




ಕೊಕ್ಕಡ : ಕಾಡಾನೆ ದಾಳಿಯಿಂದ ಮೃತಪಟ್ಟ ರೆಖ್ಯ ಗ್ರಾಮದ ಬಾಲಕೃಷ್ಣ ಗೌಡ ಅವರ ಮನೆಗೆ ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಸೋಮವಾರದಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮೃತರ ಪುತ್ರಿ ಯಕ್ಷತಾ ಅವರೊಂದಿಗೆ ಸಂಸದರು ಮಾತುಕತೆ ನಡೆಸಿ, ಧೈರ್ಯದಿಂದ ಕುಟುಂಬವನ್ನು ಮುನ್ನಡೆಸುವಂತೆ ಸಲಹೆ ನೀಡಿದರು. ಕುಟುಂಬದ ಕಷ್ಟದ ಸಂದರ್ಭದಲ್ಲಿ ತಾವು ಹಾಗೂ ತಮ್ಮ ತಂಡ ಸದಾ ನೆರವಿಗೆ ಇರುವುದಾಗಿ ಭರವಸೆ ನೀಡಿದರು.
ಕುಟುಂಬದ ಪ್ರಸ್ತುತ ಪರಿಸ್ಥಿತಿ ಹಾಗೂ ಯಕ್ಷತಾ ಅವರ ಮುಂದಿನ ಭವಿಷ್ಯದ ಕುರಿತು ಸಂಸದರು ವಿಶೇಷವಾಗಿ ವಿಚಾರಿಸಿದರು. ಕುಟುಂಬಕ್ಕೆ ಅಗತ್ಯವಿರುವ ನೆರವು, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆಯೂ ಕುಟುಂಬಸ್ಥರಿಂದ ಮಾಹಿತಿ ಪಡೆದರು.
ಮೃತ ಬಾಲಕೃಷ್ಣ ಗೌಡ ಅವರ ಕುಟುಂಬಕ್ಕೆ ಸಾಧ್ಯವಿರುವ ನೆರವು ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಸಂಸದರು ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ನವೀನ್ ರೆಖ್ಯ, ಬೇಬಿ ಕಿರಣ್, ಚೇತನ್ ಕೊಳೆಚ್ಚಾವು, ಹರ್ಷಿತ್ ಊರ್ನಡ್ಕ, ರಕ್ಷಿತ್ ಇಡ್ಮಾಲ್, ಅಖಿಲ್ ರೆಖ್ಯ, ಧನಂಜಯ ಪರ್ಣಡ್ಕ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.









































































































