಸ್ ಎಂ.ಐ. ಆಯ್ಕೆ
ಇಚ್ಲಂಪಾಡಿ 14ನೇ ವರ್ಷದ ಶ್ರೀ ಗಣೇಶೋತ್ಸವ: ಸಡಗರದ ಸಿದ್ಧತೆ
ಉಪ್ಪಿನಂಗಡಿ ಪೊಲೀಸರ ಕಾರ್ಯಾಚರಣೆ: ಹೆದ್ದಾರಿ ಬದಿ ಡೀಸೆಲ್ ಕಳವು ನಡೆಸುತ್ತಿದ್ದ ಬೃಹತ್ ಜಾಲ ಪತ್ತೆ, ಇಬ್ಬರ ಬಂಧನ
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸ್ಥಾಪನ ದಿನಾಚರಣೆ
ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಶಾಲಾ ಮಕ್ಕಳ ಸುರಕ್ಷತೆಗೆ ಆದ್ಯತೆ: ಬಸ್ ಚಾಲಕರು, ನಿರ್ವಾಹಕರು ಹಾಗೂ ಶಾಲಾ ಆಡಳಿತ ಮಂಡಳಿಗೆ ಜಾಗೃತಿ ಕಾರ್ಯಕ್ರಮ
ಕೊಕ್ಕಡ: ಆನೆ ಹಾವಳಿ ತಡೆಗೆ ಸೌತಡ್ಕ ಮಹಾಗಣಪತಿ ದೇವರಿಗೆ ಅರಣ್ಯ ಇಲಾಖೆಯಿಂದ ರಂಗಪೂಜೆ
ಕಡಬ ತಾಲೂಕು ಭಜನಾ ಪರಿಷತ್ ಸಭೆ
ನೆಲ್ಯಾಡಿ, ಶಿರಾಡಿ, ಮರ್ದಾಳ ಗ್ರಾಮ ಪಂಚಾಯಿತಿಗಳಿಗೆ ಲೋಕಾಯುಕ್ತ ದಾಳಿದಾಖಲೆಗಳ ಪರಿಶೀಲನೆ
ನೆಲ್ಯಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ನೆಲ್ಯಾಡಿ ಸಹಕಾರ ಸಂಘ ₹698.72 ಕೋಟಿ ವ್ಯವಹಾರ; ₹11.93 ಕೋಟಿ ನಿವ್ವಳ ಲಾಭ
ಕಡಬ: ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ಓಣಂ ಹಾಗೂ ಈದ್ ಮಿಲಾದ್ ಆಚರಣೆ
ನೆಲ್ಯಾಡಿ: ಬೆಥನಿ ಐಟಿಐನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
ನೆಲ್ಯಾಡಿ: ಪಿಎಂಶ್ರೀ ಸ್ಕೂಲ್ ವಿದ್ಯಾರ್ಥಿಗಳ ಖೋ-ಖೋ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ
ನೆಲ್ಯಾಡಿ: ಶಾಲೆಯಲ್ಲಿ ಕೈತೋಟ ನಿರ್ಮಾಣ, ಸ್ವಚ್ಛತಾ ಶ್ರಮದಾನ
ನೆಲ್ಯಾಡಿ: ಶ್ರೀ ಶಬರೀಶ ಬಯಲು ರಂಗಮಂಟಪಕ್ಕೆ ಶಿಲಾನ್ಯಾಸ
ಸೆ.9ರಂದು ನೆಲ್ಯಾಡಿಯಲ್ಲಿ ಯು-ಟರ್ನ್‌ಗಾಗಿ ಬೃಹತ್ ಪ್ರತಿಭಟನೆ
ನೆಲ್ಯಾಡಿಯಲ್ಲಿ ಪ್ರಧಾನಿ ಮೋದಿ ಅವರ ‘ಮನ್ ಕೀ ಬಾತ್’ 137ನೇ ಸಂಚಿಕೆ ವೀಕ್ಷಣೆ
ನೆಲ್ಯಾಡಿ: ಆ.30ರಂದು ಶ್ರೀ ಶಬರೀಶ ಬಯಲು ರಂಗ ಮಂಟಪಕ್ಕೆ ಶಿಲಾನ್ಯಾಸ
ನೆಲ್ಯಾಡಿ: ಕಾಮಧೇನು ಶ್ರೀ ವರಮಹಾಲಕ್ಷ್ಮೀ ಸೇವಾ ಸಮಿತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ
ನೆಲ್ಯಾಡಿ: 17ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ
ಕೊಕ್ಕಡ: ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನೂತನ ಗರ್ಭಗುಡಿಗಳಿಗೆ ಶಿಲಾನ್ಯಾಸ
ನೆಲ್ಯಾಡಿ: ಜಯಾನಂದ ಬಂಟ್ರಿಯಾಲ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ
ನಾಳೆ ನೆಲ್ಯಾಡಿಯ ಶ್ರೀರಾಮ ವಿದ್ಯಾಲಯದಲ್ಲಿ 17ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ
