






ಪುತ್ತೂರು: 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿನಗರದಲ್ಲಿರುವ ಘನ ತ್ಯಾಜ್ಯ ನಿರ್ವಹಣಾ ಘಟಕದ ತ್ಯಾಜ್ಯ ವಿಲೇವಾರಿ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಲು ಸ್ಥಳೀಯರು ನಿರ್ಧರಿಸಿದ್ದಾರೆ.
ಶಾಂತಿನಗರ ಸಮೀಪದ ಕಲ್ಪಣೆ ಬಳಿ ಇರುವ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಪ್ಲಾಸ್ಟಿಕ್ ಕಸ, ಸ್ಯಾನಿಟರಿ ಪ್ಯಾಡ್, ಪ್ಯಾಂಪರ್ಸ್ ಸೇರಿದಂತೆ ಹಸಿ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು ಘಟಕದ ಹಿಂಭಾಗದಲ್ಲಿ ಗುಂಡಿ ತೋಡಿ ಮಣ್ಣಿನಲ್ಲಿ ಮುಚ್ಚಲಾಗುತ್ತಿದೆ. ಈ ಬಗ್ಗೆ ಗಮನಕ್ಕೆ ಬಂದರೂ 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ತಕ್ಷಣವೇ ಈ ಕುರಿತು ಕ್ರಮ ಕೈಗೊಳ್ಳದೇ ಇದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸಮಾನ ಮನಸ್ಕರು ತಿಳಿಸಿದ್ದಾರೆ.
ಅವ್ಯವಸ್ಥೆ ವಿರುದ್ಧ ಆಕ್ರೋಶ:
ಸ್ವಚ್ಛ ಗ್ರಾಮ ಪ್ರಶಸ್ತಿ ಪಡೆದಿರುವ 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಿನಗರ ಸಮೀಪದ ಕಲ್ಪಣೆ ಬಳಿ ಇರುವ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಅವ್ಯವಸ್ಥೆಯಾಗಿದೆ. ಪ್ಲಾಸ್ಟಿಕ್ ಕಸ, ಸ್ಯಾನಿಟರಿ ಪ್ಯಾಡ್, ಪ್ಯಾಂಪರ್ಸ್ ಸೇರಿದಂತೆ ಹಸಿ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು ಘಟಕದ ಹಿಂಭಾಗದಲ್ಲಿ ಗುಂಡಿ ತೋಡಿ ಮಣ್ಣಿನಲ್ಲಿ ಮುಚ್ಚಲಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಗ್ರಾಮ ಪಂಚಾಯತ್ ವತಿಯಿಂದ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸಿ ಅದನ್ನು ವಿಂಗಡಿಸಿ ಎಂಆರ್ಎಫ್ ಘಟಕದ ಮೂಲಕ ವಿಲೇವಾರಿ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಇದಕ್ಕಾಗಿ ಸಾರ್ವಜನಿಕರಿಂದ ತ್ಯಾಜ್ಯ ನಿರ್ವಹಣಾ ಶುಲ್ಕ ಸಂಗ್ರಹಿಸಲಾಗುತ್ತಿದೆ. ಆದರೆ ಘಟಕದಲ್ಲಿ ತ್ಯಾಜ್ಯದ ರಾಶಿ ಹೆಚ್ಚಾಗುತ್ತಿದ್ದರೂ ಸೂಕ್ತ ವಿಲೇವಾರಿ ವ್ಯವಸ್ಥೆ ಮಾಡದೆ ಭೂಮಿಯೊಳಗೆ ಹೂತು ಹಾಕಲಾಗುತ್ತಿದೆ. ಇದು ಕಾನೂನಿಗೆ ವಿರುದ್ಧವಾಗಿದೆ. ಘಟಕಕ್ಕೆ ಕಸಾಯಿಖಾನೆಗಳ ತ್ಯಾಜ್ಯ ಸೇರಿದಂತೆ ಮಾಂಸ ಹಾಗೂ ವಿವಿಧ ಆಹಾರ ತ್ಯಾಜ್ಯಗಳು ಬರುತ್ತಿದ್ದು ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ ಪರಿಸರದಲ್ಲಿ ದುರ್ವಾಸನೆ ಬೀರುತ್ತಿದೆ. ತ್ಯಾಜ್ಯದ ರಾಶಿಯಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ಶಾಲೆಗೆ ತೆರಳುವ ಮಕ್ಕಳು ಸೇರಿದಂತೆ ಸ್ಥಳೀಯರು ಆತಂಕದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು ಮೂರು–ನಾಲ್ಕು ವರ್ಷಗಳ ಹಿಂದೆ ಘಟಕ ಆರಂಭಗೊಂಡಾಗ ಒಣ ತ್ಯಾಜ್ಯ ಸಂಗ್ರಹಿಸಿ ವಿಂಗಡಿಸುವ ವ್ಯವಸ್ಥೆ ಇತ್ತು. ಬಳಿಕ ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಘಟಕವನ್ನೂ ಆರಂಭಿಸಲಾಗಿತ್ತು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಂದ ಹಸಿ ಕಸ ಸಂಗ್ರಹಿಸಿ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಯೋಜನೆಯೂ ರೂಪಿಸಲಾಗಿತ್ತು. ಆದರೆ ಕಳೆದ ಕೆಲವು ಸಮಯದಿಂದ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಸುಮಾರು ಎರಡು ವರ್ಷಗಳಿಂದ ಸಂಗ್ರಹವಾಗಿರುವ ಪ್ಲಾಸ್ಟಿಕ್ ತ್ಯಾಜ್ಯವೂ ಘಟಕದಲ್ಲೇ ಉಳಿದಿದೆ. ಸದ್ಯ ಸಂಗ್ರಹವಾಗುವ ಹಸಿ ತ್ಯಾಜ್ಯವನ್ನು ಗೊಬ್ಬರ ತಯಾರಿಕಾ ಘಟಕಕ್ಕೆ ಸಮರ್ಪಕವಾಗಿ ಬಳಸುವ ಬದಲು ಘಟಕದ ಹಿಂಭಾಗದಲ್ಲಿ ತೋಡಿರುವ ಗುಂಡಿಯಲ್ಲಿ ಹಾಕಿ ಮಣ್ಣಿನಿಂದ ಮುಚ್ಚಲಾಗುತ್ತಿದೆ. ಇದರಿಂದ ಶಾಂತಿನಗರ ಪರಿಸರದಲ್ಲಿ ಆತಂಕ ಸೃಷ್ಟಿಯಾಗಿದೆ. ಅಂಗನವಾಡಿ ಕೇಂದ್ರ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ದೇವಸ್ಥಾನ, ಹಿಂದೂ ರುದ್ರಭೂಮಿ ಹಾಗೂ ನೂರಾರು ಮನೆಗಳಿರುವ ಶಾಂತಿನಗರ ಪ್ರದೇಶದಲ್ಲಿ ಈ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಘಟಕ ಸ್ಥಾಪನೆಯ ಸಂದರ್ಭದಲ್ಲಿಯೇ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರೂ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಭರವಸೆ ನೀಡಲಾಗಿತ್ತು. ಆದರೆ ಇದೀಗ ತ್ಯಾಜ್ಯವನ್ನು ಭೂಮಿಯೊಳಗೆ ಹೂತು ಹಾಕುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಹಸಿ ಹಾಗೂ ಇತರ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಹೂತು ಹಾಕುವುದರಿಂದ ಮಣ್ಣು ಮತ್ತು ಅಂತರ್ಜಲ ಕಲುಷಿತಗೊಳ್ಳುವ ಸಾಧ್ಯತೆ ಇದ್ದು ಸಾಂಕ್ರಾಮಿಕ ರೋಗಗಳ ಭೀತಿಯೂ ಎದುರಾಗಿದೆ. ಈ ಬಗ್ಗೆ ಪಂಚಾಯಿತಿಗೆ ಹಲವು ಬಾರಿ ದೂರು ನೀಡಿದರೂ ಸಮಸ್ಯೆ ಬಗೆ ಹರಿದಿಲ್ಲ. ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಶುಲ್ಕ ಸಂಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಸಂಗ್ರಹವಾಗುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಪಂಚಾಯಿತಿಯ ಜವಾಬ್ದಾರಿಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಗೆ ತಕ್ಷಣ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ಪಂಚಾಯತ್ ಕಚೇರಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕುರಿತು ಈಗಾಗಲೇ ಶಾಂತಿನಗರ ಶ್ರೀ ಮಹಾವಿಷ್ಣು ಸೇವಾ ಟ್ರಸ್ಟ್, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ತ್ರಿವೇಣಿ ಯುವಕ ಮಂಡಲ ಮುಂತಾದ ಸಂಘ ಸಂಸ್ಥೆಗಳ ಸದಸ್ಯರು ಚರ್ಚೆ ನಡೆಸಿದ್ದಾರೆ.





