ಮೂರು–ನಾಲ್ಕು ವರ್ಷಗಳಿಂದ ಉಲ್ಬಣಿಸಿದ ಮಾನವ–ವನ್ಯಜೀವಿ ಸಂಘರ್ಷ; ಆರು ಜೀವಹಾನಿ, ನಿರಂತರ ಬೆಳೆ ನಾಶ, ಶಾಶ್ವತ ಪರಿಹಾರಕ್ಕೆ ರಾಜ್ಯ ಸರಕಾರದ ವಿಶೇಷ ಕಾರ್ಯಯೋಜನೆ ಅಗತ್ಯ







ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ರೈತರ ಬದುಕು ಆತಂಕದ ಅಂಚಿಗೆ ತಲುಪಿದೆ. ಕಳೆದ ಮೂರು–ನಾಲ್ಕು ವರ್ಷಗಳಿಂದ ಕಾಡಾನೆಗಳ ಸಂಚಾರ ಹಾಗೂ ಕೃಷಿ ತೋಟಗಳ ಮೇಲಿನ ದಾಳಿ ಗಣನೀಯವಾಗಿ ಹೆಚ್ಚಿದ್ದು, ಒಂದೆಡೆ ಅಪಾರ ಪ್ರಮಾಣದ ಬೆಳೆ ನಷ್ಟವಾಗುತ್ತಿದ್ದರೆ, ಮತ್ತೊಂದೆಡೆ ಮಾನವ ಜೀವಕ್ಕೂ ಅಪಾಯ ಎದುರಾಗಿದೆ. ಹೀಗಾಗಿ ಇದು ಕೇವಲ ಅರಣ್ಯ ಇಲಾಖೆಯ ಸಮಸ್ಯೆಯಲ್ಲ; ರಾಜ್ಯ ಸರಕಾರ ತುರ್ತಾಗಿ ಮಧ್ಯಪ್ರವೇಶಿಸಬೇಕಾದ ಗಂಭೀರ ಮಾನವ–ವನ್ಯಜೀವಿ ಸಂಘರ್ಷವಾಗಿದೆ.
ಪುದುಬೆಟ್ಟು, ಕಳಂಜ, ನಿಡ್ಲೆ, ಅರಸಿನಮಕ್ಕಿ, ರೆಖ್ಯ, ಶಿಶಿಲ, ಕಾಪಿನಬಾಗಿಲು, ಕೌಕ್ರಾಡಿ, ಪಟ್ಟೂರು, ಸಿಬಂತಿ ಸೇರಿದಂತೆ ತಾಲೂಕಿನ ಹಲವು ಪ್ರದೇಶಗಳಲ್ಲಿ ಕಾಡಾನೆಗಳು ತೋಟಗಳಿಗೆ ನುಗ್ಗಿ ಬಾಳೆ, ಅಡಿಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಧ್ವಂಸಗೊಳಿಸುತ್ತಿವೆ. ರೈತರು ವರ್ಷಗಟ್ಟಲೆ ಶ್ರಮಪಟ್ಟು ಬೆಳೆಸಿದ ತೋಟವನ್ನು ಒಂದೇ ರಾತ್ರಿ ಆನೆಗಳ ಹಿಂಡು ನಾಶಪಡಿಸುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ.
ಒಂದು ಕಾಲದಲ್ಲಿ ಕಾಡಿನಂಚಿನಲ್ಲಿ ಅಪರೂಪಕ್ಕೆ ಕಾಣಿಸಿಕೊಂಡು ಮತ್ತೆ ಕಾಡಿನೊಳಗೆ ಮರಳುತ್ತಿದ್ದ ಕಾಡಾನೆಗಳು ಇದೀಗ ಗ್ರಾಮೀಣ ಜನರ ದಿನನಿತ್ಯದ ಆತಂಕವಾಗಿ ಪರಿಣಮಿಸಿವೆ. ಸಂಜೆ ಬಳಿಕ ತೋಟಗಳಿಗೆ ತೆರಳಲು ಜನರು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾತ್ರಿ ಆನೆಗಳ ಸಂಚಾರದ ಶಬ್ದ ಕೇಳಿದರೆ ಇಡೀ ಕುಟುಂಬ ಆತಂಕದಿಂದ ಕಳೆಯಬೇಕಾದ ಸ್ಥಿತಿ ಇದೆ.
ಆರು ಜೀವಹಾನಿ; ಇನ್ನೆಷ್ಟು ದುರಂತ ಬೇಕು?
ಮಾನವ–ಕಾಡಾನೆ ಸಂಘರ್ಷದ ಅತ್ಯಂತ ಆತಂಕಕಾರಿ ಬೆಳವಣಿಗೆ ಜೀವಹಾನಿ. ಬೆಳ್ತಂಗಡಿ ತಾಲೂಕಿನಲ್ಲಿ 3 ಹಾಗೂ ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ 3 ಸೇರಿದಂತೆ ಒಟ್ಟು ಆರು ಮಂದಿ ಕಾಡಾನೆ ದಾಳಿಗೆ ಸಂಬಂಧಿಸಿದಂತೆ ಮೃತಪಟ್ಟಿರುವ ಉಲ್ಲೇಖಗಳಿವೆ. ಜೀವಹಾನಿಯಾದ ಬಳಿಕ ಪರಿಹಾರ ನೀಡುವುದು ಮಾತ್ರ ಸರಕಾರದ ಕರ್ತವ್ಯವಾಗಬಾರದು. ಜೀವಹಾನಿಯೇ ಸಂಭವಿಸದಂತೆ ಮುನ್ನೆಚ್ಚರಿಕಾ ವ್ಯವಸ್ಥೆ ರೂಪಿಸುವುದು ಆಡಳಿತದ ಮೊದಲ ಆದ್ಯತೆಯಾಗಬೇಕು.