ಆ.28ರಂದು ನೆಲ್ಯಾಡಿಯಲ್ಲಿ ಕಾಮಧೇನು ಶ್ರೀ ವರಮಹಾಲಕ್ಷ್ಮೀ ಸೇವಾ ಸಮಿತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ
ಸೌಜನ್ಯಾ ಮನೆಗೆ ಕಲ್ಲಡ್ಕ ಪ್ರಭಾಕರ ಭಟ್ ಭೇಟಿ
ಇಚ್ಲಂಪಾಡಿ: ನೇರ್ಲ ಶಾಲೆಗೆ ಸೀಲಿಂಗ್ ಫ್ಯಾನ್ ಕೊಡುಗೆ
ನಿಡ್ಲೆ: ಕಾಡಾನೆ ದಾಳಿ; ಅಪಾರ ಕೃಷಿ ನಾಶ
ಆ.27ರಂದು ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನೂತನ ಗರ್ಭಗುಡಿಗಳ ಶಿಲಾನ್ಯಾಸ
ಸುಬ್ರಹ್ಮಣ್ಯ: ಆದಿ ಸುಬ್ರಹ್ಮಣ್ಯ ದೇವಳಕ್ಕೆ ಪ್ರವೇಶಿಸಿದ ನೆರೆ ನೀರು
ಆಟಿದ ಪೊಲಬು ಮಾಜಂದಿ ನೆಂಪು: ನೆಲ್ಯಾಡಿಯಲ್ಲಿ ತುಳುನಾಡಿನ ಸಂಸ್ಕೃತಿಯ ಸೊಗಡು
ಈದ್ ಮಿಲಾದ್ ರಜೆ ದಿನಾಂಕ ಬದಲಾವಣೆ: ಆ.25ರಂದು ದ.ಕ ಜಿಲ್ಲೆಗೆ ಸಾರ್ವತ್ರಿಕ ರಜೆ
ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಶೇಕಡ 100 ಸಾಲ ವಸೂಲಾತಿ; ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಶಸ್ತಿ
ನೆಲ್ಯಾಡಿ: ಜೇಸಿ ವಿಶ್ವನಾಥ ಶೆಟ್ಟಿಗೆ ಪ್ರತಿಷ್ಠಿತ ‘ಸಾಧನಶ್ರೀ’ ಪ್ರಶಸ್ತಿ
ಕೆ.ಎನ್.ಎಸ್.ಎಸ್. ನೆಲ್ಯಾಡಿ ಕರಯೋಗಂ ವತಿಯಿಂದ ಓಣಂ ಸಂಭ್ರಮಾಚರಣೆ
ವಾಹನ ಡಿಕ್ಕಿ: ಕೊಲೆ ಯತ್ನ ಆರೋಪಿಗೆ ನ್ಯಾಯಾಂಗ ಬಂಧನ
ಪೆರಿಯಶಾಂತಿ: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಪಲ್ಟಿ
ಇಚ್ಲಂಪಾಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಅಕ್ರಮವಾಗಿ ಜಾನುವಾರು ಸಾಗಾಟ: ವಾಹನ ಸಹಿತ ಆರೋಪಿ ವಶಕ್ಕೆ
ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರ ಸಂಘಕ್ಕೆ ಸಾಧನ ಪ್ರಶಸ್ತಿ
ಗೋಳಿತ್ತೊಟ್ಟು: ಗ್ರಾ.ಪಂ.ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ
ನೇರ್ಲ–ಇಚ್ಲಂಪಾಡಿ ಸರಕಾರಿ ಶಾಲೆಗೆ ಸಿಸಿಟಿವಿ ಕೊಡುಗೆ
ಕಲ್ಲಂತಡ್ಕ ಹಿಂದೂ ರುದ್ರಭೂಮಿ ಸ್ವಚ್ಛತಾ ಕಾರ್ಯ
ನೆಲ್ಯಾಡಿ: ಬೈಕ್ ಕಳ್ಳತನ: ಸಿಸಿ ಕ್ಯಾಮೆರಾದಲ್ಲಿ ಕೃತ್ಯ ಸೆರೆ
ಹತ್ಯಡ್ಕ: ಪ್ಯಾಕ್ಸ್‌ಗೆ ಸತತ 6ನೇ ಬಾರಿ ಪ್ರೋತ್ಸಾಹಕ ಪ್ರಶಸ್ತಿ
ಕೊಕ್ಕಡ: ₹5 ಲಕ್ಷ ವೆಚ್ಚದಲ್ಲಿ ಬ್ಯಾಂಕ್ ಆಫ್ ಬರೋಡಾ ವತಿಯಿಂದ ಸೌತಡ್ಕ ಕ್ಷೇತ್ರಕ್ಕೆ ರೂಫಿಂಗ್ ಟ್ರಾಲಿ ಕೊಡುಗೆ
ಸೆ.5ರಂದು ಅರಸಿನಮಕ್ಕಿಯಲ್ಲಿ 23ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣಜನ್ಮಾಷ್ಟಮಿ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ರಿಕ್ಷಾ ಚಾಲಕನ ಬಂಧನ