ಶಾಂತಿನಗರ : ಘನ ತ್ಯಾಜ್ಯ ನಿರ್ವಹಣಾ ಘಟಕದ ಅವ್ಯವಸ್ಥೆ ವಿರುದ್ಧ ಆಕ್ರೋಶ
ಕೊಣಾಲು : ಸ್ವಚ್ಛತಾ ಕಾರ್ಯಕ್ರಮ
ಅರಸಿನಮಕ್ಕಿ: ನವಶಕ್ತಿ ಆಟೋ ಚಾಲಕರ ಸಂಘದಿಂದ ವಿದ್ಯಾರ್ಥಿಗಳಿಗೆ ಪೆನ್ನು, ಸಿಹಿ ವಿತರಣೆ
ಕೊಕ್ಕಡ : ದರ್ಭೇತಡ್ಕ ಪರಶುರಾಮ ವನದಲ್ಲಿ ಸ್ವಾತಂತ್ರ್ಯೋತ್ಸವ
ನೆಲ್ಯಾಡಿ: ಅಲ್ ಬದ್ರಿಯಾ ಇಂಗ್ಲಿಷ್ ಮೀಡಿಯಂ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ
ಶಿಶಿಲ: ಸ್ವಾತಂತ್ರ್ಯೋತ್ಸವ; ‘ಗೌರವ ಸಂಪುಟ’, ‘ನೆನಪಿನ ಸಂಚಿಕೆ’ ಲೋಕಾರ್ಪಣೆ
ನೆಲ್ಯಾಡಿ: ಅಶ್ವಿನಿ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ
ನೆಲ್ಯಾಡಿ: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ನೆಲ್ಯಾಡಿ: ಎಸ್ಡಿಪಿಐ ಗ್ರಾಮ ಸಮಿತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ
ಆನೆ ಹಾವಳಿ, ಕಸ್ತೂರಿ ರಂಗನ್ ವರದಿ ವಿರುದ್ಧ ರೈತರ ಆಕ್ರೋಶ
ಅರ್ಹರಿಗೆ ಜವಾಬ್ದಾರಿ ನೀಡಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯ: ಡಾ.ಅನೀಶ್ ಸಾದಂಗಾಯ
ಕರ್ತವ್ಯ ಪ್ರಜ್ಞೆ, ಶಿಸ್ತು ಬೆಳೆಸಿಕೊಂಡರೆ ಉಜ್ವಲ ಭವಿಷ್ಯ: ರೆಜಿ ತೋಮಸ್
ನೆಲ್ಯಾಡಿ: ಮಹಾತ್ಮಗಾಂಧಿ ಗ್ರಾ.ಪಂ.ಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ
ಅರಸಿನಮಕ್ಕಿ: ಗ್ರಾ.ಪಂ.ಯಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ
ನೆಲ್ಯಾಡಿ: ಸಮಾಜ ಸೇವಕ ಜಯಾನಂದ ಬಂಟ್ರಿಯಾಲ್ ಇನ್ನಿಲ್ಲ
ನೆಲ್ಯಾಡಿ: ಆ.15ರಂದು ಅಶ್ವಿನಿ ಆಸ್ಪತ್ರೆಯಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ
ನೆಲ್ಯಾಡಿ: ಶಾಲಾ-ಕಾಲೇಜುಗಳಿಗೆ ಕುಕ್ಕೆ ಕ್ಷೇತ್ರದಿಂದ 5 ಸಾವಿರ ಲಡ್ಡು ವಿತರಣೆ
