




ನೆಲ್ಯಾಡಿ: ಗ್ರಾಮದ ತೋಟದಮನೆ ನಿವಾಸಿ, ನಿವೃತ್ತ ಉಪತಹಶೀಲ್ದಾರ್ ಹಾಗೂ ನೆಲ್ಯಾಡಿ ವಲಯ ಬಂಟರ ಸಂಘದ ಸ್ಥಾಪಕ ಕಾರ್ಯದರ್ಶಿ ಗುಡ್ಡಪ್ಪ ಶೆಟ್ಟಿ(68) ಅವರು ಸೆ. 23ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಅವರು ಕೆಲ ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ನೆಲ್ಯಾಡಿ ಪೇಟೆಯಲ್ಲಿ ಕಪಿಲಾ ಸಂಕೀರ್ಣವನ್ನು ಹೊಂದಿದ್ದ ಗುಡ್ಡಪ್ಪ ಶೆಟ್ಟಿ ಅವರು ಅಲ್ಲಿಯೇ ವಾಸವಾಗಿದ್ದರು. ಕೇವಲ 19ನೇ ವಯಸ್ಸಿನಲ್ಲೇ ಗ್ರಾಮಕರಣಿಕರಾಗಿ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡ ಅವರು, ಬಳಿಕ ಕಂದಾಯ ನಿರೀಕ್ಷಕರಾಗಿ ಹಾಗೂ ಉಪ ತಹಶೀಲ್ದಾರ್ ಆಗಿ ಕಂದಾಯ ಇಲಾಖೆಯಲ್ಲಿ ವಿವಿಧೆಡೆ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ಸಾಮಾಜಿಕ ಹಾಗೂ ಸಂಘಟನಾ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದ ಅವರು ನೆಲ್ಯಾಡಿ ವಲಯ ಬಂಟರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಸಂಘದ ಗೌರವಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು.
ಮೃತರು ಪತ್ನಿ ಶ್ಯಾಮಲಾ ಜಿ. ಬೋಳೋಡಿಗುತ್ತು, ಪುತ್ರಿಯರಾದ ಮೆಸ್ಕಾಂ ಕಾರ್ಕಳ ಶಾಖೆಯ ಎಇಇ ಶಿಲ್ಪಾ ಹಾಗೂ ಶ್ರುತಿ, ಅಳಿಯಂದಿರಾದ ಸುಧೇಶ್ ಶೆಟ್ಟಿ ಹಾಗೂ ಡಾ. ಶಿವಪ್ರಸಾದ್, ಮೊಮ್ಮಕ್ಕಳಾದ ಶ್ರೀದಾ, ಶಾಘ್ವಿ ಹಾಗೂ ಶಾಷ್ಣಿ ಅವರನ್ನು ಅಗಲಿದ್ದಾರೆ.
ಗುಡ್ಡಪ್ಪ ಶೆಟ್ಟಿ ಅವರ ನಿಧನಕ್ಕೆ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆಗುತ್ತು, ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಶ್ರೀಮಾತಾ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ವ್ಯಕ್ತಪಡಿಸಿದರು.









































































































