ಉಪ್ಪಿನಂಗಡಿ, ಕಡಬ, ಧರ್ಮಸ್ಥಳ ಠಾಣೆಗಳ ವ್ಯಾಪ್ತಿಯ ಗ್ರಾಮಗಳ ಪ್ರಕರಣಗಳ ವಿವರ ಕೋರಿಕೆ | ಜನಸಂಖ್ಯೆ, ಪ್ರಕರಣಗಳ ಸಂಖ್ಯೆ, ಠಾಣೆ ವ್ಯಾಪ್ತಿ ಬದಲಾವಣೆಯ ಮಾಹಿತಿಗೂ ಒತ್ತು







ನೆಲ್ಯಾಡಿ: ನೆಲ್ಯಾಡಿಯಲ್ಲಿ ಶಿರಾಡಿ ಹೊರ ಠಾಣೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯ ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ, ಕಡಬ, ಧರ್ಮಸ್ಥಳ ಪೊಲೀಸ್ ಠಾಣೆ ಹಾಗೂ ಶಿರಾಡಿ ಹೊರ ಠಾಣೆಯ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಕುರಿತು ಸಮಗ್ರ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಸಂಗ್ರಹಿಸಲಾಗುತ್ತಿದೆ.
ನೆಲ್ಯಾಡಿಯಲ್ಲಿ ಶಿರಾಡಿ ಭಾಗದ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸುತ್ತಮುತ್ತಲಿನ ಗ್ರಾಮಗಳ ಅಪರಾಧ ಪ್ರಕರಣಗಳ ಸ್ವರೂಪ, ಪ್ರಕರಣಗಳ ಸಂಖ್ಯೆ, ಜನಸಂಖ್ಯೆ ಹಾಗೂ ಪ್ರಸ್ತುತ ಪೊಲೀಸ್ ಠಾಣೆಗಳ ವ್ಯಾಪ್ತಿಯ ವಿವರಗಳನ್ನು ಒಟ್ಟುಗೂಡಿಸಲಾಗುತ್ತಿದೆ. ಇದಕ್ಕಾಗಿ 2023, 2024, 2025 ಹಾಗೂ 2026ನೇ ಸಾಲಿನ ಇಲ್ಲಿಯವರೆಗಿನ ಪ್ರಕರಣಗಳ ಮಾಹಿತಿಯನ್ನು ಪ್ರತ್ಯೇಕವಾಗಿ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ.
ಸಂಗ್ರಹಿಸಲಾಗುತ್ತಿರುವ ಮಾಹಿತಿಯಲ್ಲಿ ಭಾರತೀಯ ದಂಡ ಸಂಹಿತೆ/ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳು, ಅಪರಾಧ ಪ್ರಕ್ರಿಯಾ ಸಂಹಿತೆ/ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ವ್ಯಾಪ್ತಿಯ ಪ್ರಕರಣಗಳು, ವಿಶೇಷ ಮತ್ತು ಸ್ಥಳೀಯ ಕಾಯ್ದೆಗಳಡಿ ದಾಖಲಾಗಿರುವ ಪ್ರಕರಣಗಳು, ನಾಪತ್ತೆ ಪ್ರಕರಣಗಳು, ಅಸ್ವಾಭಾವಿಕ ಸಾವು ಪ್ರಕರಣಗಳು ಹಾಗೂ ಸಣ್ಣಪುಟ್ಟ ಪ್ರಕರಣಗಳ ವಿವರಗಳನ್ನು ಒಳಗೊಂಡಿದೆ. ಇದರೊಂದಿಗೆ ಸಂಬಂಧಪಟ್ಟ ಗ್ರಾಮಗಳ ಜನಸಂಖ್ಯೆಯ ಮಾಹಿತಿಯನ್ನೂ ಪರಿಗಣಿಸಲಾಗುತ್ತಿದೆ. ಕಡಬ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಟ್ಟು 19 ಗ್ರಾಮಗಳ ವಿವರಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ಕಡಬ, ಬಿಳಿನೆಲೆ, ಕೊಂಬಾರು, ನೂಜಿಬಾಳ್ತಿಲ, ಆಲಂಕಾರು, ರಾಮಕುಂಜ, ಕೊಯಿಲ, ಹಳಿನೇರಂಕಿ, ಕುಟ್ರುಪಾಡಿ, 102 ನೆಕ್ಕಿಲಾಡಿ, ಕೊಡಿಯಂಬಾಳ, ಗೋಳ್ತಾಡಿ, ರೆಂಜಿಲಾಡಿ, ಬಂಟ್ರ, ಇಚ್ಲೂರು, ಬಲ್ಯ, ಕುಂತೂರು, ಪೆರಾಜೆ ಹಾಗೂ ಚಾರ್ವಾಕ ಮೊದಲಾದ ಗ್ರಾಮಗಳ ಮಾಹಿತಿಯನ್ನು ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ.