ಆನೆ ಓಡಿಸುವ ಕಾರ್ಯಾಚರಣೆ ನಡೆಯುತ್ತಿದೆ; ಆದರೆ ಸಮಸ್ಯೆ ಮಾತ್ರ ಮರಳುತ್ತಿದೆ:
ಅರಣ್ಯ ಇಲಾಖೆ ಹಾಗೂ ಎಲಿಫೆಂಟ್ ಟಾಸ್ಕ್ ಫೋರ್ಸ್ ಸಿಬ್ಬಂದಿ ಆನೆಗಳ ಚಲನವಲನ ಪತ್ತೆಹಚ್ಚಿ ಅವುಗಳನ್ನು ಕಾಡಿನತ್ತ ಓಡಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಿಬ್ಬಂದಿಯ ಪ್ರಯತ್ನ ಶ್ಲಾಘನೀಯವಾದರೂ, ಒಂದು ಪ್ರದೇಶದಿಂದ ಓಡಿಸಿದ ಆನೆಗಳು ಮತ್ತೊಂದು ಪ್ರದೇಶಕ್ಕೆ ತೆರಳಿ ಮತ್ತೆ ಕೆಲವೇ ದಿನಗಳಲ್ಲಿ ಅದೇ ಭಾಗಕ್ಕೆ ಮರಳುತ್ತಿರುವುದರಿಂದ ಮೂಲ ಸಮಸ್ಯೆ ಬಗೆಹರಿಯುತ್ತಿಲ್ಲ.
ರಾಜ್ಯ ಸರಕಾರ ವಿಶೇಷ ಕಾರ್ಯಯೋಜನೆ ರೂಪಿಸಲಿ:
ಕಾಡಾನೆಗಳು ಪದೇಪದೇ ಗ್ರಾಮಗಳತ್ತ ಬರುತ್ತಿರುವುದಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ವೈಜ್ಞಾನಿಕ ಅಧ್ಯಯನ ಅಗತ್ಯವಾಗಿದೆ. ಕಾಡಿನೊಳಗೆ ಆಹಾರ ಮತ್ತು ನೀರಿನ ಕೊರತೆಯೇ? ಆನೆಗಳ ಸಾಂಪ್ರದಾಯಿಕ ಸಂಚಾರ ಮಾರ್ಗಗಳಿಗೆ ಅಡ್ಡಿಯಾಗಿದೆಯೇ? ರಸ್ತೆ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳ ಪರಿಣಾಮವೇ? ಕಾಡಿನೊಳಗಿನ ಮಾನವ ಚಟುವಟಿಕೆ ಹೆಚ್ಚಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಬೇಕು.
ಬೆಳ್ತಂಗಡಿ, ಕಡಬ ಮತ್ತು ಪುತ್ತೂರು ತಾಲೂಕಿನ ಸಂಘರ್ಷಪೀಡಿತ ಪ್ರದೇಶಗಳನ್ನು ಗುರುತಿಸಿ ಆನೆಗಳ ಸಂಚಾರದ ನಕ್ಷೆ ಸಿದ್ಧಪಡಿಸಬೇಕು. ಯಾವ ಗ್ರಾಮಗಳಲ್ಲಿ ಎಷ್ಟು ಬಾರಿ ಆನೆಗಳು ಕಾಣಿಸಿಕೊಂಡಿವೆ, ಯಾವ ಮಾರ್ಗದಲ್ಲಿ ಸಂಚರಿಸುತ್ತಿವೆ, ಯಾವ ಸಮಯದಲ್ಲಿ ದಾಳಿ ಹೆಚ್ಚಾಗಿದೆ ಎಂಬ ಮಾಹಿತಿಯನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಅಪಾಯದ ಪ್ರದೇಶಗಳನ್ನು ಗುರುತಿಸಬೇಕು. ಅಪಾಯದ ಪ್ರದೇಶಗಳಲ್ಲಿ ಆನೆ ಕಂದಕ, ಸೌರ ಬೇಲಿ ಸೇರಿದಂತೆ ಸೂಕ್ತ ತಡೆ ವ್ಯವಸ್ಥೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು. ಕಾಡಿನೊಳಗಿನ ನೀರಿನ ಮೂಲಗಳ ಪುನರುಜ್ಜೀವನ, ಆಹಾರ ಸಸ್ಯಗಳ ಸಂರಕ್ಷಣೆ ಹಾಗೂ ಆನೆಗಳ ನೈಸರ್ಗಿಕ ಸಂಚಾರ ಮಾರ್ಗಗಳ ರಕ್ಷಣೆಗೆ ಆದ್ಯತೆ ನೀಡಬೇಕು. ಎಲಿಫೆಂಟ್ ಟಾಸ್ಕ್ ಫೋರ್ಸ್‌ಗೆ ಅಗತ್ಯ ಸಿಬ್ಬಂದಿ, ವಾಹನ, ಸಂವಹನ ಹಾಗೂ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಬೇಕು.
