


ನೆಲ್ಯಾಡಿ: ಬಲ್ಯ ಗ್ರಾಮದ ಹಿರಿಯರಾದ ಪನ್ನಾಡಿ ನಿವಾಸಿ ಹೊನ್ನಪ್ಪ ಗೌಡ ಪನ್ಯಾಡಿ (94) ಅವರು ವಯೋಸಹಜ ಅನಾರೋಗ್ಯದಿಂದ ಭಾನುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಹೊನ್ನಪ್ಪ ಗೌಡ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಉಡುಪಿಯ ಕೆನರಾ ಹೈಸ್ಕೂಲ್ ಹಾಗೂ ಮಂಗಳೂರಿನಲ್ಲಿ ಅಧ್ಯಾಪಕರಾಗಿ ಸುಮಾರು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬಳಿಕ ಗ್ರಾಮಸೇವಕರಾಗಿ ಸೇವೆಗೆ ಸೇರ್ಪಡೆಗೊಂಡು ಬಾಗಲಕೋಟೆ, ನೆಲ್ಯಾಡಿ, ಕಲ್ಲುಗುಡ್ಡೆ, ಕಲ್ಮಡ್ಕ ಹಾಗೂ ಸುಳ್ಯ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಒಟ್ಟು 26 ವರ್ಷಗಳ ಕಾಲ ಗ್ರಾಮಸೇವಕರಾಗಿ ಜನಸೇವೆ ಸಲ್ಲಿಸಿದ ಅವರು, ಬಳಿಕ ಸ್ವಯಂ ನಿವೃತ್ತಿ ಪಡೆದಿದ್ದರು.
ವೃತ್ತಿ ಜೀವನದ ಜೊತೆಗೆ ಕೃಷಿಯಲ್ಲಿಯೂ ವಿಶೇಷ ಆಸಕ್ತಿ ಹೊಂದಿದ್ದ ಅವರು ಉತ್ತಮ ಕೃಷಿಕರಾಗಿ ಗುರುತಿಸಿಕೊಂಡಿದ್ದರು. ಸರಳ ಸ್ವಭಾವ ಹಾಗೂ ಸೇವಾ ಮನೋಭಾವದ ಮೂಲಕ ಊರಿನಲ್ಲಿ ಹಿರಿಯರಾಗಿ ಗೌರವಕ್ಕೆ ಪಾತ್ರರಾಗಿದ್ದರು.
ಮೃತರು ಪುತ್ರರಾದ ನೆಲ್ಯಾಡಿಯ ಸಿವಿಲ್ ಇಂಜಿನಿಯರ್ ಹಾಗೂ ಗುತ್ತಿಗೆದಾರ ಚಂದ್ರಹಾಸ ಪನ್ಯಾಡಿ , ಶಶಿಧರ, ಬಾಲಚಂದ್ರ, ಗಿರೀಶ್ ಹಾಗೂ ಪುತ್ರಿಯರಾದ ಪ್ರೇಮಾವತಿ, ಯಶೋಧ ಮತ್ತು ತೀಲಾವತಿ ಅವರನ್ನು ಅಗಲಿದ್ದಾರೆ.








































































