ಅದೇ ರೀತಿ ಧರ್ಮಸ್ಥಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಒಟ್ಟು 18 ಗ್ರಾಮಗಳ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ. ಧರ್ಮಸ್ಥಳ, ಬೆಳಾಲು, ಚಿಬಿದ್ರೆ, ಚಾರ್ಮಾಡಿ, ರೆಖ್ಯ, ಶಿಬಾಜೆ, ಕೊಕ್ಕಡ, ಶಿಶಿಲ ಸೇರಿದಂತೆ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ಅಪರಾಧ ಮತ್ತು ಜನಸಂಖ್ಯಾ ವಿವರಗಳನ್ನು ದಾಖಲಿಸಲಾಗುತ್ತಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಗ್ರಾಮಗಳ ವಿವರಗಳನ್ನೂ ಇದೇ ಮಾದರಿಯಲ್ಲಿ ಪರಿಶೀಲಿಸಲಾಗುತ್ತಿದೆ. ನೆಲ್ಯಾಡಿ, ಕೊಕ್ಕಡ, ಇಚ್ಲಂಪಾಡಿ, ಶಿರಾಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ದಾಖಲಾಗಿರುವ ಪ್ರಕರಣಗಳ ಸ್ವರೂಪವನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.
ನೆಲ್ಯಾಡಿಯಲ್ಲಿ ಶಿರಾಡಿ ಹೊರ ಠಾಣೆಯನ್ನು ಮೇಲ್ದರ್ಜೆಗೇರಿಸುವ ಸಂದರ್ಭದಲ್ಲಿ ಪ್ರಸ್ತುತ ಪೊಲೀಸ್ ಠಾಣೆಗಳ ವ್ಯಾಪ್ತಿಯಿಂದ ಯಾವ ಗ್ರಾಮಗಳನ್ನು ಹೊಸ ಠಾಣೆಯ ವ್ಯಾಪ್ತಿಗೆ ಸೇರಿಸಬಹುದು ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಹೊಸ ಠಾಣೆ ಅಥವಾ ಮೇಲ್ದರ್ಜೆಗೇರಿಸಿದ ಠಾಣೆಯ ವ್ಯಾಪ್ತಿ ನಿಗದಿಪಡಿಸುವ ಸಂದರ್ಭದಲ್ಲಿ ಪ್ರಸ್ತುತ ಠಾಣೆಗಳ ಗಡಿ, ಬೀಟ್ ವ್ಯವಸ್ಥೆ ಹಾಗೂ ಸಿಬ್ಬಂದಿ ನಿರ್ವಹಣೆಯಲ್ಲಿ ಅಗತ್ಯವಿರುವ ಬದಲಾವಣೆಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸುವಂತೆ ಸೂಚಿಸಲಾಗಿದೆ.
ಪ್ರಮುಖವಾಗಿ, ಕೇವಲ ಅಪರಾಧ ಪ್ರಕರಣಗಳ ಸಂಖ್ಯೆಯನ್ನಷ್ಟೇ ಆಧಾರವಾಗಿಸದೆ, ಸಂಬಂಧಪಟ್ಟ ಗ್ರಾಮಗಳ ಜನಸಂಖ್ಯೆ, ಭೌಗೋಳಿಕ ವ್ಯಾಪ್ತಿ ಹಾಗೂ ಪೊಲೀಸ್ ಠಾಣೆಯಿಂದ ಗ್ರಾಮಗಳಿಗೆ ಇರುವ ಸಂಪರ್ಕದಂತಹ ಅಂಶಗಳನ್ನೂ ಪರಿಗಣಿಸುವ ಸಾಧ್ಯತೆ ಇದೆ. ಶಿರಾಡಿ ಘಾಟ್ ಹಾಗೂ ರಾಷ್ಟ್ರೀಯ ಹೆದ್ದಾರಿ-75ರ ಪ್ರಮುಖ ಸಂಚಾರ ಮಾರ್ಗವಾಗಿರುವುದರಿಂದ ಈ ಭಾಗದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವೂ ಇದೆ.
ಪ್ರಸ್ತುತ ದಾಖಲೆಗಳಲ್ಲಿ 2023ರಿಂದ 2026ರವರೆಗಿನ ಪ್ರಕರಣಗಳ ಸಂಖ್ಯೆಯನ್ನು ದಾಖಲಿಸಲು ಪ್ರತ್ಯೇಕ ಕಾಲಂಗಳನ್ನು ಸಿದ್ಧಪಡಿಸಲಾಗಿದ್ದು, ಮಾಹಿತಿ ಪೂರ್ಣಗೊಂಡ ಬಳಿಕ ಸಂಬಂಧಪಟ್ಟ ಗ್ರಾಮಗಳ ಅಪರಾಧ ಸ್ಥಿತಿಗತಿಯ ಸಮಗ್ರ ಚಿತ್ರಣ ಲಭ್ಯವಾಗಲಿದೆ. ಈ ಮಾಹಿತಿಯ ಆಧಾರದ ಮೇಲೆ ಶಿರಾಡಿ ಹೊರಠಾಣೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೆ ಅಗತ್ಯವಾದ ಅಂಕಿ-ಅಂಶಗಳನ್ನು ಸಿದ್ಧಪಡಿಸುವ ಉದ್ದೇಶ ಹೊಂದಲಾಗಿದೆ.
ಶಿರಾಡಿ ಭಾಗದಲ್ಲಿ ಪೊಲೀಸ್ ವ್ಯವಸ್ಥೆ ಬಲಗೊಂಡರೆ ರಾಷ್ಟ್ರೀಯ ಹೆದ್ದಾರಿ-75ರ ಸಂಚಾರ, ಅಪಘಾತ, ಅಪರಾಧ ನಿಯಂತ್ರಣ ಸೇರಿದಂತೆ ಗಡಿ ಪ್ರದೇಶದ ಗ್ರಾಮಗಳ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಪೊಲೀಸ್ ಇಲಾಖೆಯ ಈ ಮಾಹಿತಿ ಸಂಗ್ರಹ ಪ್ರಕ್ರಿಯೆ ಮುಂದಿನ ಹಂತದಲ್ಲಿ ಶಿರಾಡಿ ಹೊರಠಾಣೆಯ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೆ ಯಾವ ರೂಪ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.





ನೆಲ್ಯಾಡಿ:ತೈಕ್ವಾಂಡೋ ಸ್ಪರ್ಧೆಯಲ್ಲಿ ಅಲ್ಬದ್ರಿಯಾ ಇಂಗ್ಲಿಷ್ ಮೀಡಿಯಂ ಶಾಲಾ ವಿದ್ಯಾರ್ಥಿಗಳಿಗೆ ಪದಕ
ನೆಲ್ಯಾಡಿ: ಹಳೆನೇರಂಕಿ ಶಾಲೆಯ ಮೂವರು ವಿದ್ಯಾರ್ಥಿನಿಯರು ಖೋ-ಖೋ ಪಂದ್ಯಾಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ನೆಲ್ಯಾಡಿ: ಶ್ರೀರಾಮ ವಿದ್ಯಾಲಯದಲ್ಲಿ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ
ಗೋಳಿತ್ತೊಟ್ಟು: ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿಯಿಂದ ಪಾದಯಾತ್ರೆ, ಪ್ರತಿಭಟನೆ
ನಿಡ್ಲೆ: ಸಹಕಾರಿ ಸಂಘದಿಂದ ಸಹಕಾರ ಸಪ್ತಾಹ ಆಚರಣೆ
ಅರಸಿನಮಕ್ಕಿ: ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿಗೆ ಗ್ರಹಣ: ಅರಸಿನಮಕ್ಕಿಯಲ್ಲಿ ಬಿಜೆಪಿ ಪ್ರತಿಭಟನೆ
ನೆಲ್ಯಾಡಿ: ಗೌಡಸಾಗು–ಬರೆಗುಡ್ಡೆ ರಸ್ತೆ ಕಾಮಗಾರಿ ಪುನರಾರಂಭಕ್ಕೆ ಅಧಿಕಾರಿಗಳ ಭರವಸೆ
ಪುದುವೆಟ್ಟುವಿನಲ್ಲಿ ಕಾಂಗ್ರೆಸ್ ನ ಮೂವರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
ಕೊಕ್ಕಡ: ಕುಟುಂಬ ಸಮೇತರಾಗಿ ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ
ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ
ನೆಲ್ಯಾಡಿ: ಬೈಲು ಸೇತುವೆ ನಿರ್ಮಾಣಕ್ಕೆ ಚಾಲನೆ: ಶಾಸಕಿ ಭಾಗೀರಥಿ ಮುರುಳ್ಯರಿಂದ ಗುದ್ದಲಿ ಪೂಜೆ
ನೆಲ್ಯಾಡಿ: ಅಯ್ಯಪ್ಪ ಕ್ಷೇತ್ರದಲ್ಲಿ ಮಕರ ಸಂಕ್ರಮಣ ಸಂಭ್ರಮಕ್ಕೆ ಚಾಲನೆ
ಉದನೆ: ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಯಲ್ಲಿ ಪೋಷಕರ ಸಭೆ; ಕ್ರೀಡಾ ಸಾಧಕ ವರುಣ್ಗೆ ಸನ್ಮಾನ
ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಮಾಜಿ ಸಚಿವ ಎಚ್.ಡಿ. ರೇವಣ್ಣ ದಂಪತಿ ಭೇಟಿ
ನೆಲ್ಯಾಡಿ: ಆಲ್-ಬದ್ರಿಯಾ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ನೆಲ್ಯಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಬಿ.ರಮೇಶ್ ಶೆಟ್ಟಿ ಬೀದಿ ನಿರ್ದೇಶಕರಾಗಿ ಅವಿರೋಧ ಆಯ್ಕೆ
ಸೌತಡ್ಕ: ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಬ್ಯಾಂಕ್ ಆಫ್ ಬರೋಡಾ ಸಹಾಯಕ ಪ್ರಧಾನ ವ್ಯವಸ್ಥಾಪಕ ಜೀವನ್ ಭೇಟಿ
ನೆಲ್ಯಾಡಿ: ಚಿಕಿತ್ಸೆಯ ನೆಪದಲ್ಲಿ ಮನೆಗೆ ನುಗ್ಗಿ ವೈದ್ಯ ದಂಪತಿಯನ್ನು ಕಟ್ಟಿಹಾಕಿ ದರೋಡೆ: 10 ವರ್ಷಗಳ ಬಳಿಕ ಆರೋಪಿ ಅರೆಸ್ಟ್!
ನೆಲ್ಯಾಡಿ: ಜಿಲ್ಲಾ–ತಾಲೂಕು ಪಂಚಾಯತ್ ಚುನಾವಣೆಗೆ ಎಸ್.ಡಿ.ಪಿ.ಐ ರಣತಂತ್ರ: ಉಪ್ಪಿನಂಗಡಿ–ಕಡಬ ಬ್ಲಾಕ್ ಸಮಿತಿಯಿಂದ ಚುನಾವಣಾ ಸಿದ್ಧತಾ ಸಭೆ
ಉದನೆ: ದುಶ್ಚಟಗಳಿಗೆ ಗುಡ್ಬೈ ಹೇಳಿ, ಭವಿಷ್ಯಕ್ಕೆ ಸ್ವಾಗತ ಕೋರಿ: ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪದ ಸಂದೇಶ!
ನೆಲ್ಯಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಉಷಾ ಅಂಚನ್, ಸರ್ವೋತ್ತಮ ಗೌಡರಿಗೆ ಸನ್ಮಾನ
ನೆಲ್ಯಾಡಿ: ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರದ ಚಿಂತನೆ: ಗ್ರಾಮ ಪಂಚಾಯಿತಿಯಲ್ಲಿ ಮಹತ್ವದ ಸಭೆ
ಸೌತಡ್ಕ: ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ನಟ ಜಗ್ಗೇಶ್ ಭೇಟಿ
ನೆಲ್ಯಾಡಿ: ಕರ್ನಾಟಕ ರಾಜ್ಯ ಮ್ಯಾಂಗೋ ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ನಿರ್ದೇಶಕರಾಗಿ ಸರ್ವೋತ್ತಮ ಗೌಡ ನೆಲ್ಯಾಡಿ ನೇಮಕ
ಕಡಬ: ಬಿಜೆಪಿಯ ಪ್ರತಿಭಟನೆ ರಾಜಕೀಯ ಗಿಮಿಕ್, ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ
ಬಲ್ಯ: ನಿವೃತ್ತ ಗ್ರಾಮಸೇವಕ ಹೊನ್ನಪ್ಪ ಗೌಡ ಪನ್ಯಾಡಿ ನಿಧನ
ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ಕಾಮಧೇನು ಗೋಶಾಲೆಯಲ್ಲಿ ಗೋಪೂಜೆ
ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರಿ ಸಂಘದಲ್ಲಿ ದೀಪಾವಳಿ ಸಂಭ್ರಮ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಶಿಶಿಲ: ಚಂದ್ರಪುರ ಕ್ಷೇತ್ರದಲ್ಲಿ ಮಹಾವೀರ ಸ್ವಾಮಿಯ ನಿರ್ವಾಣ ಕಲ್ಯಾಣೋತ್ಸವ
ಸ್ಪಂದನ ಚಾರಿಟೇಬಲ್ ಟ್ರಸ್ಟ್ನ ವತಿಯಿಂದ ‘ಸ್ಪಂದನ ಆರೋಗ್ಯ ನಿಧಿ’ ಯೋಜನೆಯಡಿ ಆರ್ಥಿಕ ನೆರವು
ಬೆಳ್ತಂಗಡಿ: ಸರಣಿ ಅಪಘಾತಕ್ಕೆ ಇಬ್ಬರು ಯುವಕರು ಬಲಿ
ಮಾಣಿ ಜಂಕ್ಷನ್ನಲ್ಲಿ ಸಿನಿಮೀಯ ಅಟ್ಟಹಾಸ: ಬೊಲೆರೋ ಬಾನೆಟ್ ಮೇಲೆ ಹಾರಿ ಜೀವ ಉಳಿಸಿಕೊಂಡ ಯುವಕ; ಆರೋಪಿ ಜೈಲಿಗೆ!