ರಾಜ್ಯ ಅರಣ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಸಂಘರ್ಷಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರೊಂದಿಗೆ ನೇರವಾಗಿ ಚರ್ಚಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಮಾನವ–ಕಾಡಾನೆ ಸಂಘರ್ಷದ ಕುರಿತು ತಜ್ಞರ ಸಮಿತಿ ರಚಿಸಿ, ಕಾಲಮಿತಿಯೊಳಗೆ ವೈಜ್ಞಾನಿಕ ಅಧ್ಯಯನ ನಡೆಸಿ ಶಾಶ್ವತ ಕಾರ್ಯಯೋಜನೆ ರೂಪಿಸುವ ಅಗತ್ಯವಿದೆ.
ಇದೀಗ ಬೆಳ್ತಂಗಡಿ ತಾಲೂಕಿನ ಗ್ರಾಮಸ್ಥರು ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸರಕಾರ ಹಾಗೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿರುವುದನ್ನು ಮನಗಂಡು ಆಕ್ರೋಶಗೊಂಡಿದ್ದಾರೆ. ನಿರಂತರವಾಗಿ ಬೆಳೆ ನಷ್ಟ ಅನುಭವಿಸುತ್ತಿರುವ ರೈತರು ಹಾಗೂ ಗ್ರಾಮಸ್ಥರು ಸಭೆ ಸೇರಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಹೋರಾಟಕ್ಕೆ ಸಜ್ಜಾಗಿದ್ದಾರೆ. ಕಾಡಾನೆಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ತುರ್ತಾಗಿ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ.
ಡಿಎಫ್‌ಒ ಮಟ್ಟದಲ್ಲಿ ಪ್ರತ್ಯೇಕ ಕಾರ್ಯಯೋಜನೆ ಅಗತ್ಯ:
ದಕ್ಷಿಣ ಕನ್ನಡ ಜಿಲ್ಲೆಯ ಕಾಡಾನೆ ಸಮಸ್ಯೆ ಪೀಡಿತ ಪ್ರದೇಶಗಳಿಗೆ ಡಿಎಫ್‌ಒ ಮಟ್ಟದಲ್ಲಿ ಪ್ರತ್ಯೇಕ ಕಾರ್ಯಯೋಜನೆ ರೂಪಿಸಬೇಕು. ಬೆಳ್ತಂಗಡಿ, ಕಡಬ ಹಾಗೂ ಪುತ್ತೂರು ತಾಲೂಕಿನ ಆನೆ ದಾಳಿ ಗ್ರಾಮಗಳ ಸಂಪೂರ್ಣ ದಾಖಲೆ ಸಿದ್ಧಪಡಿಸಿ, ಆನೆಗಳ ಸಂಚಾರ, ದಾಳಿ ಹೆಚ್ಚಾಗುವ ಸಮಯ, ಬೆಳೆ ಹಾನಿ ಹಾಗೂ ಸಂಚಾರ ಮಾರ್ಗಗಳನ್ನು ಗುರುತಿಸಬೇಕು. ಇದರ ಆಧಾರದಲ್ಲಿ ಅಪಾಯದ ಗ್ರಾಮಗಳನ್ನು ವರ್ಗೀಕರಿಸಿ, ಹೆಚ್ಚು ಅಪಾಯಕಾರಿ ಪ್ರದೇಶಗಳಲ್ಲಿ ಶಾಶ್ವತ ತಡೆ ಕ್ರಮಗಳನ್ನು ಮೊದಲ ಹಂತದಲ್ಲೇ ಜಾರಿಗೊಳಿಸಬೇಕು. ಜೊತೆಗೆ ಎಲಿಫೆಂಟ್ ಟಾಸ್ಕ್ ಫೋರ್ಸ್‌ಗೆ ಅಗತ್ಯ ಸಿಬ್ಬಂದಿ, ವಾಹನ, ಸಂವಹನ ಮತ್ತು ತಾಂತ್ರಿಕ ಸೌಲಭ್ಯ ಒದಗಿಸಿ ರಾತ್ರಿ ಕಾರ್ಯಾಚರಣೆಯನ್ನು ಬಲಪಡಿಸಬೇಕು.
ಕಾಡಾನೆಗಳ ಹಾವಳಿಯನ್ನು ಇನ್ನು ಕೇವಲ ಬೆಳೆ ನಾಶದ ಪ್ರಕರಣವೆಂದು ಪರಿಗಣಿಸುವಂತಿಲ್ಲ. ಇದು ರೈತರ ಆರ್ಥಿಕ ಭದ್ರತೆ, ಗ್ರಾಮೀಣ ಜನರ ಜೀವ ಸುರಕ್ಷತೆ ಹಾಗೂ ಮಾನವ–ವನ್ಯಜೀವಿ ಸಹಬಾಳ್ವೆಯ ಪ್ರಶ್ನೆಯಾಗಿದೆ. ಮತ್ತೊಂದು ಜೀವಹಾನಿ ಅಥವಾ ಬೆಳೆ ನಾಶವಾದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ ರಾಜ್ಯ ಸರಕಾರ ಈಗಲೇ ವಿಶೇಷ ಕಾರ್ಯಯೋಜನೆ ರೂಪಿಸಿ, ಬೆಳ್ತಂಗಡಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸಂಘರ್ಷಪೀಡಿತ ಪ್ರದೇಶಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ.