ಶಿಬಾಜೆ: ಮನೆಯ ಕಪಾಟಿನಡಿ ಸೇರಿಕೊಂಡ ಕಾಳಿಂಗ ಸರ್ಪ
ನೆಲ್ಯಾಡಿ: ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ
ಕೋಲ್ಪೆ : ಕಾರು, ಸ್ಕೂಟರ್ ತಡೆದು ಗುಂಪಿನಿಂದ ಹಲ್ಲೆ: ಯುವತಿ ಸೇರಿ ಹಲವರಿಗೆ ಗಾಯ-9 ಮಂದಿಯ ವಿರುದ್ಧ ಪ್ರಕರಣ ದಾಖಲು
ನೆಲ್ಯಾಡಿ: ಎನ್ಎಚ್-75ರಲ್ಲಿ ರಸ್ತೆ ಸುರಕ್ಷತೆಗೆ ಕ್ರಮಕ್ಕೆ ಆಗ್ರಹ: ಭಾಗೀರಥಿ ಮುರುಳ್ಯರಿಂದ ಎನ್ಎಚ್ಎಐಗೆ ಪತ್ರ
ನೆಲ್ಯಾಡಿ: ಶಿರಾಡಿ ಹೊರಠಾಣೆ ಮೇಲ್ದರ್ಜೆಗೇರಿಸಲು ಕಸರತ್ತು: 2023ರಿಂದ ಅಪರಾಧ ಪ್ರಕರಣಗಳ ಸಮಗ್ರ ಮಾಹಿತಿ ಸಂಗ್ರಹ
ಬೆಳ್ತಂಗಡಿ: ಹೋಟೆಲ್ಗೆ ನುಗ್ಗಿ ಕುಟುಂಬದ ಮೇಲೆ ಹಲ್ಲೆ- ಐದು ಮಂದಿಯ ವಿರುದ್ಧ ಪ್ರಕರಣ ದಾಖಲು
ಪುತ್ತೂರು : ಮುಳಿಯ ಪ್ರತಿಷ್ಠಾನದಿಂದ ‘ಧನಾತ್ಮಕ ಪೋಷಕತ್ವ’ ಆನ್ಲೈನ್ ಕಾರ್ಯಕ್ರಮ
ಕಾಪಿನಬಾಗಿಲು : ಕಾರು ತಡೆದು ವ್ಯಕ್ತಿಗೆ ಹಲ್ಲೆ; ಐವರ ವಶಕ್ಕೆ
ಕಾಡಾನೆ ಹಾವಳಿ: ಆ.14ರಂದು ಸಂತ್ರಸ್ತ ಕೃಷಿಕರ ಮಹತ್ವದ ಸಭೆ
ಇಚ್ಲಂಪಾಡಿ: ನೇರ್ಲ ಶಾಲಾ ಎಲ್ಕೆಜಿ, ಯುಕೆಜಿ ಮಕ್ಕಳಿಗೆ ಸಮವಸ್ತ್ರ ಕೊಡುಗೆ
ಸುಬ್ರಹ್ಮಣ್ಯ : ರೋಟರಿ ಕ್ಲಬ್ ವತಿಯಿಂದ ಬೊಬ್ಬೆಕೇರಿ ಶಾಲೆಗೆ ಕೊಡುಗೆ
ನೆಲ್ಯಾಡಿ : ಬಂಟರ ಸಂಘದಿಂದ ‘ಆಟಿಡೊಂಜಿ ಬಂಟೆರೆ ಸೇರಿಗೆ’, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ
ನಿಡ್ಲೆ : ತೋಟಕ್ಕೆ ನುಗ್ಗಿದ ಕಾಡಾನೆ; ಬಾಳೆ, ಅಡಿಕೆ ಗಿಡಗಳಿಗೆ ಹಾನಿ
ರಾಮಕುಂಜ: ಫಿಡ್ಜ್ ಏಕಾಏಕಿ ಸ್ಪೋಟ:ಅಪಾಯದಿಂದ ಪಾರು
ಭೀಕರ ಅಪಘಾತ : ಓರ್ವ ಸಾವು ಮತ್ತೋರ್ವ ಗಂಭೀರ
ನೆಲ್ಯಾಡಿ: ಆರೋಗ್ಯ ಜಾಗೃತಿಯೊಂದಿಗೆ ನೆಲ್ಯಾಡಿ ಶಿವಳ್ಳಿ ಸಂಪದದ ಆಟಿ ಸಂಭ್ರಮ
ಇಚ್ಲಂಪಾಡಿ: ‘ಆಟಿಡೊಂಜಿ ದಿನ’ ಆಚರಣೆ
ನೆಲ್ಯಾಡಿ: ಕಾಡಾನೆಗಳ ಕಾಟಕ್ಕೆ ನಲುಗಿದ ಬೆಳ್ತಂಗಡಿ; ರೈತರ ಬೆವರಿನ ಬೆಳೆ ರಾತ್ರಿ ಬೆಳಗಾಗುವಷ್ಟರಲ್ಲಿ ನಾಶ!
