ವಿಕಾಸ ಸೌಧದಲ್ಲಿ ಕರ್ನಾಟಕ ರಾಜ್ಯದ ಮಾಜಿ ಸೈನಿಕರ ಸಂಘದ ಪ್ರತಿನಿಧಿಗಳೊಂದಿಗೆ ಗೃಹ ಸಚಿವ ಪ್ರಿಯಾಂಕ ಖರ್ಗೆ ಸಭೆ; ಭೂಮಿ, ಮೀಸಲಾತಿ, ಉದ್ಯೋಗ, ನಿವೇಶನ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಚರ್ಚೆ; ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಭೆ ಕರೆಯುವ ಭರವಸೆ
ನೆಲ್ಯಾಡಿ: ಕರ್ನಾಟಕ ರಾಜ್ಯದ ಮಾಜಿ ಸೈನಿಕರು ಹಾಗೂ ವೀರನಾರಿಯರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಮತ್ತು ಅವರಿಗೆ ದೊರೆಯಬೇಕಾದ ಸವಲತ್ತುಗಳ ಅನುಷ್ಠಾನದಲ್ಲಿನ ಕೊರತೆಗಳ ಕುರಿತು ಬೆಂಗಳೂರಿನ ವಿಕಾಸಸೌಧದಲ್ಲಿ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯ ಅಧ್ಯಕ್ಷರು, ರಾಜ್ಯ ಘಟಕದ ಪದಾಧಿಕಾರಿಗಳು, ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮಾಜಿ ಸೈನಿಕರಿಗೆ ಭೂಮಿ ಹಾಗೂ ನಿವೇಶನ ಮಂಜೂರಾತಿಯಲ್ಲಿ ಆಗುತ್ತಿರುವ ವಿಳಂಬ, ಜವಾನ್ ಸಮ್ಮಾನ್ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಹ ಸೈನಿಕರಿಗೆ ನಿವೇಶನ ಒದಗಿಸುವುದು, ಮಾಜಿ ಸೈನಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ, ಅದರಲ್ಲೂ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಶಿಕ್ಷಣದಲ್ಲಿ ದೊರೆಯಬೇಕಾದ ಮೀಸಲಾತಿ ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ, ಸರ್ಕಾರಿ ಉದ್ಯೋಗದಲ್ಲಿ ಮಾಜಿ ಸೈನಿಕರಿಗೆ ದೊರೆಯಬೇಕಾದ ಶೇ.10ರಷ್ಟು ಮೀಸಲಾತಿ ಸಮರ್ಪಕವಾಗಿ ಜಾರಿಯಾಗದಿರುವ ಬಗ್ಗೆ, ರಾಜ್ಯ ಸರ್ಕಾರಿ ಸೇವೆಯಲ್ಲಿರುವ ಮಾಜಿ ಸೈನಿಕರ ವೇತನ ನಿಗದಿ ಹಾಗೂ ಸೇವಾ ಭದ್ರತೆಯ ಅನುಷ್ಠಾನ, ಕಂದಾಯ ಇಲಾಖೆಯಿಂದ ದೊರೆಯಬೇಕಾದ ರಿಯಾಯಿತಿಗಳು ಎಲ್ಲ ಜಿಲ್ಲೆಗಳಲ್ಲೂ ಸಮರ್ಪಕವಾಗಿ ಜಾರಿಯಾಗದಿರುವುದು, ಪ್ರತಿ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಸೈನಿಕ ಭವನ ಮತ್ತು ಅಮರ್ ಜವಾನ್ ಜ್ಯೋತಿ ಸ್ಥಾಪಿಸುವ ಕುರಿತು, ಜಿಲ್ಲಾಮಟ್ಟದಲ್ಲಿ ಮಾಜಿ ಸೈನಿಕರ ಸಮಿತಿ ರಚಿಸಿ, ಜಿಲ್ಲಾಧಿಕಾರಿಗಳನ್ನು ಅಧ್ಯಕ್ಷರನ್ನಾಗಿ ಹಾಗೂ ಮಾಜಿ ಸೈನಿಕರನ್ನು ಸದಸ್ಯರನ್ನಾಗಿ ನೇಮಿಸಿ, ಅವರ ಕುಂದುಕೊರತೆಗಳು ಮತ್ತು ಸಮಸ್ಯೆಗಳನ್ನು ನೇರವಾಗಿ ಮಂಡಿಸಲು ಅವಕಾಶ ಕಲ್ಪಿಸುವಂತೆಯೂ ಮನವಿ, ಮಾಜಿ ಸೈನಿಕರಿಗೆ ಸಂಬಂಧಿಸಿದ ಸವಲತ್ತುಗಳಿಗಾಗಿ ನಿಗದಿಪಡಿಸಿರುವ ಆದಾಯ ಮಿತಿಯ ಬಗ್ಗೆ, ಕುಟುಂಬದ ಎಲ್ಲ ಸದಸ್ಯರ ಆದಾಯವನ್ನು ಮಾಜಿ ಸೈನಿಕರ ಆದಾಯದೊಂದಿಗೆ ಸೇರಿಸಿ ಆದಾಯ ಮಿತಿ ನಿಗದಿಪಡಿಸುವುದರಿಂದ ಹಲವು ಮಾಜಿ ಸೈನಿಕರು ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಆದಾಯ ಮಿತಿಯನ್ನು ₹8 ಲಕ್ಷಕ್ಕೆ ನಿಗದಿಪಡಿಸದೆ ಮಾಜಿ ಸೈನಿಕರಿಗೆ ಸೂಕ್ತ ರಿಯಾಯಿತಿ ನೀಡಬೇಕು ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರ ಪರವಾಗಿ ಜಿಲ್ಲಾ ಕಮಿಟಿ ಸದಸ್ಯ ಹಾಗೂ ಕಡಬ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸೆಬಾಸ್ಟಿನ್ ಕೆ.ಕೆ. ಅವರು ಜಿಲ್ಲೆಯ ಮಾಜಿ ಸೈನಿಕರ ಪ್ರಮುಖ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ಜವಾನ್ ಸಲ್ಮಾನ್ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಹ ಸೈನಿಕರಿಗೆ ನಿವೇಶನ ಒದಗಿಸಬೇಕು. ಮಾಜಿ ಸೈನಿಕರು ಪಡೆದಿರುವ ಕೋವಿ ಲೈಸೆನ್ಸ್ಗಳ ನವೀಕರಣದಲ್ಲಿ ಆಗುತ್ತಿರುವ ವಿಳಂಬವನ್ನು ನಿವಾರಿಸಬೇಕು. ಟೋಲ್ಗೇಟ್ಗಳಲ್ಲಿ ಮಾಜಿ ಸೈನಿಕರಿಗೆ ವಿನಾಯಿತಿ ನೀಡಬೇಕು. ಸರ್ಕಾರಿ ಬಸ್ಗಳಲ್ಲಿ ಮಾಜಿ ಸೈನಿಕರಿಗೆ ಆಸನ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಬೇಕು, ಸೈನಿಕರಿಗಾಗಿ ಮೀಸಲಿಟ್ಟಿರುವ ಜಾಗವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿಕೊಂಡಿದ್ದರೆ ಅಂತಹ ಅತಿಕ್ರಮಣಗಳನ್ನು ತೆರವುಗೊಳಿಸಿ, ಮೀಸಲಾದ ಜಾಗವನ್ನು ಸೈನಿಕರಿಗೆ ಒದಗಿಸುವಂತೆ ಒತ್ತಾಯಿಸಿದರು.
ರಾಜ್ಯ ಘಟಕದ ಮುಖ್ಯಕಾರ್ಯದರ್ಶಿ ಲಕ್ಷ್ಮೀಶ ಅವರು ಮಾಜಿ ಸೈನಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಹಾಗೂ ಸವಲತ್ತುಗಳ ಅನುಷ್ಠಾನದಲ್ಲಿರುವ ಅಡಚಣೆಗಳ ಕುರಿತು ಸಚಿವರಿಗೆ ವಿವರಿಸಿದರು.
ಮಾಜಿ ಸೈನಿಕರ ಸಮಸ್ಯೆಗಳ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾದ ಎಲ್ಲ ವಿಷಯಗಳನ್ನು ಮುಖ್ಯಮಂತ್ರಿ ಅವರೊಂದಿಗೆ ಸಮಗ್ರವಾಗಿ ಚರ್ಚಿಸಿ, ಬಳಿಕ ಮಾಜಿ ಸೈನಿಕರ ಸಭೆಯನ್ನು ಕರೆದು ಮುಂದಿನ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಭರವಸೆ ನೀಡಿದರು.
ರಾಜ್ಯ ಸ್ಥಾಪಕಾಧ್ಯಕ್ಷ ಡಾ. ಶಿವಣ್ಣ, ಉಪಾಧ್ಯಕ್ಷ ಪ್ರಕಾಶ್, ಗೌರವಾಧ್ಯಕ್ಷ ಸೋಮಣ್ಣ, ಮುಖ್ಯ ಕಾರ್ಯದರ್ಶಿ ವೇಣು, ವೀರನಾರಿ ಅಧ್ಯಕ್ಷೆ ಛಾಯಾ ಹಾಗೂ ರಾಜ್ಯದ ಪದಾಧಿಕಾರಿಗಳು ಜಿಲ್ಲೆಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ಹುಲಿ ವೇಷದ ತರಬೇತಿಗಾಗಿ ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ 14 ವರ್ಷದ ಬಾಲಕನೊಬ್ಬ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಅ.4ರ ಸಂಜೆ ...