-ಜಯರಾಮ ನೆಲ್ಲಿತ್ತಾಯ, ಪರಿಸರ ಪ್ರೇಮಿ, ಶಿಶಿಲ
ಗಿಡ ನೆಟ್ಟು, ಗೊಬ್ಬರ ಹಾಕಿ, ಕೂಲಿ ನೀಡಿ ವರ್ಷಗಟ್ಟಲೆ ಬೆಳೆ ಬೆಳೆಸುತ್ತೇವೆ. ಒಂದು ರಾತ್ರಿ ಆನೆಗಳು ತೋಟಕ್ಕೆ ನುಗ್ಗಿದರೆ ನಮ್ಮ ಎಲ್ಲಾ ಶ್ರಮ ನಾಶವಾಗುತ್ತದೆ. ಪರಿಹಾರ ಬಂದರೂ ನಾವು ಕಳೆದುಕೊಂಡ ಆದಾಯ ಸಂಪೂರ್ಣವಾಗಿ ಮರಳಿ ಬರುವುದಿಲ್ಲ. ಪ್ರತಿವರ್ಷ ಇದೇ ಭಯದಲ್ಲಿ ಕೃಷಿ ಮಾಡುವಂತಾಗಿದೆ. ಸರಕಾರ ಪರಿಹಾರ ನೀಡುವುದರ ಜತೆಗೆ ಆನೆಗಳು ತೋಟಕ್ಕೆ ಬರದಂತೆ ಶಾಶ್ವತ ವ್ಯವಸ್ಥೆ ಮಾಡಬೇಕು.
-ಅರವಿಂದ ಭಟ್, ಮುಂಡೂರುಪಳಿಕೆ-ಕೊಕ್ಕಡ, ಕೃಷಿಕರು
ರಾತ್ರಿ ಆನೆಗಳು ಬಂದಾಗ ತೋಟಕ್ಕೆ ಹೋಗುವುದಕ್ಕೂ ಭಯವಾಗುತ್ತದೆ. ಮಕ್ಕಳು, ವೃದ್ಧರನ್ನು ಮನೆಯಿಂದ ಹೊರಗೆ ಕಳುಹಿಸಲು ಆತಂಕವಾಗುತ್ತದೆ. ನಮ್ಮ ಬದುಕಿನ ಆಧಾರವೇ ಕೃಷಿ. ಬೆಳೆ ರಕ್ಷಣೆ ಆಗದಿದ್ದರೆ ರೈತರು ಕೃಷಿಯನ್ನೇ ಬಿಟ್ಟುಬಿಡುವ ಪರಿಸ್ಥಿತಿ ಬರಬಹುದು. ಅಧಿಕಾರಿಗಳು ಆನೆಗಳನ್ನು ಓಡಿಸುವುದಕ್ಕಷ್ಟೇ ಸೀಮಿತವಾಗದೆ, ಅವು ಪದೇಪದೇ ಗ್ರಾಮಕ್ಕೆ ಬರುವ ಕಾರಣ ಪತ್ತೆಹಚ್ಚಿ ಶಾಶ್ವತ ಪರಿಹಾರ ಕಲ್ಪಿಸಬೇಕು.
-ಶ್ರೀರಾಜು ಕೆ ಶಿಶಿಲ, ಕೃಷಿಕರು





ನೆಲ್ಯಾಡಿ: ಮರಕ್ಕೆ ಅಟೋರಿಕ್ಷಾ ಡಿಕ್ಕಿ; ನಾಲ್ವರಿಗೆ ಗಾಯ
ನೆಲ್ಯಾಡಿ: ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಸಲ್ಲಿಸಿದ ದೂರುಗಳ ಸಮಗ್ರ ಪರಿಶೀಲನೆಗೆ ಎಸ್ ಡಿಪಿಐ ಆಗ್ರಹ
ಶಿಶಿಲ-ಬೈರಾಪುರ ರಸ್ತೆ ಪರಿಶೀಲನೆ: ಹಸಿರು ಮಾದರಿ ರಸ್ತೆಯಾಗಿ ಅಭಿವೃದ್ಧಿಗೆ ಚಿಂತನೆ
ಪುತ್ತೂರು: ಶಿವಳ್ಳಿ ಯುವ ಸಂಪದ ವತಿಯಿಂದ ಕಲಾ ಮೇಳ – “ವಸುಧೈವ ಕುಟುಂಬಕಂ”
ಪಟ್ರಮೆ : ಕೋಳಿ ಅಂಕಕ್ಕೆ ಪೊಲೀಸ್ ದಾಳಿ
ನೆಲ್ಯಾಡಿ: ದಿ.ಜಯಾನಂದ ಬಂಟ್ರಿಯಾಲ್ಗೆ ಯಕ್ಷಗಾನ ತಾಳಮದ್ದಳೆಯ ಮೂಲಕ ನುಡಿನಮನ
ಕಳೆಂಜ: ರೂ.65 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಆಯುಷ್ಮಾನ್ ಆರೋಗ್ಯ- ಕ್ಷೇಮ ಕೇಂದ್ರ ಕಟ್ಟಡಕ್ಕೆ ಶಿಲಾನ್ಯಾಸ
ಶಿಶಿಲ: ರೂ.4 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮಹರ್ಷಿ ವಾಲ್ಮೀಕಿ ಆದಿವಾಸಿ ಶಾಲೆಯ ಉದ್ಘಾಟನೆ
ಕೊಕ್ಕಡ: ರೂ.83 ಲಕ್ಷದ ನೂತನ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರ ಉದ್ಘಾಟನೆ
ಉಜಿರೆ: ಮೌಲ್ಯ ನಾಯಕ್ ಗೆ ಸಂಸ್ಕೃತ ಒಲಂಪಿಯಾಡ್ ನಲ್ಲಿ ಸ್ವರ್ಣ ಪದಕ
ರೆಖ್ಯ: ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡ ಮನೆಗೆ ಸಂಸದ ಬ್ರಿಜೇಶ್ ಚೌಟ ಭೇಟಿ
