ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಅಪಘಾತ; ಮಂಗಳೂರು ಆಸ್ಪತ್ರೆಗೆ ದಾಖಲು





ನೆಲ್ಯಾಡಿ: ಕಡಬ ತಾಲೂಕಿನ ಶಿರಾಡಿ ಗ್ರಾಮದ ಗುಂಡ್ಯ ಸಮೀಪ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಬೈಕ್ವೊಂದು ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರದಂದು ಸಂಜೆ ಸಂಭವಿಸಿದೆ.
ಅಪಘಾತದಲ್ಲಿ ಬೈಕ್ ಸವಾರ ಉಪ್ಪಾರಪಳಿಕೆ ನಿವಾಸಿ ಚೇತನ ಕೆ. ಎಂಬವರು ಗಾಯಗೊಂಡಿದ್ದಾರೆ.
ಹುಸೈನ್ ಸಾಬ್ ಅವರು ಲಾರಿಯಲ್ಲಿ ಕಲ್ಲಿದ್ದಲು ತುಂಬಿಸಿಕೊಂಡು ಸಕಲೇಶಪುರ–ಹಾಸನ ಮಾರ್ಗವಾಗಿ ಬಳ್ಳಾರಿಗೆ ತೆರಳುತ್ತಿದ್ದರು. ಗುಂಡ್ಯ ಸಮೀಪ ಹೆದ್ದಾರಿಯ ತಿರುವಿನಲ್ಲಿ ಸಾಗುತ್ತಿದ್ದ ವೇಳೆ ಎದುರಿನಿಂದ ಬಂದ ಬೈಕ್ ಸವಾರನು ರಸ್ತೆಯ ಎಡಭಾಗದಲ್ಲಿ ಸಂಚರಿಸುವ ಬದಲು ಬಲಭಾಗದಲ್ಲಿ ಬೈಕ್ ಚಲಾಯಿಸಿಕೊಂಡು ಬಂದಿದ್ದು, ನಿಯಂತ್ರಣ ತಪ್ಪಿ ಬೈಕ್ ನೆಲಕ್ಕೆ ಬಿದ್ದು ರಸ್ತೆಯಲ್ಲಿ ಎಳೆಯುತ್ತಾ ಬಂದು ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಪಘಾತದ ಪರಿಣಾಮ ಬೈಕ್ ಸವಾರನ ತಲೆ ಹಾಗೂ ಮುಖಕ್ಕೆ ತೀವ್ರ ಗಾಯಗಳಾಗಿದ್ದು, ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಎನ್ನಲಾಗಿದೆ. ಸ್ಥಳೀಯರ ನೆರವಿನಿಂದ ಗಾಯಾಳುವಿಗೆ ಪ್ರಾಥಮಿಕ ಉಪಚಾರ ನೀಡಿ, ಬಳಿಕ ಅಂಬ್ಯುಲೆನ್ಸ್ ಮೂಲಕ ನೆಲ್ಯಾಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಬೈಕ್ ಜಖಂಗೊಂಡಿದ್ದು, ಲಾರಿಯ ಕೆಳಭಾಗದ ಬಂಪರ್ಗೂ ಹಾನಿಯಾಗಿದೆ.
ಘಟನೆ ಕುರಿತು ಧಾರವಾಡ ಜಿಲ್ಲೆ ಅಣ್ಣಿಗೇರಿ ನಿವಾಸಿ ಲಾರಿ ಚಾಲಕ ಹುಸೈನ್ ಸಾಬ್ ಅಲಿ ಸಾಬ್ ಮಾಲದಾರ(48) ಅವರು ದೂರು ನೀಡಿದ್ದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.









































































