ಕಡಬ: ಪೌಷ್ಟಿಕ ಆಹಾರದ ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ
ನೆಲ್ಯಾಡಿ: ರಬ್ಬರ್ ಬೆಳೆಗಾರರ ಸಹಕಾರ ಸಂಘಕ್ಕೆ ₹14.21 ಲಕ್ಷ ನಿವ್ವಳ ಲಾಭ
ಕಳೆಂಜ–ಸಿಬಂತಿಯಲ್ಲಿ ಕಾಡಾನೆಗಳ ಹಾವಳಿ; ಪ್ರತಿದಿನ ಕೃಷಿ ತೋಟಗಳೇ ಟಾರ್ಗೆಟ್!
ಉಡುಪಿ : ಉದ್ಯಮಿ ಹತ್ಯೆ ಪ್ರಕರಣ ಮೂವರು ಅಂತಾರಾಜ್ಯ ಸುಪಾರಿ ಕಿಲ್ಲರ್ಗಳ ಬಂಧನ
ದ.ಕ.ದಲ್ಲಿ ಭಾರೀ ಮಳೆ ಎಚ್ಚರಿಕೆ: ಆ.8.ರಂದು ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಕಡಬ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ರೆಂಜಿಲಾಡಿ: ಸ್ಯಾಂತೋಮ್ ವಿದ್ಯಾನಿಕೇತನ ವಿದ್ಯಾ ಸಂಸ್ಥೆಗೆ 4 ಚಿನ್ನ, 1 ಬೆಳ್ಳಿ ಪದಕ
ಗ್ರಾ.ಪಂ.ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜ ಗುಂಡಿಕ್ಕಿ ಹತ್ಯೆ
ನೆಲ್ಯಾಡಿ : ತುಳು ಸಂಸ್ಕೃತಿಯ ಸೊಬಗು ಸಾರಿದ ‘ಆಟಿ ಡೊಂಜಿ ದಿನ’ ಸಂಭ್ರಮ
ನೆಲ್ಯಾಡಿ: ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನ ವಾರ್ಷಿಕ ಮಹಾಸಭೆ
ಗೋಳಿತಟ್ಟು: ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ
ಇಚ್ಲಂಪಾಡಿ: ಮಳೆಗೆ ಕೊಚ್ಚಿಹೋದ ರಸ್ತೆ ಗ್ರಾಮಸ್ಥರೇ ಶ್ರಮದಾನದಿಂದ ತಾತ್ಕಾಲಿಕ ದುರಸ್ತಿ; ಶಾಶ್ವತ ಕಾಮಗಾರಿಗೆ ಆಗ್ರಹ
ಕಡಬ: ಪ್ರಾಕೃತಿಕ ವಿಕೋಪ ಪರಿಶೀಲನಾ ಸಭೆ: ಅಧಿಕಾರಿಗಳಿಗೆ ಸಚಿವ ಯು.ಟಿ. ಖಾದರ್ ಖಡಕ್ ಎಚ್ಚರಿಕೆ
ನೆಲ್ಯಾಡಿ: ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ 44ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಶಿರಾಡಿ: ಟ್ಯಾಂಕರ್–ಕೆಎಸ್ಆರ್ಟಿಸಿ ಬಸ್ ಮುಖಾಮುಖಿ ಡಿಕ್ಕಿ: ಚಾಲಕ, ನಿರ್ವಾಹಕ ಸೇರಿ ಮೂವರಿಗೆ ಗಾಯ
ದರ್ಬೆತಡ್ಕ : ಕಾಡಾನೆ ಅಟ್ಟಹಾಸ ಅಡಿಕೆ, ಬಾಳೆ, ತೆಂಗಿನ ತೋಟ ಧ್ವಂಸ; ರೈತರಲ್ಲಿ ಆತಂಕ