ನೆಲ್ಯಾಡಿಯಲ್ಲಿ ಬೈಕ್ಗಳ ಮುಖಾಮುಖಿ ಡಿಕ್ಕಿ: ಸವಾರ ನೌಸರ್ ದುರ್ಮರಣ! ಮತ್ತೋರ್ವ ಸವಾರನಿಗೆ ಗಾಯ!
ನೆಲ್ಯಾಡಿ: ಸಂಯುಕ್ತ ಕ್ರಿಸ್ಮಸ್ ಆಚರಣೆಗೆ ಸಿದ್ಧತೆ: ನೂತನ ಪದಾಧಿಕಾರಿಗಳ ಆಯ್ಕೆ
ನೆಲ್ಯಾಡಿ: ಅಲ್ ಬದ್ರಿಯಾ ಶಾಲೆಯಲ್ಲಿ ಪುಟಾಣಿಗಳ ಆಹಾರ ಮೇಳ
ನೆಲ್ಯಾಡಿ: ಪಟ್ಟೆ ಪ್ರದೇಶದ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ
ಕಳಪ್ಪಾರು: ಶಾಲೆಯ ಸ್ವಚ್ಛತೆಗೆ ಶೌರ್ಯ ಸ್ವಯಂಸೇವಕರ ಶ್ರಮದಾನ: ಕೈತೋಟ ನಿರ್ಮಾಣ
ಅಡ್ಡಹೊಳೆ: ಸಾವಿನ ದವಡೆಯಿಂದ ಜಸ್ಟ್ ಮಿಸ್! ಕಾರಿನ ಮೇಲೆ ಉರುಳಿದ ಕಂಟೈನರ್, ಫ್ಯಾಮಿಲಿ ಸೇಫ್!
ಪ್ರೇಮಿಯನ್ನೇ ಕೊಲ್ಲಲು ಯತ್ನಿಸಿದ ಕೊಣಾಜೆಯ ಯುವಕ ಪ್ರಸಾದ್!
ನೆಲ್ಯಾಡಿ: ಸಿಡಿಲು ಬಡಿದು ಮನೆಗೆ ಅಪಾರ ಹಾನಿ; ₹1.5 ಲಕ್ಷ ಮೌಲ್ಯದ ವಸ್ತುಗಳು ನಾಶ
ನೆಲ್ಯಾಡಿ: ₹7 ಕೋಟಿ ವೆಚ್ಚದ ನೂತನ ಸಂತ ಅಲ್ಫೋನ್ಸ ಚರ್ಚ್ಗೆ ಶಿಲಾನ್ಯಾಸ
ನೆಲ್ಯಾಡಿ: ಚರ್ಚ್ ಸಭಾಭವನ ನಿರ್ಮಾಣಕ್ಕೆ ಧರ್ಮಸ್ಥಳದಿಂದ ಆರ್ಥಿಕ ನೆರವು
ಶ್ರಮದ ಹಾದಿಯಲ್ಲಿ ಸ್ವಾವಲಂಬನೆಯ ಹೆಜ್ಜೆ: 44 ವರ್ಷಗಳ ಬದುಕಿನ ಬದಲಾವಣೆಗೆ ಸಾಕ್ಷಿಯಾದ ಅರಸಿನಮಕ್ಕಿ
ಲಾವತ್ತಡ್ಕ: ಕಾರು ಪಲ್ಟಿ; 76 ವರ್ಷದ ವೃದ್ಧ ಸಾವು
ನೆಲ್ಯಾಡಿ: ದೊಂತಿಲ ಶ್ರೀ ಮಹಾವಿಷ್ಣು ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪದಾಧಿಕಾರಿಗಳಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ವಿಜ್ಞಾಪನ ಪತ್ರ ಸಲ್ಲಿಕೆ
ಚಾರ್ಮಾಡಿ : ಸೇತುವೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ನೆಲ್ಯಾಡಿ: ವಲಯ ಸಮ್ಮೇಳನದಲ್ಲಿ ಜೇಸಿಐ ನೆಲ್ಯಾಡಿ ಘಟಕಕ್ಕೆ ಹಲವು ಪ್ರಶಸ್ತಿಗಳು
ನೆಲ್ಯಾಡಿ: ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಕಾರು ಡಿಕ್ಕಿ: ಚಾಲಕ, ಪ್ರಯಾಣಿಕರು ಪಾರು
ಅಳಿಕೆ: ಸತ್ಯಸಾಯಿ ಶಿಕ್ಷಣ ಸಂಸ್ಥೆಗಳಿಂದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ
ನ.5ರಂದು ನೆಲ್ಯಾಡಿ ಸಂತ ಅಲ್ಫೋನ್ಸಾ ಪುಣ್ಯಕ್ಷೇತ್ರದಲ್ಲಿ ನೂತನ ಚರ್ಚ್ ನಿರ್ಮಾಣಕ್ಕೆ ಶಿಲಾನ್ಯಾಸ
ಧರ್ಮಸ್ಥಳ: ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರೊಂದಿಗೆ ವಿಶೇಷ ಸಂವಾದ
ಕಾವು: ನವೋದಯ ಒಕ್ಕೂಟಕ್ಕೆ ‘ಶ್ರೀ ವಿಷ್ಣು ಯುವಸಿರಿ’ ಪ್ರಶಸ್ತಿ
₹15.30 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ; ಬೆಳ್ತಂಗಡಿ ಮೂಲದ ಮಹಿಳೆ ಬಂಧನ
ವೈದ್ಯ ಲೋಕದ ಮಹತ್ಸಾಧನೆ: ನೆಲ್ಯಾಡಿಯಲ್ಲಿ ಪ್ರಥಮ ಬಾರಿಗೆ ಸೊಂಟದ ಕೀಲು ಶಸ್ತ್ರಚಿಕಿತ್ಸೆ ಯಶಸ್ವಿ
ಇಚ್ಲಂಪಾಡಿ: ಕೌಕ್ರಾಡಿ ಗ್ರಾ.ಪಂ.ಮಾಜಿ ಸದಸ್ಯ ವಿಶ್ವನಾಥ ವಿಶ್ವನಾಥ ಗೌಡ ಕೊರಮೇರು ನಿಧನ
ಕಡಬ : ಗುಂಡೆಸೆತ ಹಾಗೂ ಚಕ್ರ ಎಸೆತದಲ್ಲಿ ವೈಷ್ಣವಿ ರಾಜ್ಯಮಟ್ಟಕ್ಕೆ
ಸವಣೂರು: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ
ನೆಲ್ಯಾಡಿ: ಗ್ರಿಗೋರಿಯೋಸ್ ಓರ್ಥಡೋಕ್ಸ್ ಸಿರಿಯನ್ ಚರ್ಚ್ ವಾರ್ಷಿಕ ಹಬ್ಬಕ್ಕೆ ಧ್ವಜಾರೋಹಣ
ಕೊಕ್ಕಡ: ಪಿಲಿ ನಲಿಕೆ–2026 ಆಮಂತ್ರಣ ಪತ್ರಿಕೆ ಬಿಡುಗಡೆ
ನೆಲ್ಯಾಡಿ: ಕ್ಯಾಂಪ್ಕೋ ಸಾಂತ್ವನ ಯೋಜನೆಯಡಿ ₹50 ಸಾವಿರ ಆರ್ಥಿಕ ನೆರವು ಹಸ್ತಾಂತರ
ನೆಲ್ಯಾಡಿ: ಕೊಪ್ಪ ಮೋರ್ ಗ್ರಿಗೋರಿಯೋಸ್ ಚಾಪೆಲ್ನಲ್ಲಿ 124ನೇ ಓರ್ಮಪೆರುನ್ನಾಳ್ ಆಚರಣೆ
ನ.4ರಂದು ಅರಸಿನಮಕ್ಕಿಯಲ್ಲಿ ಹಿರಿಯ ಫಲಾನುಭವಿಗಳ ಸಂವಾದ ಕಾರ್ಯಕ್ರಮ
ನೆಲ್ಯಾಡಿ: ಹೊಸಮಜಲು ಶಾಲೆಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ
ಸಮಾಜಸೇವೆಗೆ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ
ಉಪ್ಪಿನಂಗಡಿ: ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮ; ಇಂದ್ರಧನುಷ್ ಪ್ರಶಸ್ತಿ ಪ್ರದಾನ
ಧರ್ಮಸ್ಥಳ: ಸೌಜನ್ಯ ಪ್ರಕರಣದ ಮರುತನಿಖೆ: ಮೃತದೇಹ ಪತ್ತೆಯಾದ ಸ್ಥಳಕ್ಕೆ ಎಸ್ಐಟಿ ಭೇಟಿ
ಉಜಿರೆ : ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣದ ಅಧ್ಯಯನ: ಫಾತಿಮಾ ಸಫೀರಾಗೆ ಪಿಎಚ್.ಡಿ.