ಸೌತಡ್ಕ: ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸಂಸದ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ ಭೇಟಿ
ಶಿಬಾಜೆ: ಶಿವಪ್ಪ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ
ಕಡಬ: ಬಯೋ ಮೆಡಿಕಲ್ ಎಂಜಿನಿಯರಿಂಗ್ ಅಂತಿಮ ಪರೀಕ್ಷೆಯಲ್ಲಿ ಕಡಬದ ನಿತೀಶ್ಗೆ 3ನೇ ರ್ಯಾಂಕ್
ನೇಲ್ಯಡ್ಕ: ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶೆರ್ಲಿ ಅವರಿಗೆ ಸನ್ಮಾನ
ರಾಮಕುಂಜ: ಪದವಿಪೂರ್ವ ಕಾಲೇಜಿನ ರಕ್ಷಾ ಡಿ. ಹೆಸರಿಗೆ ವಿಶ್ವ ದಾಖಲೆ ಗರಿ
ಉಜಿರೆ: ಶಿಕ್ಷಣ ಮತ್ತು ಆರೋಗ್ಯ ಎಲ್ಲರಿಗೂ ಸಿಗುವುದೇ ಸರಕಾರದ ಆಶಯ: ಎಸ್ ಎಲ್ ಭೋಜೇಗೌಡ
ನೂಜಿಬಾಳ್ತಿಲ: ಜ್ಞಾನವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ ಸಮಾರಂಭ
ನೆಲ್ಯಾಡಿ: ಜೆಸಿಐ ಘಟಕಕ್ಕೆ ವಲಯಾಧ್ಯಕ್ಷರ ಅಧಿಕೃತ ಭೇಟಿ
ಟ್ಯಾಂಕರ್ಗೆ ಬೈಕ್ ಡಿಕ್ಕಿ; ಸವಾರ ಸ್ಥಳದಲ್ಲೇ ಮೃತ
ಶಿಶಿಲ: 4 ಕೋಟಿ ಖರ್ಚಾದ್ರೂ ಮೂಲಸೌಕಯ್ಯ ಕೊರತೆ!
ಬಂಟ್ವಾಳ: ತಲವಾರು, ಕಬ್ಬಿಣದ ರಾಡ್ನಿಂದ ವ್ಯಕ್ತಿಗೆ ಹಲ್ಲೆ: ಮೂವರ ಬಂಧನ
ನೆಲ್ಯಾಡಿ: ಬಸ್ ನಿಲ್ದಾಣಕ್ಕೆ ಎಕ್ಸ್ಪ್ರೆಸ್ ಬಸ್ಗಳ ಪ್ರವೇಶಕ್ಕೆ ಆಗ್ರಹ; ಎಸ್ಡಿಪಿಐ ವತಿಯಿಂದ ಅಧಿಕಾರಿಗಳಿಗೆ ಮನವಿ
ಅಕ್ರಮ ಮರಳುಗಾರಿಕೆ: 3 ಟಿಪ್ಪರ್, ಜೆಸಿಬಿ ಸಹಿತ 4 ಮಂದಿ ವಶಕ್ಕೆ
ನೆಲ್ಯಾಡಿ: ಯು-ಟರ್ನ್ ವಿಚಾರಕ್ಕೆ ಮರುಜೀವ; ಎನ್ಎಚ್ಎಐ ಅಧಿಕಾರಿಗಳಿಂದ ಸ್ಥಳ ತಾಂತ್ರಿಕ ಪರಿಶೀಲನೆ
ನಿಡ್ಲೆ: ಗೌರಿ ದೇವಾಡಿಗ ನಿಧನ
ಶಿಶಿಲ–ಬೈರಾಪುರ ರಸ್ತೆ ಹೋರಾಟ ಸಮಿತಿ ಸಭೆ; ಮುಂದಿನ ಹಂತದ ಹೋರಾಟದ ರೂಪುರೇಷೆ ಕುರಿತು ಚರ್ಚೆ
ನೆಲ್ಯಾಡಿ: ಸಣ್ಣಂಪಾಡಿ ಚಿನ್ನಮ್ಮ ನಿಧನ
ಸೆ.27 ರಂದು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಉಚಿತ ಬಂಜೆತನ ಚಿಕಿತ್ಸಾ ಶಿಬಿರ
ಬೆಳ್ತಂಗಡಿ: ಲಿಂಗ ಸಮಾನತಾ ಪ್ರೇರಕ ತಂಡದ ಸದಸ್ಯರಿಗೆ ಸಾಮರ್ಥ್ಯ ವರ್ಧನಾ ತರಬೇತಿ
ಕರ್ನಾಟಕ ರಾಜ್ಯದ ಮಾಜಿ ಸೈನಿಕರ ಸಮಸ್ಯೆಗಳ ಕುರಿತು ಗೃಹ ಸಚಿವರೊಂದಿಗೆ ಸಮಗ್ರ ಚರ್ಚೆ
ಶಿಶಿಲ: ದಂಪತಿಯ ದುರಂತ ಅಂತ್ಯ; ಪತ್ನಿಯ ಶವ ಕೆರೆಯಲ್ಲಿ ಪತ್ತೆಯಾದ 5 ದಿನಗಳ ಬಳಿಕ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ನೆಲ್ಯಾಡಿ: ನಿವೃತ್ತ ಉಪತಹಶೀಲ್ದಾರ್ ಗುಡ್ಡಪ್ಪ ಶೆಟ್ಟಿ ನಿಧನ
ಗೋಳಿತ್ತೊಟ್ಟು: ಕಸ್ತೂರಿ ರಂಗನ್ ವರದಿ ಕುರಿತ ವಿಶೇಷ ಗ್ರಾಮಸಭೆ ಕರಡು ಅಧಿಸೂಚನೆಗೆ ಗ್ರಾಮಸ್ಥರಿಂದ ವಿರೋಧ-ನಿರ್ಣಯ
ಮರ್ದಾಳ: ಪಾಲೆತಡ್ಕ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ
ನೆಲ್ಯಾಡಿ : ನಿವೃತ್ತ ಅರಣ್ಯ ರಕ್ಷಕ ಶೀನಪ್ಪ ಗೌಡ ನಿಧನ
ವಾಳ್ಯ: ದಂತ ಮಾಹಿತಿ ಶಿಬಿರ, ಶಾಲಾ ಕೈತೋಟ ಉದ್ಘಾಟನೆ
ಕಡಬ: ಶ್ರೀ ವಿಶ್ವಕರ್ಮ ಆರಾಧನ ಮಹೋತ್ಸವ, ಧಾರ್ಮಿಕ ಸಭೆ
ಗುಂಡ್ಯ: ಲಾರಿಗೆ ಬೈಕ್ ಡಿಕ್ಕಿ: ಸವಾರನಿಗೆ ಗಂಭೀರ ಗಾಯ
ಕೌಕ್ರಾಡಿ: ಹಾಲು ಉತ್ಪಾದಕರ ಸಂಘಕ್ಕೆ ₹2.53 ಲಕ್ಷ ನಿವ್ವಳ ಲಾಭ
ಸಾಣೂರು: ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು–ಬಸ್ ನಡುವೆ ಅಪಘಾತ; ಇಬ್ಬರಿಗೆ ಗಾಯ
ನೆಲ್ಯಾಡಿ: ಅಲ್ ಬದ್ರಿಯಾ ವಿದ್ಯಾ ಸಂಸ್ಥೆಯಲ್ಲಿ ‘ಬ್ರೇಜ್ ಆಫ್ ಮದೀನಾ ಮಿಲಾದ್ ಫೆಸ್ಟ್ 2026’ ಕಾರ್ಯಕ್ರಮ
ನೆಲ್ಯಾಡಿ: ಸರಣಿ ಅಪಘಾತ: ಮದ್ಯದ ಲೋಡ್ ತುಂಬಿದ್ದ ಲಾರಿ ಪಲ್ಟಿ
ನೆಲ್ಯಾಡಿ: ಇಲಾಖಾವಾರು ಅಧಿಕಾರಿಗಳ ಗೈರು: ಕೌಕ್ರಾಡಿ ಗ್ರಾಮ ಪಂಚಾಯಿತಿನ ಗ್ರಾಮಸಭೆ ಮುಂದೂಡಿಕೆ
ನೆಲ್ಯಾಡಿ: ಉಚಿತ ಆರೋಗ್ಯ ತಪಾಸಣಾ ಶಿಬಿರ
ನೆಲ್ಯಾಡಿ: ಜೇಸಿಐಯಿಂದ ಆಶ್ರಮ ಭೇಟಿ; ಹಣ್ಣು-ಹಂಪಲು ವಿತರಣೆ
ನೆಲ್ಯಾಡಿ: ಪ್ರಗತಿ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕ ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ
ತುಳುಭಾಷೆಗೆ ಮಾನ್ಯತೆ: ಕಡಬದಲ್ಲಿ ಸಂಭ್ರಮಾಚರಣೆ
ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷಾ ಮಾನ್ಯತೆ ಘೋಷಣೆ
ಶಿಶಿಲ: ಗುಂಡಿಕ್ಕಾಡಿನಲ್ಲಿ ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆ
ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಸಾಮೂಹಿಕ ದೀಪ ಬೆಳಗಿಸಿ ವಿಶೇಷ ಪ್ರಾರ್ಥನೆ
ನೆಲ್ಯಾಡಿ: ಜಿಲ್ಲಾ ಮಟ್ಟದ ನೆಟ್ಬಾಲ್ ಪಂದ್ಯಾಟದಲ್ಲಿ ಕಾಂಚನ ಪ್ರೌಢಶಾಲೆಗೆ ದ್ವಿತೀಯ ಸ್ಥಾನ
ಕೊಕ್ಕಡ: ಶಿಶಿಲ–ಬೈರಾಪುರ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಆಗ್ರಹ; ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಸ್ತೆ ಹೋರಾಟ ಸಮಿತಿಯಿಂದ ಮನವಿ
ಬಿಳಿನೆಲೆ: ಪಂಚಾಯತ್ ಗ್ರಂಥಾಲಯಗಳಿಗೆ ಪುಸ್ತಕ ಕೊಡುಗೆ
ಕೊಕ್ಕಡ: ಒಂಟಿ ಬದುಕಿನ ಹೊನ್ನಮ್ಮಗೆ ಆಸರೆಯಾದ ಸೇವಾ ತಂಡ -ನೆರವು ಹಸ್ತಾಂತರ
ನೆಲ್ಯಾಡಿ: ಜೆಸಿಐ ಸಪ್ತಾಹ: ಮನೋರಂಜನಾ ಆಟೋಟ, “ಮಾತಿನೊಂದಿಗೆ ರುಚಿ” ಹಾಗೂ ಜೀವನ ಸಮತೋಲನ ತರಬೇತಿ
ಮನಸ್ಸನ್ನು ಬೆಳಗಿಸುವ ಹತ್ತು ಹೆಜ್ಜೆಗಳು; “ದಶಲಕ್ಷಣ ಪರ್ವ” – ಆಚರಣೆಯಾಚೆಗಿನ ಆತ್ಮಪರಿಶೀಲನೆಯ ಪಯಣ
ಕಡಬ: ಕರಾವಳಿಯಲ್ಲಿ ನಡೆಯುವ ಸಚಿವ ಸಂಪುಟ ಸಭೆ ಅಭಿವೃದ್ಧಿಗೆ ಹೊಸ ದಿಕ್ಕು: ಅಭಿಲಾಷ್ ಪಿ.ಕೆ.