ಇಚ್ಲಂಪಾಡಿ : ಪರಿಸರ ಜಾಗೃತಿ: ಅರಣ್ಯ ಇಲಾಖೆ–ಸೀನಿಯರ್ ಚೇಂಬರ್ ಸಹಯೋಗದಲ್ಲಿ ಗಿಡ ನೆಡುವ ಅಭಿಯಾನ
ಆಟಿ ಮಳೆಯ ಸಂಭ್ರಮಕ್ಕೆ ಜೀವ ತುಂಬುವ ಆಟಿ ಕಳೆಂಜ
ಕಡಬ : ಸಿ.ಎ. ಬ್ಯಾಂಕ್ ದಾಖಲೆಯ ಸಾಧನೆ: 4.50 ಕೋಟಿ ರೂ. ನಿವ್ವಳ ಲಾಭ; ಆ. 8ರಂದು ವಾರ್ಷಿಕ ಮಹಾಸಭೆ
ಬೆಳ್ತಂಗಡಿ: ಪ್ರಚೋದನಕಾರಿ ಭಾಷಣ: ರಿಯಾಜ್ ಫರಂಗಿಪೇಟೆಗೆ ಶಿಕ್ಷೆ ಪ್ರಕಟ
ಕುಂತೂರು: ಮೃತ ಕೃಷಿ ಕಾರ್ಮಿಕನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಚೆಕ್
ಶಿಶಿಲ: ನೂತನ ಮಳೆ ಮಾಪನ ಯಂತ್ರ ಅಳವಡಿಕೆ
ಅರಸಿನಮಕ್ಕಿ: ಉಚ್ಚಿಕಟ್ಟ ಡ್ಯಾಂನಲ್ಲಿ ಮರಮುಟ್ಟು ಸಿಲುಕಿ ರಸ್ತೆ ಜಲಾವೃತ: ಸಂಪರ್ಕ ಕಡಿತ; ತುರ್ತು ದುರಸ್ತಿಯಿಂದ ಸಂಚಾರ ಪುನರಾರಂಭ
ನೆಲ್ಯಾಡಿ: ಧಾರಾಕಾರ ಮಳೆಗೆ ಗುಂಡ್ಯಹೊಳೆ ಪ್ರವಾಹ, ಕೃಷಿಭೂಮಿ ಜಲಾವೃತ
ಭಾರಿ ಮಳೆ ಮುನ್ನೆಚ್ಚರಿಕೆ: ದ.ಕ.ದ ಹಲವು ತಾಲೂಕುಗಳಲ್ಲಿ ಆ.4ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಕೊಕ್ಕಡ: ಕಾಡಾನೆ ದಾಳಿಗೆ ಬಲಿಯಾದ ಬಾಲಕೃಷ್ಣ ಗೌಡರ ಕುಟುಂಬಕ್ಕೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ.ಪುಷ್ಪಗಿರಿ ಸಾಂತ್ವನ; ಆರ್ಥಿಕ ನೆರವು
ಪೆರಿಯಶಾಂತಿ: ಗುಡ್ಡ ಕುಸಿತ; ರಸ್ತೆಗೆ ಮರ ಉರುಳಿ ಕೆಲಕಾಲ ಸಂಚಾರ ಅಸ್ತವ್ಯಸ್ತ
ದ.ಕ. ದಲ್ಲಿ ಭಾರೀ ಮಳೆ ಎಚ್ಚರಿಕೆ: ಆ.3ರಂದು ಶಾಲೆ–ಪಿಯು ಕಾಲೇಜುಗಳಿಗೆ ರಜೆ ಘೋಷಣೆ
ಕೌಕ್ರಾಡಿ: ಕೃಷಿ ಸ್ವಉದ್ಯೋಗ ತರಬೇತಿ
ನೇತ್ರಾವತಿ ನದಿ ದಡದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ; ಮಾಹಿತಿ ನೀಡುವಂತೆ ಪೊಲೀಸರ ಮನವಿ
ರೆಖ್ಯಾ : ಕಾಡಾನೆ ದಾಳಿಗೆ ಬಲಿಯಾದ ಬಾಲಕೃಷ್ಣ ಗೌಡರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ: ರೂ.5 ಲಕ್ಷ ಪರಿಹಾರ ಹಸ್ತಾಂತರ
ರೆಖ್ಯ: ಕಾಡಾನೆ ದಾಳಿಗೆ ಕಾರ್ಮಿಕ ಬಾಲಕೃಷ್ಣ ಗೌಡ ಬಲಿ; ಮೃತದೇಹ ಪತ್ತೆ, ಸ್ಥಳದಲ್ಲಿ ಅಧಿಕಾರಿಗಳ ಪರಿಶೀಲನೆ
