




ಕಡಬ: ಕಡಬ ತಾಲೂಕು ಶ್ರೀ ವಿಶ್ವಕರ್ಮ ಸಮಾಜ ಅಭ್ಯುದಯ ಸೇವಾ ಟ್ರಸ್ಟ್ ಮತ್ತು ಶ್ರೀ ವಿಶ್ವಕರ್ಮ ಸಂಘ ಕಡಬ ಇದರ ಆಶ್ರಯದಲ್ಲಿ ಆಯೋಜಿಸಲಾಗಿದ್ದ 5ನೇ ವರ್ಷದ ಶ್ರೀ ವಿಶ್ವಕರ್ಮ ಆರಾಧನ ಮಹೋತ್ಸವ, ಧಾರ್ಮಿಕ ಸಭೆ ಹಾಗೂ ಸಮ್ಮಾನ ಸಮಾರಂಭವು ಕಡಬದ ವಿಶ್ವಕರ್ಮ ಸಮಾಜ ಮಂದಿರದಲ್ಲಿ ಜರಗಿತು.
ಪುತ್ತೂರು ಕುಟ್ಟಿನೋಪಿನಡ್ಕ ಸರಕಾರಿ ಹಿ.ಪ್ರಾ.ಶಾಲೆಯ ಶಿಕ್ಷಕಿ ಸುನೀತಾ ಶಿವಾನಂದ ಆಚಾರ್ಯ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ಕಡಬ ಶ್ರೀ ವಿಶ್ವಕರ್ಮ ಸಮಾಜ ಅಭ್ಯುದಯ ಸೇವಾ ಟ್ರಸ್ಟ್ನ ನಿವೇಶನ ನಿರ್ವಹಣ ಸಮಿತಿಯ ಸಂಚಾಲಕ ಪ್ರಕಾಶ್ ಆಚಾರ್ಯ ವಿದ್ಯಾನಗರ ಶುಭಹಾರೈಸಿದರು.
ಕಡಬ ಶ್ರೀ ವಿಶ್ವಕರ್ಮ ಸಮಾಜ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮಣ ಆಚಾರ್ಯ ಗೋಳಿಯಡ್ಕ ಅವರು ಮುಖ್ಯಅತಿಥಿಯಾಗಿ ಆಗಮಿಸಿದ್ದರು. ಕಡಬ ವಿಶ್ವಕರ್ಮ ಕೂಡುವಳಿ ಮೊಕ್ತೇಸರ ಅಚ್ಯುತ ಆಚಾರ್ಯ ಪಿಜಕಳ, ಕಡಬ ಶ್ರೀ ವಿಶ್ವಕರ್ಮ ಭಜನ ಮಂಡಳಿಯ ಅಧ್ಯಕ್ಷ ಅಚ್ಯುತ ಆಚಾರ್ಯ ಪಾಲೋಳಿ, ಕಡಬ ಶ್ರೀ ವಿಶ್ವಕರ್ಮ ಸಮಾಜ ಸೇವಾ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷೆ ಸರೋಜಿನಿ ಎಸ್. ಆಚಾರ್ಯ ಉಪಸ್ಥಿತರಿದ್ದರು.
ಯಕ್ಷಗಾನ ಕಲಾವಿದ ಲಕ್ಷ್ಮಣ ಆಚಾರ್ಯ ಎಡಮಂಗಲ ಹಾಗೂ ಜ್ಯೋತಿಷಿ ಜನಾರ್ದನ ಆಚಾರ್ಯ ರಾಮಕುಂಜ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಕಡಬ ಶ್ರೀ ವಿಶ್ವಕರ್ಮ ಸಮಾಜ ಅಭ್ಯುದಯ ಸೇವಾ ಟ್ರಸ್ಟ್ನ ಅಧ್ಯಕ್ಷ ಕೆ.ಎಸ್. ದಿನೇಶ್ ಆಚಾರ್ಯ ಕಡಬ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಟ್ರಸ್ಟ್ನ ಕಾರ್ಯದರ್ಶಿ ಉಮೇಶ್ ಆಚಾರ್ಯ ಗೋಳಿಯಡ್ಕ ಸಮ್ಮಾನಿತರನ್ನು ಪರಿಚಯಿಸಿದರು. ಮಮತಾ ದಿನೇಶ್ ಆಚಾರ್ಯ ನಿರೂಪಿಸಿ, ಕೋಶಾಧಿಕಾರಿ ಸುರೇಶ್ ಆಚಾರ್ಯ ಕೊರಂದೂರು ವಂದಿಸಿದರು. ಕಡಬ ಶ್ರೀ ವಿಶ್ವಕರ್ಮ ಭಜನ ಮಂಡಳಿಯಿಂದ ಭಜನೆ ಹಾಗೂ ಶ್ರೀ ಕಾಳಿಕಾಂಬ ಸಂಗೀತ ಗಾನ ವೈಭವ ತಂಡದಿಂದ ಭಕ್ತಿ ಗಾನಸುಧೆ ನಡೆಯಿತು.









































































