ಉಜಿರೆ: ಎಸ್.ಡಿ.ಎಮ್ ಪಿಯು ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ನೆಲ್ಯಾಡಿ: ವಿದ್ಯಾನಗರದಲ್ಲಿ ಯು-ಟರ್ನ್ ನಿರ್ಮಾಣಕ್ಕೆ ಆಗ್ರಹ: ರಾಷ್ಟ್ರೀಯ ಹೆದ್ದಾರಿ ಪ್ರಾದೇಶಿಕ ಅಧಿಕಾರಿಯನ್ನು ಭೇಟಿಯಾದ ಹೋರಾಟ ಸಮಿತಿ
ಸವಣೂರು: ಕಡಬ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆಗೆ ಚಾಲನೆ
ನೆಲ್ಯಾಡಿ: ಶ್ರೀ ಶಾಸ್ತಾರೇಶ್ವರ ದೇವಸ್ಥಾನದಲ್ಲಿ ಧರ್ಮಭ್ಯುದಯ ಧರ್ಮ ಶಿಕ್ಷಣ ತರಗತಿಗಳ ಪ್ರಾರಂಭೋತ್ಸವ
ನೆಲ್ಯಾಡಿ: ರೈತರ ಬೆಳೆ ವಿಮೆ ಬಾಕಿ: ಶೀಘ್ರ ಪಾವತಿಗೆ ಶಾಸಕಿ ಪಟ್ಟು ಬೆಂಗಳೂರಿನಲ್ಲಿ ತೋಟಗಾರಿಕಾ ರಾಜ್ಯ ನಿರ್ದೇಶಕರ ಭೇಟಿ; ಪರಿಹಾರ ಬಿಡುಗಡೆಗೆ ಭರವಸೆ
ಹಣದ ಆಮಿಷವೊಡ್ಡಿ ಪರಿಶಿಷ್ಟ ಜಾತಿಯ ಯುವತಿಗೆ ಲೈಂಗಿಕ ಕಿರುಕುಳ ಆರೋಪ: ಸಯ್ಯದ್ ಮಹಮ್ಮದ್ ಮುಸ್ತಾಕ್ ಬಂಧನ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಸಾಗರ; ದೇವರ ದರ್ಶನಕ್ಕೆ ಮುಗಿಬಿದ್ದ ಭಕ್ತರು
ಶಿರಾಡಿ: ಬರ್ಚಿನಹಳ್ಳದಲ್ಲಿ ಲಾರಿ–ಕಾರಿನ ನಡುವೆ ಭೀಕರ ಅಪಘಾತ; ಕಾರಿನಲ್ಲಿದ್ದ ಮೂವರಿಗೆ ಗಾಯ; ಆಸ್ಪತ್ರೆಗೆ ದಾಖಲು
ಉದನೆ: ವರುಣ್ ಎಂ.ಡಿ. ಓಟದ ಸ್ಪರ್ಧೆಯಲ್ಲಿ ಅಪ್ರತಿಮ ಸಾಧನೆ: ಮೂರು ಚಿನ್ನದ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್
ನೆಲ್ಯಾಡಿ: ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಭಜನಾ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ
ನೆಲ್ಯಾಡಿ: ಮೀಫ್ ಕಾರ್ಯಕಾರಿ ಸಮಿತಿಗೆ ನಾಝಿಂ ಸಾಹೇಬ್ ನೇಮಕ
ಶಿಶಿಲ: ಭಾರಿ ಮಳೆಗೆ ಕುಸಿದ ವೈಕುಂಠಪುರ ಸೇತುವೆ; ತಕ್ಷಣ ದುರಸ್ತಿ ಕಾರ್ಯ
ಅ. 24ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆಲ್ಯಾಡಿ ವಲಯದ ಒಕ್ಕೂಟಗಳ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಪದಗ್ರಹಣ
ನೆಲ್ಯಾಡಿ: ಭಾರೀ ಮಳೆಗೆ ಜಲಾವೃತಗೊಂಡ ಬೆದ್ರೋಡಿ–ಕಾಂಚನ ಕ್ರಾಸ್ ರಾಷ್ಟ್ರೀಯ ಹೆದ್ದಾರಿ!