ರೆಖ್ಯ: ಕಾಡಾನೆ ದಾಳಿ; ಇಡ್ಮಾಲು ನಿವಾಸಿ ಬಾಲಕೃಷ್ಣ ಗೌಡ ಬಲಿ
ನೆಲ್ಯಾಡಿ: ಧಾರಾಕಾರ ಮಳೆಗೆ: ಗುಂಡ್ಯಹೊಳೆ ಪ್ರವಾಹ, ಕೃಷಿಭೂಮಿ ಜಲಾವೃತ
ಶಿಶಿಲ: ಭಾರೀ ಮಳೆಗೆ ಶಿಶಿಲೇಶ್ವರ ದೇವಸ್ಥಾನದ ಹೊರಾಂಗಣ ಜಲಾವೃತ
ರಸ್ತೆಗೆ ಉರುಳಿದ ಬೃಹತ್ ಮರ: ಒಂದೂವರೆ ಗಂಟೆಗೂ ಅಧಿಕ ಸಂಚಾರ ಸ್ಥಗಿತ
ನೆಲ್ಯಾಡಿ: 38 ವರ್ಷಗಳ ಸೇವೆಗೆ ಗೌರವ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕ ರತ್ನಾಕರ ಬಂಟ್ರಿಯಾಲ್ಗೆ ಭಾವಪೂರ್ಣ ಬೀಳ್ಕೊಡುಗೆ
ಇಚ್ಲಂಪಾಡಿ: ಅಕ್ಷಯ್ ಹೋಟೆಲ್ ಬಂದ್ ಮಾಡುವುದಕ್ಕೆ ತಡೆಯಾಜ್ಞೆ
ನೆಲ್ಯಾಡಿ: ಮರಬಿದ್ದು ಮನೆಗೆ ಹಾನಿ
ಶಿಶಿಲ: ಕಿಂಡಿ ಅಣೆಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡ ಮರದ ದಿಮ್ಮಿಗಳ ತೆರವು
ಸಂಪರ್ಕಗಳ ಜಗತ್ತಿನಲ್ಲಿ ಕಳೆದುಹೋಗುತ್ತಿರುವ ಸಂಬಂಧಗಳು; ಡಿಜಿಟಲ್ ಯುಗದಲ್ಲಿ ಆತ್ಮೀಯತೆಯ ಹುಡುಕಾಟ
ಭಾರೀ ಮಳೆ ಮುನ್ಸೂಚನೆ: ದ.ಕ.ಜಿಲ್ಲೆಯಲ್ಲಿ ಆ.1ರಂದು ಶಾಲೆ-ಪಿಯು, ಐಟಿಐ, ಡಿಪ್ಲೊಮಾ ಕಾಲೇಜುಗಳಿಗೆ ರಜೆ
ನೆಲ್ಯಾಡಿ: ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಪಾಲಕರ ವಾರ್ಷಿಕ ಮಹಾಸಭೆ ಹಾಗೂ ಪುನಶ್ಚೇತನ ಕಾರ್ಯಕ್ರಮ
ಕಡಬ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಡಿಕೆಮರ ಮುರಿದು ಬಿದ್ದು ವ್ಯಕ್ತಿ ಮೃತ್ಯು; ಮೂವರು ಕಾರ್ಮಿಕರು ಅಪಾಯದಿಂದ ಪಾರು
ಬೆಳ್ತಂಗಡಿ: ಗಾಂಜಾ ಮಾರಾಟ ಜಾಲದ ಮೇಲೆ ಪೊಲೀಸ್ ದಾಳಿ: ಓರ್ವನ ಬಂಧನ, ಮತ್ತೋರ್ವ ಪರಾರಿ
ನೆಲ್ಯಾಡಿ: ನಿಲ್ಲಿಸಿದ್ದ ಲಾರಿಯಿಂದ 400 ಲೀಟರ್ ಡೀಸೆಲ್ ಕಳವು – ಹೆದ್ದಾರಿಯಲ್ಲಿ ಕಳ್ಳತನಕ್ಕೆ ಚಾಲಕರ ಆತಂಕ
ನೆಲ್ಯಾಡಿ: ಯು-ಟರ್ನ್, ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹ
ಬಂಟ್ವಾಳ: ಲಾವಣ್ಯ ಕೊಲೆ ಪ್ರಕರಣ; ಹತ್ಯೆಗೆ ಬಳಸಿದ್ದ ತಲವಾರು ಉಪ್ಪಿನಂಗಡಿಯಿಂದ ಖರೀದಿಸಿದ್ದು..!!!