ವಿಟ್ಲ: ಶ್ರೀ ಭಗವತಿ ದೇವಸ್ಥಾನದಲ್ಲಿ ‘ಸಾಂಸ್ಕೃತಿಕ ಕಾರ್ಯಕ್ರಮ’
ಶಿಶಿಲ: ವಿಜೃಂಭಣೆಯ ಸಾರ್ವಜನಿಕ ಗಣೇಶೋತ್ಸವ
ನೆಲ್ಯಾಡಿ: ಅಲ್ಫಾ ಪ್ರಿಮಿಯರ್ ಲೀಗ್: ಬಿಳಿನೆಲೆ ಬ್ಲಾಸ್ಟರ್ಸ್ ಚಾಂಪಿಯನ್
ನೆಲ್ಯಾಡಿ: ಬೆಥನಿ ಐಟಿಐನಲ್ಲಿ ಅಭಿಯಂತರರ ದಿನಾಚರಣೆ
ಶಿಶಿಲ: 7ನೇ ಕರಡು ಅಧಿಸೂಚನೆ ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಪ್ರತಿಭಟನೆ
ನೆಲ್ಯಾಡಿ: ವಿಶ್ವವಿದ್ಯಾಲಯ ಕಾಲೇಜಿನ ಶಿಕ್ಷಕ-ರಕ್ಷಕ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ನೆಲ್ಯಾಡಿ: ಅಲ್ಪಕಾಲದ ಅನಾರೋಗ್ಯದಿಂದ ಮರಿಯಮ್ಮ ಕೆ.ಸಿ.ನಿಧನ
ನೇರ್ಲದಲ್ಲಿ ಭಕ್ತಿ ಸಡಗರದಿಂದ ಜರುಗಿದ 14ನೇ ವರ್ಷದ ಗಣೇಶೋತ್ಸವ
ಸೌತಡ್ಕ: ಬಯಲು ಆಲಯ ಗಣಪನ ಸನ್ನಿಧಿಯಲ್ಲಿ ಗಣೇಶ ಚತುರ್ಥಿ ಸಂಭ್ರಮ
ಅರಣ್ಯ ಹುತಾತ್ಮರ ದಿನಾಚರಣೆಯ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ
ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರ ಸಂಘದ ಮಹಾಸಭೆ
ಕಾಂಚನ: 29ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ
ಶಿಶಿಲ: ಸೃಷ್ಟಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ
ಕೊಕ್ಕಡ: ಕಾರು–ಬಸ್ ಮುಖಾಮುಖಿ ಡಿಕ್ಕಿ: ಹಲವರಿಗೆ ಗಾಯ
ಇಚ್ಲಂಪಾಡಿ:36 ವರ್ಷಗಳ ಸೇವೆಯ ಬಳಿಕ ಅಂಗನವಾಡಿ ಕಾರ್ಯಕರ್ತೆ ಶಾಲಿ ಕೆ.ಕೆ. ನಿವೃತ್ತಿ
ಪುದುವೆಟ್ಟು: ಕಸ್ತೂರಿರಂಗನ್ ವರದಿ ವಿರುದ್ಧ ಪ್ರತಿಭಟನೆ; 7ನೇ ಕರಡು ಅಧಿಸೂಚನೆ ವಿರೋಧಿಸಿ ಆಕ್ಷೇಪಣಾ ಪತ್ರ ಸಲ್ಲಿಕೆ
ಶಿಶಿಲ: ಚಂದ್ರಪುರ ಜಿನಮಂದಿರದಲ್ಲಿ ಶ್ರಾವಣ ಶುಕ್ರವಾರದ ವಿಶೇಷ ಪೂಜೆ
ನೆಲ್ಯಾಡಿ: ವಿದ್ಯಾರ್ಥಿಗಳಿಗೆ ನಾಯಕತ್ವ ತರಬೇತಿ ಕಾರ್ಯಕ್ರಮ
ಸ್ಕೂಟರ್‌ಗೆ ಬೈಕ್ ಡಿಕ್ಕಿ: ನೆಲ್ಯಾಡಿಯ ಮಹಿಳೆಗೆ ಗಾಯ
ನೆಲ್ಯಾಡಿ: ಗಣೇಶೋತ್ಸವದ ಅಂಗವಾಗಿ ನೆಲ್ಯಾಡಿ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಶೌರ್ಯ ಸ್ವಯಂಸೇವಕರಿಂದ ಸ್ವಚ್ಛತಾ ಶ್ರಮದಾನ
ಶಿರಾಡಿ: ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಪ್ರತಿಭಟನೆ -ಮನವಿ ಸಲ್ಲಿಕೆ
ನೆಲ್ಯಾಡಿ: ಜಯಾನಂದ ಬಂಟ್ರಿಯಾಲ್ ನುಡಿನಮನ ಕಾರ್ಯಕ್ರಮ
ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪೋಕ್ಸ್ ಪ್ರಕರಣದ ಆರೋಪಿ ಕಾಪಿನಬಾಗಿಲು ರಮೇಶನ ಬಂಧನ; 14 ದಿನ ನ್ಯಾಯಾಂಗ ಬಂಧನ
ಸೆ.12ರಂದು ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ಮಹಾಸಭೆ – ವಿಕಲಚೇತನರಿಗಾಗಿ ‘ಆಸರೆ’ ಕಾರ್ಯಕ್ರಮ
ಪುದುವೆಟ್ಟು: ಬಾವಿಗೆ ಹಾರಿ ಯುವತಿ ಆತ್ಮಹತ್ಯೆ
ನೆಲ್ಯಾಡಿ: ವ್ಯಸನ ಮುಕ್ತ ಭಾರತ: ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ
ಕಡಬ: ಸುಸ್ಥಿರ ಸಮಾಜಕ್ಕಾಗಿ ಹೆಜ್ಜೆ; ನಿವೃತ್ತ ಸೈನಿಕರು ಮತ್ತು ಜೇಸಿ ಸದಸ್ಯರಿಂದ ಕಾಲ್ನಡಿಗೆ ಜಾಥಾ
ಉದನೆ: ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಯಲ್ಲಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ
ನೆಲ್ಯಾಡಿಯಲ್ಲಿ ಯು-ಟರ್ನ್‌ಗಾಗಿ ಬೃಹತ್ ಪ್ರತಿಭಟನೆ
ಕೊಕ್ಕಡ: ಸಂತ ಜೋನರ ದೇವಾಲಯದಲ್ಲಿ ತೆನೆ ಹಬ್ಬ
ಕೌಕ್ರಾಡಿ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಮನವಿ
ನೆಲ್ಯಾಡಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಬೀಳ್ಕೊಡುಗೆ
ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಗೋಳಿತ್ತೊಟ್ಟು ಗ್ರಾಮಸ್ಥರ ಪ್ರತಿಭಟನೆ
ನೆಲ್ಯಾಡಿ: ಪ್ರಾಥಮಿಕ ಆರೋಗ್ಯ ಕೇಂದ್ರದ ಇಬ್ಬರು ಸಿಬ್ಬಂದಿಗೆ ಮುಂಬಡ್ತಿ, ವರ್ಗಾವಣೆ
ನಾಳೆ ನೆಲ್ಯಾಡಿಯಲ್ಲಿ ಯು-ಟರ್ನ್‌ಗಾಗಿ ಬೃಹತ್ ಪ್ರತಿಭಟನೆ
ಗೋಳಿತ್ತೊಟ್ಟು: ಅನಾರೋಗ್ಯದಿಂದ 2ನೇ ತರಗತಿ ಬಾಲಕ ನಿಧನ
ಉಪ್ಪಿನಂಗಡಿ: ದ್ವಿತೀಯ ದರ್ಜೆ ಸಹಾಯಕಿ ಉಷಾಕಿರಣ ಅವರಿಗೆ ಬೀಳ್ಕೊಡುಗೆ
ನೆಲ್ಯಾಡಿ ಜೆಸಿ ಸಪ್ತಾಹಕ್ಕೆ ಚಾಲನೆ; ಆಟೋ ಚಾಲಕರಿಗೆ ಸ್ಟೀಲ್ ಬಾಟಲ್ ವಿತರಣೆ
ಬಜತ್ತೂರು ಶೌರ್ಯ ತಂಡದ ಮಾನವೀಯ ಸೇವೆ; ಬಡಮಹಿಳೆಗೆ ನೂತನ ಮನೆ ಹಸ್ತಾಂತರ
ಕಾಂಚನ ಶಾಲೆಯ ಹ್ಯಾಂಡ್‌ಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಅರಸಿನಮಕ್ಕಿ: ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವಾರ್ಷಿಕ ಮಹಾಸಭೆ: 1.69ಕೋಟಿ ಲಾಭ 13% ಡಿವಿಡೆಂಟ್
ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 75ರ ಸಂಭ್ರಮ




































































