ಧರ್ಮಸ್ಥಳ: ಛದ್ಮವೇಷ ಸ್ಪರ್ಧೆಯ ಕಲರವ; ವೈವಿಧ್ಯಮಯ ವೇಷಭೂಷಣ
ಬೆಳ್ತಂಗಡಿ: ಸೌಜನ್ಯ ಪ್ರಕರಣದ ಎಸ್ಐಟಿ ಟೀಂ ನ್ಯಾಯಾಲಯಕ್ಕೆ ಆಗಮನ; ಸೌಜನ್ಯ ತಾಯಿ ಕುಸುಮಾವತಿ ಕೂಡ ಹಾಜರು
ಕರ್ನಾಟಕ ಬ್ಯಾಂಕ್ನಿಂದ ಎಸ್ಡಿಎಂ ಶಿಕ್ಷಣ ಸಂಸ್ಥೆಗೆ ಆಂಬುಲೆನ್ಸ್ ಕೊಡುಗೆ
ರೈತರ ಆಕ್ರೋಶ: ಬೆಳೆ ವಿಮೆ ಪರಿಹಾರ ನೀಡದಿದ್ದರೆ ಅ. 27ಕ್ಕೆ ತಹಶೀಲ್ದಾರ್ ಆಫೀಸ್ಗೆ ಮುತ್ತಿಗೆ!
ನೆಲ್ಯಾಡಿ: ಕಾವುನಲ್ಲಿ ಸಾಮೂಹಿಕ ಯೋಗ ದುರ್ಗಾನಮಸ್ಕಾರ, ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ
ನೆಲ್ಯಾಡಿ: ಬಡ ಮಹಿಳೆಯ ವಾತ್ಸಲ್ಯ ಮನೆ ನಿರ್ಮಾಣಕ್ಕೆ ಶೌರ್ಯ ಸ್ವಯಂಸೇವಕರ ಶ್ರಮದಾನ
ನೆಲ್ಯಾಡಿ: ಭೀಕರ ರಸ್ತೆ ಅಪಘಾತ; ಕಾರು–ಗ್ಯಾಸ್ ಟ್ಯಾಂಕರ್ ಡಿಕ್ಕಿ, 16ರ ಹರೆಯದ ವಿದ್ಯಾರ್ಥಿ ಸಾವು
ಉಜಿರೆ: ಧರ್ಮಸ್ಥಳ ಯೋಜನೆಯ ಮಾಜಿ ಹಾಗೂ ನಿವೃತ್ತರ ಕಾರ್ಯಾಗಾರ
ಅ.22ರವರೆಗೆ ದ.ಕ. ಜಿಲ್ಲೆಯಲ್ಲಿ ದಸರಾ ರಜೆ ವಿಸ್ತರಣೆ ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ
ನೆಲ್ಯಾಡಿ: ಸೆಂಟ್ ಅಲ್ಫೋನ್ಸಾ ಚರ್ಚ್ಗೆ ಪ್ರತಿಭಾ ಸಂಗಮ-2026ರಲ್ಲಿ ಸಮಗ್ರ ಪ್ರಶಸ್ತಿ
ಬೆಳ್ತಂಗಡಿ: ಹೈಕೋರ್ಟ್ ನ್ಯಾಯಮೂರ್ತಿ ಉಷಾರಾಣಿಗೆ ಗೌರವ ಸಮರ್ಪಣೆ
ಡಿಜಿಟಲ್ ಜಗತ್ತಿನಲ್ಲಿ ಮಕ್ಕಳು: ‘ಲಾಕ್ಡೌನ್’ ಅಲ್ಲ, ‘ಗೈಡೆನ್ಸ್’ ಬೇಕು!
ಸೌತಡ್ಕ ದೇವಸ್ಥಾನದ ಮುಂಭಾಗದಲ್ಲಿ ಗಲಾಟೆ, ಮಹಿಳೆಯರ ಮೇಲಿನ ಹಲ್ಲೆ ಖಂಡನೀಯ
ಶಿಶಿಲ: ಗುಡ್ಡೆತೋಟದಲ್ಲಿ ಸಿಡಿಲು ಬಡಿದು ಎಂಟು ಮನೆ,ವಿದ್ಯುತ್ ಸಂಪರ್ಕಕ್ಕೆ ಹಾನಿ
ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಆರೋಪ




































































