ತಾಲೂಕು ಮಟ್ಟದ ಚೆಸ್ ಸ್ಪರ್ಧೆಗೆ ನೆಲ್ಯಾಡಿ ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಹಿಮಾನಿ ಆಯ್ಕೆ
ಜೆಸಿಐ ನೆಲ್ಯಾಡಿ ಘಟಕಕ್ಕೆ ವಲಯ ಉಪಾಧ್ಯಕ್ಷರ ಎರಡನೇ ಅಧಿಕೃತ ಭೇಟಿ
ಕಡಬ:ಸರಕಾರಿ ಮಾದರಿ ಶಾಲೆಗೆ ವಿಜ್ಞಾನ ಮಾದರಿಗಳ ಕೊಡುಗೆ
ಕಡಬ: ಸರಸ್ವತೀ ವಿದ್ಯಾಲಯದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಉಪನ್ಯಾಸ
ಉಜಿರೆ: ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಎಸ್.ಡಿ. ಶೆಟ್ಟಿ ನಿಧನ
ಮುಂಡಾಜೆ: ಗ್ರಾಮ ಸಭೆ ಪೂರ್ವಭಾವಿ ವಾರ್ಡ್ ಸಭೆ: ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರ ಆಕ್ರೋಶ ಅಧಿಕಾರಿಗಳ ಹಾಜರಿಗೆ ಆಗ್ರಹ
ದಿಡುಪೆ ಜಲಪಾತದಲ್ಲಿ ಅರಣ್ಯ ವಾಚರ್ ಮೇಲೆ ಹಲ್ಲೆ: ಹಣ ದೋಚಿ ಪರಾರಿ
ನೆಲ್ಯಾಡಿ: ಎಸ್ಟಿಜಿ ನರ್ಸಿಂಗ್ ಕಾಲೇಜಿನಿಂದ ಸಾರ್ವಜನಿಕರಿಗೆ ಆರೋಗ್ಯ ಅರಿವು ಕಾರ್ಯಕ್ರಮ
₹82 ಕೋಟಿ ಮೌಲ್ಯದ ಮಾದಕ ವಸ್ತುಗಳ ನಾಶ: ಮಂಗಳೂರು ನಗರ ಪೊಲೀಸರಿಂದ
ನಿಂತಿದ್ದ ಟಿಪ್ಪರ್ಗೆ ಕಾರು ಡಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ
ವೃದ್ಧೆಯ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಇಚ್ಲಂಪಾಡಿ: ಶಾಖೆಯಲ್ಲಿ ಶೀಘ್ರ ಬ್ಯಾಂಕಿಂಗ್ ಸೇವೆ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಮಾಲೋಚನಾ ಸಭೆ
ಎನ್ಎಚ್-75 ಚತುಷ್ಪಥ ಕಾಮಗಾರಿಯಲ್ಲಿ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ: ನೆಲ್ಯಾಡಿಯಲ್ಲಿ ಅಧಿಕಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ತಾಕೀತು
ಶಿಶಿಲ: ಕಪಿಲಾ ನದಿಯ ಮಧ್ಯೆ ಸಿಲುಕಿದ್ದ ವೃದ್ಧನ ರಕ್ಷಣೆ; ಧರ್ಮಸ್ಥಳ ಶ್ರೀ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಮಯೋಚಿತ ಕಾರ್ಯಾಚರಣೆ
ಪುತ್ತೂರು: ತಾಲೂಕು ಶಿವಳ್ಳಿ ಸಂಪದಕ್ಕೆ ನೂತನ ಸಾರಥ್ಯ: ಸತೀಶ್.ಕೆ.ಎಸ್., ಅಧ್ಯಕ್ಷರಾಗಿ, ಬಾಲಚಂದ್ರ ಮುಚ್ಚಿಂತ್ತಾಯ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧ ಆಯ್ಕೆ
ನೆಲ್ಯಾಡಿ:ರಾಮನಗರ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ದ್ವಿತೀಯ ಪ್ರಶಸ್ತಿ
ಸುಬ್ರಹ್ಮಣ್ಯ : ಇನ್ನರ್ ವೀಲ್ ಕ್ಲಬ್ ನಿಂದ ಕಾರ್ಗಿಲ್ ವಿಜಯ ದಿವಸ್ ಆಚರಣೆ
ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನ ವಿಶೇಷ ಸಭೆ




































































