ಕಡಬ: ಪೋಕ್ಸೋ ಪ್ರಕರಣ: ಆರೋಪಿಗೆ 5 ವರ್ಷ ಜೈಲು, ₹35 ಸಾವಿರ ದಂಡ
ಗುಂಡ್ಯ: ಪ್ರಯಾಣಿಸುತ್ತಿದ್ದ ಸ್ಕೂಟಿ ಮೇಲೆ ಉರುಳಿಬಿದ್ದ ಮರ; ಸಹಪ್ರಯಾಣಿಕ ಗಂಭೀರ
ಆ.23ರಂದು ಇಚಿಲಂಪಾಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಕೊಕ್ಕಡ ಸರ್ಕಾರಿ ಪ್ರೌಢಶಾಲೆಯ ಜಾಗ ಒತ್ತುವರಿ: ಗಡಿ ಗುರುತಿಸಿ ಶಾಲೆಗೆ ಹಸ್ತಾಂತರಿಸಲು ಆಗ್ರಹ
ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ₹1.25 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ರೆಖ್ಯಾ ಗ್ರಾಮದ 800 ಎಕರೆ ಭೂಮಿ ಕಂದಾಯ ಇಲಾಖೆಗೆ ಸೇರ್ಪಡೆ: ಸಕ್ರಮೀಕರಣ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಲು ಸಚಿವರಿಗೆ ಹರೀಶ್ ಪೂಂಜ ಮನವಿ
ನೆಲ್ಯಾಡಿ: ವಲಯ ಬಂಟರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಮಂಗಳೂರು ವಿಭಾಗದ ಓಣಂ ಹಬ್ಬದ ಆಚರಣೆ
ನೆಲ್ಯಾಡಿ: ಪೇಟೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಕೊಕ್ಕಡ: ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ನಾಗ ಸನ್ನಿಧಿಯಲ್ಲಿ ನಾಗರಪಂಚಮಿ ಆಚರಣೆ
ನೆಲ್ಯಾಡಿ: ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಾಗರಪಂಚಮಿ
ನೆಲ್ಯಾಡಿ: ದೊಂತಿಲ ಕ್ಷೇತ್ರದಲ್ಲಿ ನಾಗರಪಂಚಮಿ
ಗೋಳಿತೊಟ್ಟು ಶಾಲೆಯಲ್ಲಿ ಆಟಿದೊಂಜಿ ದಿನ
ನೆಲ್ಯಾಡಿ : ಜೇಸಿಐನಿಂದ ಸಾರ್ವಜನಿಕ ಕ್ರೀಡೋತ್ಸವ – 2026
ಕೊಕ್ಕಡ: ಜೆಸಿಐ ಕಪಿಲಾ ಘಟಕದ ಸಾಮಾನ್ಯ ಸಭೆ
ನೆಲ್ಯಾಡಿ: ಮರಾಟಿ ಸಮಾಜ ಸೇವಾ ಸಂಘದಿಂದ ಆಟಿಡೊಂಜಿ ದಿನ
ದೊಂತಿಲ : ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ
ಕೆ.ಎನ್.ಎಸ್.ಎಸ್ ನೆಲ್ಯಾಡಿ:ರಾಮಾಯಣ ಪಾರಾಯಣ ಸಮಾಪ್ತಿ ದಿನಾಚರಣೆ
ಶಾಂತಿನಗರ : ಘನ ತ್ಯಾಜ್ಯ ನಿರ್ವಹಣಾ ಘಟಕದ ಅವ್ಯವಸ್ಥೆ ವಿರುದ್ಧ ಆಕ್ರೋಶ
ಕೊಣಾಲು : ಸ್ವಚ್ಛತಾ ಕಾರ್ಯಕ್ರಮ
ಅರಸಿನಮಕ್ಕಿ: ನವಶಕ್ತಿ ಆಟೋ ಚಾಲಕರ ಸಂಘದಿಂದ ವಿದ್ಯಾರ್ಥಿಗಳಿಗೆ ಪೆನ್ನು, ಸಿಹಿ ವಿತರಣೆ
ಕೊಕ್ಕಡ : ದರ್ಭೇತಡ್ಕ ಪರಶುರಾಮ ವನದಲ್ಲಿ ಸ್ವಾತಂತ್ರ್ಯೋತ್ಸವ
ನೆಲ್ಯಾಡಿ: ಅಲ್ ಬದ್ರಿಯಾ ಇಂಗ್ಲಿಷ್ ಮೀಡಿಯಂ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ




































































































